ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್‌ಗೆ ಏಷ್ಯನ್ ಗೇಮ್ಸ್ ಪ್ರಸಾರ ಹಕ್ಕುಗಳು

ಬೆಂಗಳೂರು: ಚೀನಾದಲ್ಲಿ ಇದೇ ವರ್ಷ ನಡೆಯಲಿರುವ ಏಷ್ಯನ್ ಕ್ರೀಡಾಕೂಟದ ಪ್ರಸಾರ ಹಕ್ಕುಗಳನ್ನು ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್ ಇಂಡಿಯ (ಎಸ್‌ಪಿಎನ್) ಪಡೆದುಕೊಂಡಿದೆ.
ನವೆಂಬರ್ 2021 ರಿಂದ ಸೆಪ್ಟೆಂಬರ್ 2023ರವರೆಗಿನ ಪ್ರಸಾ ಹಕ್ಕುಗಳು ಎಸ್‌ಪಿಎನ್‌ಗೆ ಲಭಿಸಿವೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಮಾಲ್ಡಿವ್ಸ್ ದೇಶಗಳಲ್ಲಿ ಪ್ರಸಾರವಾಗಲಿದೆ.
ಸೆಪ್ಟೆಂಬರ್ 10ರಿಂದ ಚೀನಾದ ಹ್ಯಾಂಗ್ಜು, ಝೀಜಾಂಗ್ ಸೇರಿದಂತೆ ಐದು ನಗರಗಳಲ್ಲಿ ಕೂಟವು ನಡೆಯಲಿದೆ. ಒಟ್ಟು 40 ಕ್ರೀಡೆಗಳು ಈ ಕೂಟದಲ್ಲಿ ಆಯೋಜನೆಗೊಳ್ಳಲಿವೆ.
‘ಏಷ್ಯಾದ ಅತಿ ದೊಡ್ಡ ಕ್ರೀಡಾಕೂಟವನ್ನು ಪ್ರಸಾರ ಮಾಡುವ ಅವಕಾಶ ಲಭಿಸಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಅಥ್ಲೀಟ್‌ಗಳ ಅಮೋಘ ಸಾಧನೆಯು ದೇಶದಲ್ಲಿ ಕ್ರೀಡೆಗೆ ಭದ್ರ ಅಡಿಪಾಯ ಒದಗಿಸಿದೆ’ ಎಂದು ಸೋನಿ ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ (ಸಿಆರ್‌ಒ) ರಾಜೇಶ್ ಕೌಲ್ ಹೇಳಿದ್ದಾರೆ.
IPS ರವಿ ಚನ್ನಣ್ಣನವರ್ ವರ್ಗಾವಣೆ: ಪೊಲೀಸ್ ಅಧಿಕಾರಿ ಈಗ ವಾಲ್ಮೀಕಿ ನಿಗಮದ ಎಂಡಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.