ನವದೆಹಲಿ: ಆರು ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್, ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಅಮಿತ್ ಪಂಗಲ್ ಸೇರಿದಂತೆ ಭಾರತದ 12 ಮಂದಿ ಬಾಕ್ಸರ್‌ಗಳು ಸ್ಪೇನ್‌ನ ಬಾಕ್ಸಮ್ ಬಾಕ್ಸಿಂಗ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್ ಹಂತದಲ್ಲಿದ್ದಾರೆ. ಮಂಗಳವಾರ ಟೂರ್ನಿಯ ಡ್ರಾ ಪ್ರಕಟವಾಗಿದ್ದು, ಸ್ಪರ್ಧಿಗಳ ಸಂಖ್ಯೆ ಕಡಿಮೆ ಇರುವುದರಿಂದ ಇವರೆಲ್ಲರಿಗೂ ನೇರವಾಗಿ ಎಂಟರ ಘಟ್ಟದಲ್ಲಿ ಸ್ಥಾನ ಸಿಕ್ಕಿದೆ.

ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿರುವ ಒಂಬತ್ತು ಹಾಗೂ ಇತರ ಐದು ಮಂದಿ ಸೇರಿದಂತೆ ಭಾರತದ 14 ಬಾಕ್ಸರ್‌ಗಳು ಟೂರ್ನಿಯಲ್ಲಿ ಅದೃಷ್ಟ ಪರೀಕ್ಷಿಸಲಿದ್ದಾರೆ.

ಮಹಿಳೆಯರ 51 ಕೆಜಿ ವಿಭಾಗದಲ್ಲಿ ಮೇರಿ ಕೋಮ್ ಅವರು ಬುಧವಾರ ಮೊದಲ ಬೌಟ್‌ನಲ್ಲಿ ಇಟಲಿಯ ಜಿಯೊರ್ಡಾನ ಸೊರೆಂಟಿನೊ ಅವರ ಎದುರು ಸೆಣಸಲಿದ್ದಾರೆ. ಹೋದ ವರ್ಷ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ ಬಳಿಕ, ಇದೇ ಮೊದಲ ಬಾರಿ ಅವರು ಕಣಕ್ಕಿಳಿಯುತ್ತಿದ್ದಾರೆ.

ಪುರುಷರ 52 ಕೆಜಿ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಪಂಗಲ್, ಸ್ಥಳೀಯ ಬಾಕ್ಸರ್ ಗೇಬ್ರಿಯಲ್ ಎಸ್ಕೋಬಾರ್ ಎದುರು ಪೈಪೋಟಿ ನಡೆಸಲಿದ್ದಾರೆ. ಮೊದಲ ಸುತ್ತಿನಲ್ಲಿ ಅವರಿಗೆ ಬೈ ಸಿಕ್ಕಿದೆ. ವಿಕಾಸ್ ಕೃಷ್ಣ (69 ಕೆಜಿ) ಅವರಿಗೂ ಮೊದಲ ಸುತ್ತಿನಲ್ಲಿ ಬೈ ಲಭಿಸಿದ್ದು, ಎಂಟರ ಘಟ್ಟದ ಹಣಾಹಣಿಯಲ್ಲಿ ಇಟಲಿಯ ವಿನ್ಸೆಂಜೊ ಮ್ಯಾಂಗಿಯಾಕಾಪರ್ ಅವರನ್ನು ಎದುರಿಸಲಿದ್ದಾರೆ.

ಆಶಿಶ್ ಕುಮಾರ್ (75 ಕೆಜಿ), ಸುಮಿತ್ ಸಂಗ್ವಾನ್ (81 ಕೆಜಿ), ಸತೀಶ್ ಕುಮಾರ್ (+91 ಕೆಜಿ), ಸಂಜೀತ್ (91 ಕೆಜಿ) ಮತ್ತು ಮಹಿಳೆಯರ ಪೈಕಿ ಜಾಸ್ಮಿನ್, ಮನೀಷಾ (ಇಬ್ಬರೂ 57 ಕೆಜಿ), ಸಿಮ್ರನ್ ಜೀತ್ ಕೌರ್ (60 ಕೆಜಿ), ಲವ್ಲಿನಾ ಬೊರ್ಗೊಹೈನ್ (69 ಕೆಜಿ), ಪೂಜಾ ರಾಣಿ (75 ಕೆಜಿ) ಅವರು ಎಂಟರ ಘಟ್ಟ ತಲುಪಿದ ಭಾರತದ ಬಾಕ್ಸರ್‌ಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.