ಆಸಾಧಾರಣವಾದದ್ದು. ಅಷ್ಟೇ ಅಲ್ಲ. ಬೇರೆಯವರ ಪ್ರತಿಭೆ ಗುರುತಿಸುವ ವಿಶಿಷ್ಟ ಗುಣ ಅವರಲ್ಲಿತ್ತು. ತಮ್ಮ ಮಗ ಟೆನಿಸ್ ಆಟಗಾರನಾಗಬಲ್ಲ ಎಂದು ಮೊದಲಿಗೆ ಗುರುತಿಸಿದವರು ಅವರೇ. ಲಿಯಾಂಡರ್ ಏಳೆಂಟು ವರ್ಷದ ಬಾಲಕನಾಗಿದ್ದಾಗ ಮೋಹನ್ ಬಾಗಾನ್ ಮೈದಾನದಲ್ಲಿ ಫುಟ್‌ಬಾಲ್ ಚೆನ್ನಾಗಿ ಆಡುತ್ತಿದ್ದರು. ಚುರುಕಾದ ಗೋಲಕೀಪರ್ ಕೂಡ ಆಗಿದ್ದರು. ಆದರೆ ಟೆನಿಸ್‌ನಂತಹ ವೈಯಕ್ತಿಕ ಕ್ರೀಡೆಯಲ್ಲಿ ಆಡಲು ಮಗನನ್ನು ಪ್ರೋತ್ಸಾಹಿಸಿದರು. ಲಿಯಾಂಡರ್ ಒಲಿಂಪಿಕ್ ಕಂಚು ಗೆದ್ದರು’ ಎಂದು ವೇಸ್ ಒಡನಾಡಿ, ಭಾರತ ಹಾಕಿ ತಂಡದ ಆಟಗಾರ ಗುರುಭಕ್ಸ್ ಸಿಂಗ್ ಕೊಹ್ಲಿ ನೆನಪಿಸಿಕೊಳ್ಳುತ್ತಾರೆ.