ಅಹಮದಾಬಾದ್: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿರುವ ಟೀಮ್ ಇಂಡಿಯಾದ ಪ್ರಶಸ್ತಿ ಕನಸು ಭಗ್ನಗೊಂಡಿದೆ.

ಸತತ 10 ಪಂದ್ಯಗಳಲ್ಲಿ ಗೆಲುವು ಸಾಧಿಸಿ ರೋಹಿತ್ ಶರ್ಮಾ ಬಳಗವು ಫೈನಲ್ಗೆ ಪ್ರವೇಶಿಸಿತ್ತು. ಆದರೆ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆರು ವಿಕೆಟ್ ಅಂತರದ ಸೋಲಿಗೆ ಶರಣಾಯಿತು.
.World Cup | ವಿಶ್ವಕಪ್ ಫೈನಲ್ನಲ್ಲಿ ಶತಕ: ದಿಗ್ಗಜರ ಸಾಲಿಗೆ ಟ್ರಾವಿಸ್ ಹೆಡ್.
ಆದರೂ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ಗಳ ವಿರಾಟ್ ಕೊಹ್ಲಿ ಹಾಗೂ ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್ಗಳ ಪಟ್ಟಿಯಲ್ಲಿ ಮೊಹಮ್ಮದ್ ಶಮಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ 11 ಪಂದ್ಯಗಳಲ್ಲಿ 95.62ರ ಸರಾಸರಿಯಲ್ಲಿ ಒಟ್ಟು 765 ರನ್ ಗಳಿಸಿದರು. ಆ ಮೂಲಕ ವಿಶ್ವಕಪ್ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎನಿಸಿಕೊಂಡರು. ಇದರಲ್ಲಿ ಮೂರು ಶತಕ ಹಾಗೂ ಆರು ಅರ್ಧಶತಕಗಳು ಸೇರಿವೆ.

ವಿರಾಟ್ ಕೊಹ್ಲಿ ಅರ್ಹವಾಗಿಯೇ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ಗಳ ಪಟ್ಟಿ:

ವಿರಾಟ್ ಕೊಹ್ಲಿ: 765

ರೋಹಿತ್ ಶರ್ಮಾ: 597

ಕ್ವಿಂಟನ್ ಡಿಕಾಕ್: 594

ರಚಿನ್ ರವೀಂದ್ರ: 578

ಡೆರಿಲ್ ಮಿಚೆಲ್: 552

ಮತ್ತೊಂದೆಡೆ ಮೊಹಮ್ಮದ್ ಶಮಿ ಏಳು ಪಂದ್ಯಗಳಲ್ಲಿ ಒಟ್ಟು 24 ವಿಕೆಟ್ ಗಳಿಸಿದರು. ಮೂರು ಬಾರಿ ಐದು ವಿಕೆಟ್ ಸಾಧನೆ ಮಾಡಿದ ಶಮಿ, ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಏಳು ವಿಕೆಟ್ ಗಳಿಸಿದರು.

ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್ಗಳ ಪಟ್ಟಿ:

ಮೊಹಮ್ಮದ್ ಶಮಿ: 24

ಆ್ಯಡಂ ಜಂಪಾ: 23

ಮಧುಶಂಕ: 21

ಜಸ್ಪ್ರೀತ್ ಬೂಮ್ರಾ: 20

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.