ಶನಿವಾರ, ಡಿಸೆಂಬರ್ 14, 2019
25 °C

ಕುದಿಯುತ್ತಿದೆ ಭೂಮಿ! 2010–2020 ಗರಿಷ್ಠ ತಾಪಮಾನದ ದಶಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾಗತಿಕ ತಾಪಮಾನ, ಹವಾಮಾನ ವೈಪರೀತ್ಯದಿಂದಾಗಿ ಭೂಮಿ ಕುದಿಯುತ್ತಿದ್ದು, ಇದೇ ಸಂದರ್ಭದಲ್ಲಿ ಪ್ರಸಕ್ತ ದಶಕ(2010–2020) ಇತಿಹಾಸದಲ್ಲೇ ಗರಿಷ್ಠ ತಾಪಮಾನ ದಾಖಲೆಯಾದ ದಶಕ ಎಂಬ ಆತಂಕಕಾರಿ ಮಾಹಿತಿಯನ್ನು ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯೂಎಂಒ) ನೀಡಿದೆ. ಸ್ಪೇನ್‌ನ ರಾಜಧಾನಿ ಮ್ಯಾಡ್ರಿಡ್‌ನಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಹವಾಮಾನ ಸಮ್ಮೇಳನದಲ್ಲಿ ಭೂಮಿಯ ವಾತಾವರಣದ ಬಗ್ಗೆ ವರದಿಯನ್ನು ಡಬ್ಲ್ಯೂಎಂಒ ಬಿಡುಗಡೆಗೊಳಿಸಿದೆ...

* 2015 ರಿಂದ 2019ರವರೆಗೆ ದಾಖಲಾದ ಸರಾಸರಿ ತಾಪಮಾನ ಹಾಗೂ 2010ರಿಂದ 2019ರ ಸರಾಸರಿ ತಾಪ ಮಾನ ಇತಿಹಾಸದಲ್ಲಿ ದಾಖಲಾದ ಗರಿಷ್ಠ ಪ್ರಮಾಣ

* ಕಳೆದ ನಾಲ್ಕು ದಶಕಗಳಲ್ಲೂ ಅದರ ಹಿಂದಿನ ದಶಕಕ್ಕಿಂತ ಅಧಿಕ ತಾಪಮಾನ ದಾಖಲಾಗಿದೆ

* ಗರಿಷ್ಠ ತಾಪಮಾನ ದಾಖಲಾದ ವರ್ಷಗಳ ಪೈಕಿ 2019ಕ್ಕೆ ಎರಡು–ಮೂರನೇ ಸ್ಥಾನ

* ಆಹಾರ ಉತ್ಪಾದನೆ ಮೇಲೂ ಹವಾಮಾನ ವೈಪರೀತ್ಯದ ಪ್ರಭಾವ. ಕ್ರಮೇಣವಾಗಿ ಕಡಿಮೆಯಾಗುತ್ತಿದ್ದ ಆಹಾರ ಕೊರತೆ ಏಕಾಏಕಿ ಏರಿಕೆ. 2018ರಲ್ಲಿ ಹಸಿವಿನಿಂದ ಬಳಲಿದವರ ಸಂಖ್ಯೆ 82 ಕೋಟಿ

ಅಂಕಿ ಅಂಶಗಳು 

* ಪ್ರಸಕ್ತ ವರ್ಷದ ಜಾಗತಿಕ ತಾಪಮಾನ: 1.1 ಡಿಗ್ರಿ ಸೆಲ್ಸಿಯಸ್‌(ಕೈಗಾರಿಕಾ ಯುಗದ ಹಿಂದಿನ ಸರಾಸರಿಗಿಂತ ಅಧಿಕ)

* 2 ಡಿಗ್ರಿ ಸೆಲ್ಸಿಯಸ್‌: ಪ್ಯಾರಿಸ್‌ ಒಪ್ಪಂದದ ಪ್ರಕಾರ ಜಾಗತಿಕ ತಾಪಮಾನದ ಮಿತಿ

* ಶೇ 90: ಹಸಿರು ಮನೆ ಅನಿಲದಿಂದ ಉತ್ಪತ್ತಿಯಾದ ಬಿಸಿಯನ್ನು ಸಮುದ್ರ ಹೀರಿಕೊಳ್ಳುವ ಪ್ರಮಾಣ. ಇದೀಗ ಸಮುದ್ರವೂ ತನ್ನ ಗರಿಷ್ಠ ತಾಪಮಾನವನ್ನು ತಲುಪಿದೆ 

* ಶೇ 26: ಕೈಗಾರಿಕಾ ಯುಗ ಆರಂಭದ ಕಾಲಕ್ಕೆ ಹೋಲಿಸಿದರೆ ಸಮುದ್ರದ ನೀರಿನಲ್ಲಿ ಹೆಚ್ಚಾಗಿರುವ ಆಮ್ಲದ ಅಂಶ 

* 32,900 ಕೋಟಿ ಟನ್‌: ಕಳೆದ 12 ತಿಂಗಳಲ್ಲಿ ಗ್ರೀನ್‌ಲ್ಯಾಂಡ್‌ನಲ್ಲಿ ಕರಗಿದ ಹಿಮಗಡ್ಡೆಯ ಪ್ರಮಾಣ 

* 70 ಲಕ್ಷ : ಬರ, ನೆರೆ, ಚಂಡಮಾರುತ ಮುಂತಾದ ನೈಸರ್ಗಿಕ ವಿಕೋಪದಿಂದ ನಿರಾಶ್ರಿತರಾದವರ ಸಂಖ್ಯೆ 

* 100: ಜುಲೈ– ಆಗಸ್ಟ್‌ನಲ್ಲಿ ಜಪಾನ್‌ನಲ್ಲಿ ಬಿಸಿಗಾಳಿಯಿಂದಾಗಿ ಮೃತಪಟ್ಟವರ ಸಂಖ್ಯೆ

ಏನಿದು ಪಿಪಿಎಂ?

ವಾತಾವರಣದಲ್ಲಿರುವ 10 ಲಕ್ಷ ಕಣಗಳಲ್ಲಿ(ಪಿಪಿಎಂ) ಇಂಗಾಲದ ಡೈ ಆಕ್ಸೈಡ್‌ ಪ್ರಮಾಣ 407.8ರಷ್ಟಿದೆ. 2018ಕ್ಕೆ ಹೋಲಿಸಿದರೆ 2019ರಲ್ಲಿ ಪಿಪಿಎಂ ಪ್ರಮಾಣ ಏರಿಕೆಯಾಗಿದೆ. ಪಿಪಿಎಂ ಪ್ರಮಾಣ 1,000 ಮೀರಿದರೆ ಗಾಳಿಯ ಗುಣಮಟ್ಟ ಉಸಿರಾಡಲು ಯೋಗ್ಯವಲ್ಲ ಎಂದು ಪರಿಗಣಿಸಲಾಗುತ್ತದೆ.

ತಾಪಮಾನ ಏರಿಕೆಗೆ ಕಾರಣ

* ನವೀಕರಿಸಲಾಗದ ಇಂಧನಗಳ ಬಳಕೆ

* ನಗರೀಕರಣ 

* ಕೃಷಿ ತ್ಯಾಜ್ಯ ಸುಡುವುದು 

* ಸರಕು ಸಾಗಣೆ ವಾಹನಗಳ ಸಂಖ್ಯೆ ಏರಿಕೆ 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು