ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಕ್ರೀಡಾಕೂಟ | ಅಥ್ಲೆಟಿಕ್ಸ್‌: ಮೋನಿಕಾ, ಪ್ರಸನ್ನಗೆ ಅಗ್ರಸ್ಥಾನ

Published 14 ಅಕ್ಟೋಬರ್ 2023, 4:10 IST
Last Updated 14 ಅಕ್ಟೋಬರ್ 2023, 4:10 IST
ಅಕ್ಷರ ಗಾತ್ರ

ಮೈಸೂರು: ಬೆಳಗಾವಿ ವಿಭಾಗದ ಪ್ರಸನ್ನಕುಮಾರ್‌ ಹಾಗೂ ಬೆಂಗಳೂರು ಗ್ರಾಮಾಂತರ ವಿಭಾಗದ ಮೋನಿಕಾ ರುಕ್ಮಯ್ಯ ಗೌಡ ಅವರು ಇಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಸಿ.ಎಂ ಕಪ್‌ ‍ಪ್ರತಿಭಾನ್ವೇಷಣಾ ದಸರಾ ಕ್ರೀಡಾಕೂಟದ ಅಥ್ಲೆಟಿಕ್ಸ್‌ನ 200 ಮೀಟರ್ಸ್‌ ಓಟದಲ್ಲಿ ಅಗ್ರಸ್ಥಾನ ಪಡೆದರು. 

ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಪ್ರಸನ್ನಕುಮಾರ್ 22.08 ಸೆಕೆಂಡ್‌ಗಳಲ್ಲಿ ಗೆದ್ದರೆ, ನಂತರದ ಸ್ಥಾನವನ್ನು ಬೆಂಗಳೂರು ನಗರ ವಿಭಾಗದ ಈರಯ್ಯ ಹಿರೇಮಠ ಹಾಗೂ ಡಿ.ಸ್ಯಾಮ್ಯುಯೆಲ್‌ ‍ಪಡೆದರು.

ಮಹಿಳಾ ವಿಭಾಗದಲ್ಲಿ ಮೋನಿಕಾ ರುಕ್ಮಯ್ಯ ಗೌಡ 26.21 ಸೆಕೆಂಡ್‌ಗಳಲ್ಲಿ ಗುರಿದಾಟಿ ಚಿನ್ನ ಗೆದ್ದರೆ, ಮೈಸೂರು ವಿಭಾಗದ ಎಚ್‌.ಆರ್‌.ನವಮಿ ದ್ವಿತೀಯ, ಬೆಂಗಳೂರು ಗ್ರಾಮಾಂತರದ ಶಿವಾನಿ ರೈ ಮೂರನೇ ಸ್ಥಾನ ಪಡೆದರು. ಎರಡನೇ ದಿನದ ಅಥ್ಲೆಟಿಕ್ಸ್‌ ಸ್ಪರ್ಧೆಗಳಲ್ಲಿ ಬೆಳಗಾವಿ ಹಾಗೂ ಮೈಸೂರು ವಿಭಾಗದ ಕ್ರೀಡಾಪಟುಗಳು ಪ್ರಾಬಲ್ಯ ಮೆರೆದರು.

ಈಜು ವಿಭಾಗದಲ್ಲಿ ಎರಡನೇ ದಿನವೂ ಬೆಂಗಳೂರು ನಗರ ವಿಭಾಗದ ಸ್ಪರ್ಧಿಗಳು ಮೇಲುಗೈ ಸಾಧಿಸಿದರು. ಪುರುಷರ ವಿಭಾಗದ ಸ್ಪರ್ಧೆಗಳಲ್ಲಿ 4 ಚಿನ್ನ ಗೆದ್ದ ಬೆಂಗಳೂರು ಗ್ರಾಮಾಂತರ ವಿಭಾಗದ ಎಲ್‌.ಮಣಿಕಂಠ, ಮಹಿಳಾ ವಿಭಾಗದಲ್ಲಿ 4 ಚಿನ್ನ 1 ಬೆಳ್ಳಿ ಗೆದ್ದ ಬೆಂಗಳೂರು ನಗರ ವಿಭಾಗದ ವಿ.ಪ್ರೀತಾ 23 ಅಂಕಗಳೊಂದಿಗೆ ವೈಯಕ್ತಿಕ ಪ್ರಶಸ್ತಿ ಪಡೆದುಕೊಂಡರು. 

ಅಥ್ಲೆಟಿಕ್ಸ್ 2ನೇ ದಿನದ ಫಲಿತಾಂಶಗಳು:

ಪುರುಷರ ವಿಭಾಗ: 5,000 ಮೀ. ಓಟ: ಗೋವಿಂದರಾಜ ಹಲಗಿ (ಬೆಳಗಾವಿ)–1, ಎಂ.ನಿತಿನ್ ಕುಮಾರ್ (ಮೈಸೂರು)–2, ಮಣಿಕಂಠ (ಮೈಸೂರು)–3, ಕಾಲ: 15ನಿ. 37.88ಸೆ; 110 ಮೀ. ಹರ್ಡಲ್ಸ್: ದಿಶಾಂತ್‌ (ಬೆಂಗಳೂರು ಗ್ರಾಮಾಂತರ)–1, ಆಕಾಶ್‌ (ಮೈಸೂರು)–2, ಕೆ.ಹರೀಶ್‌ (ಮೈಸೂರು)–3, ಕಾಲ: 16.01 ಸೆ.; ಟ್ರಿಪಲ್‌ ಜಂಪ್‌: ಜಾಫರ್‌ಖಾನ್ ಎಂ. ಸರವಾರ (ಬೆಳಗಾವಿ)–1, ಪಿ.ಆರ್‌.ದರ್ಶನ್‌ (ಮೈಸೂರು)–2, ಬಿ.ನವೀನ್‌ (ಬೆಂಗಳೂರು ನಗರ)–3, ದೂರ: 14.29 ಮೀ. ಶಾಟ್‌ಪಟ್‌: ಗಣೇಶ್‌ ನಾಗಪ್ಪ ಗೌಡ (ಮೈಸೂರು)–1, ರಾಹುಲ್‌ ಆರ್‌.ಸುವರ್ಣ–2, ಇ.ಹೇಮಂತ್ (ಬೆಂ.ಗ್ರಾ)–3, ದೂರ: 13.32 ಮೀ.

ಮಹಿಳೆಯರ ವಿಭಾಗ: 3,000 ಮೀ. ಓಟ: ಕೆ.ಎಂ.ಅರ್ಚನಾ (ಬೆಂಗಳೂರು ನಗರ)–1, ಎನ್‌.ಎಸ್‌.ರೂಪಶ್ರೀ (ಮೈಸೂರು)–2, ಎಸ್‌.ಎಂ.ಸಾನಿಕಾ (ಬೆಂಗಳೂರು ಗ್ರಾಮಾಂತರ)–3, ಕಾಲ: , 10 ನಿ.10.43 ಸೆ.; ಲಾಂಗ್‌ಜಂಪ್: ಶ್ವೇತಾ ಪೂಜಾರಿ (ಮೈಸೂರು)–1, ಕೆ.ಎನ್‌.ಭೂಮಿಕಾ (ಬೆಂ.ಗ್ರಾ)–2, ಛಾರು ವೈಷ್ಣವ್ (ಬೆಂ.ನ)–3, ದೂರ: 5.33 ಮೀ.; ಶಾಟ್‌ಪಟ್‌: ನವ್ಯಾ ಕೆ.ಭಟ್‌ (ಬೆಳಗಾವಿ)–1, ಶಹಜಹನಿ (ಮೈಸೂರು)–2, ಗುಣವರ್ಧಿನಿ (ಕಲಬುರಗಿ)–3, ದೂರ: 10.62 ಮೀ.

ಈಜು 2ನೇ ದಿನದ ಫಲಿತಾಂಶ: 

ಪುರುಷರ ವಿಭಾಗ: 100 ಮೀ. ಫ್ರೀಸ್ಟೈಲ್: ಕೆ.ಕುಶಾಲ್‌ (ಬೆಂಗಳೂರು ನಗರ)–1. ಚಿಂತನ್‌ ಶೆಟ್ಟಿ (ಮೈಸೂರು)–2, ಇದಾಂತ್ ಚತುರ್ವೇದಿ (ಬೆಂ.ನ)–3, ಕಾಲ: 56.23 ಸೆ.; 100 ಮೀ. ಬ್ಯಾಕ್‌ಸ್ಟ್ರೋಕ್: ಬಿ.ಜತಿನ್ (ಬೆಂ.ನ.)–1, ಇದಾಂತ್ ಚತುರ್ವೇದಿ–2, ಸಾತ್ವಿಕ್ ನಾಯಕ್ (ಮೈಸೂರು)–3, ಕಾಲ:1 ನಿಮಿಷ 02.19 ಸೆ.; 200 ಮೀ. ಬ್ರೆಸ್ಟ್‌ಸ್ಟ್ರೋಕ್: ಎಲ್.ಮಣಿಕಂಠ (ಬೆಂ.ಗ್ರಾ)–1, ಸುಯೋಗ್ ಗೌಡ (ಬೆಂ.ನ)–2, ಪ್ರಣವ್ (ಮೈಸೂರು)–3, ಕಾಲ: 2 ನಿ. 33.05 ಸೆ.; 200 ಮೀ. ಫ್ರೀಸ್ಟೈಲ್: ಎಲ್‌.ಮಣಿಕಂಠ–1, ಕೆ.ಕುಶಾಲ್ (ಬೆಂ.ನ)–2, ಸೂರ್ಯ–3; 4x100 ಮೀ ಫ್ರೀಸ್ಟೈಲ್: ಬೆಂಗಳೂರು ನಗರ–1, ಮೈಸೂರು–2, ಬೆಂಗಳೂರು ಗ್ರಾಮಾಂತರ–3, ಕಾಲ: 3 ನಿಮಿಷ 55.38 ಸೆ.

ಮಹಿಳೆಯರ ವಿಭಾಗ: 100 ಮೀ. ಫ್ರೀಸ್ಟೈಲ್: ವಿ.ಪ್ರೀತಾ (ಬೆಂ.ನ)–1, ಎಸ್‌.ಆರ್‌.ರಚನಾ (ಮೈಸೂರು)–2, ಪಿ.ವರ್ಷಾ (ಮೈಸೂರು)–3; 200 ಮೀ. ಬ್ರೆಸ್ಟ್‌ಸ್ಟ್ರೋಕ್: ಸಿ.ಎಂ.ಗಗನಾ (ಬೆಂ.ನ.)–1, ಧೃತಿ (ಬೆಂ.ನ)–2, ಚಿನ್ಮಯಿ (ಬೆಂ.ಗ್ರಾ)–3, ಕಾಲ: 2 ನಿ.33.05 ಸೆ.; 100 ಮೀ. ಬ್ಯಾಕ್‌ಸ್ಟ್ರೋಕ್: ವಿ.ಅದಿತಿ (ಬೆಂ.ನ)–1, ಜಾಹ್ನವಿ ಆರ್‌.ಶೆಟ್ಟಿ (ಬೆಂ.ನ)–2, ಎಂ.ಪೂರ್ವಿ (ಮೈಸೂರು)–3, ಕಾಲ: 1 ನಿ. 16.84 ಸೆ.; 200 ಮೀ. ಫ್ರೀಸ್ಟೈಲ್: ವಿ.ಪ್ರೀತಾ (ಬೆಂ.ನ.)–1, ವಿ.ಅದಿತಿ (ಬೆಂ.ನ)–2, ಎಸ್‌.ಆರ್‌.ರಚನಾ (ಮೈಸೂರು)–3, ಕಾಲ: 2 ನಿ.20.89 ಸೆ.; 4x100 ಮೀ ಫ್ರೀಸ್ಟೈಲ್: ಬೆಂಗಳೂರು ನಗರ–1, ಬೆಂಗಳೂರು ಗ್ರಾಮಾಂತರ–2, ಕಲಬುರಗಿ–3, ಕಾಲ: 4ನಿ. 50.44 ಸೆ.

ಲಾಂಗ್‌ಜಂಪ್‌ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಮೈಸೂರು ವಿಭಾಗದ ಶ್ವೇತಾ ಪೂಜಾರಿ ಜಿಗಿದ ಕ್ಷಣ

ಲಾಂಗ್‌ಜಂಪ್‌ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಮೈಸೂರು ವಿಭಾಗದ ಶ್ವೇತಾ ಪೂಜಾರಿ ಜಿಗಿದ ಕ್ಷಣ

-ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT