ಮಡಿಕೇರಿ: ಕೊಟ್ಟಂಗಡ, ಅಮ್ಮಂಡ ತಂಡಗಳು ಇಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಟೂರ್ನಿ ‘ಮುದ್ದಂಡ ಕಪ್’ನ ಬುಧವಾರದ ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿದವು.

ಇಲ್ಲಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಮೈದಾನದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ, ರಾಹುಲ್ ಪೊನ್ನಣ್ಣ, ಜೋಯಪ್ಪ ತಲಾ 2 ಹಾಗೂ ದೇವಯ್ಯ, ಸಾಯಿ ಬೋಪಣ್ಣ, ಪೊನ್ನಚ್ಚ ತಲಾ 1 ಗೋಲುಗಳ ಬಲದಿಂದ ಕೊಟ್ಟಂಗಡ ತಂಡದವರು 7-0 ಗೋಲುಗಳಿಂದ ಪೊನ್ನಿಮಾಡ ವಿರುದ್ಧ ಜಯಿಸಿದರು.

ಐತಿಚಂಡ ಮತ್ತು ಅಮ್ಮಂಡ ತಂಡಗಳ ಸೆಣಸಾಟದಲ್ಲಿ 11-10 ಗೋಲುಗಳ ಅಂತರದಲ್ಲಿ ಅಮ್ಮಂಡ ತಂಡ ರೋಚಕ ಜಯ ಪಡೆಯಿತು. ಕೋಡಿಮಣಿಯಂಡ ಮತ್ತು ಮಾದಂಡ 1–1ರಿಂದ ಸಮಬಲ ಸಾಧಿಸಿದ್ದವು. ಮಾದಂಡ ತಂಡದವರು ಟೈ ಬ್ರೇಕರ್ನಲ್ಲಿ 7-6 ಗೋಲುಗಳಿಂದ ಗೆಲುವು ಪಡೆದು ಬೀಗಿದರು. ಬೊಳ್ಳೆರ 4-2ರಿಂದ ಚೋಳಂಡ ವಿರುದ್ಧ ಗೆಲುವು ಪಡೆಯಿತು.

ಅಂಜಪರವಂಡ 1-0 ಯಿಂದ ತಿರುಟೆರ ವಿರುದ್ಧ, ಮುಕ್ಕಾಟಿರ (ಬೋಂದ) 3-0ಯಿಂದ ಕೊಚ್ಚೆರ ವಿರುದ್ಧ, ಚಂಗುಲಂಡ 3-0ಯಿಂದ ಮಾತಂಡ ವಿರುದ್ಧ, ಮಂಡೇಟಿರ 4-2 ರಿಂದ ಮೇಚಂಡ ವಿರುದ್ಧ, ಅಮ್ಮಣಿಚಂಡ 4-0ರಿಂದ ಕುಟ್ಟಂಡ (ಕಾರ್ಮಾಡ್) ವಿರುದ್ಧ, ಬೊಳಕಾರಂಡ 2-0ಯಿಂದ ಚಿಲ್ಲವಂಡ ವಿರುದ್ಧ, ಅಜ್ಜಮಾಡ 2-1 ರಿಂದ ಕಂಜಿತಂಡ ವಿರುದ್ಧ, ಮೇರಿಯಂಡ 2-1ರಿಂದ ಬೊಳ್ಳಚಂಡ ವಿರುದ್ಧ, ಕುಟ್ಟಂಡ (ಅಮ್ಮತ್ತಿ) 1-0 ಯಿಂದ ಕನ್ನಂಬೀರ ವಿರುದ್ಧ, ನಾಗಂಡ 3-1 ಯಿಂದ ನಂದೇಟಿರ ವಿರುದ್ಧ, ಕಲಿಯಾಟಂಡ 1-0 ಯಿಂದ ಚೇರಂಡ ವಿರುದ್ಧ, ಮಾಳೇಟಿರ (ಕೆದಮಳ್ಳೂರು) 1-0ಯಿಂದ ಬಾರಿಯಂಡ ವಿರುದ್ಧ, ಮತ್ರಂಡ 2-0 ಯಿಂದ ಸುಳ್ಳಿಮಾಡ ವಿರುದ್ಧ, ಚೋಡುಮಾಡ 2-1 ಯಿಂದ ಕೊಕ್ಕಂಡ ವಿರುದ್ಧ ಗೆಲುವು ಸಾಧಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.