ಬುಧವಾರ, ಜನವರಿ 29, 2020
30 °C
ತುಸು ತಿಳಿಯಾದ ಪರಿಸ್ಥಿತಿ

ಅಸ್ಸಾಂ: ಗುವಾಹಟಿಯಲ್ಲಿ ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಕರ್ಫ್ಯೂ ಸಡಿಲಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಗುವಾಹಟಿ: ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಅಸ್ಸಾಂನ ಗುವಾಹಟಿಯಲ್ಲಿ ವಿಧಿಸಲಾಗಿದ್ದ ಕರ್ಫ್ಯೂವನ್ನು ಶನಿವಾರ ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಸಡಿಲಗೊಳಿಸಲಾಗಿದೆ. ನಗರದಲ್ಲಿ ಪರಿಸ್ಥಿತಿ ತುಸು ಶಾಂತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದ ದಿಸ್‌ಪುರ, ಉಜಾನ್, ಬಾಜಾರ್, ಚಾಂದ್‌ಮಾರಿ, ಸಿಲ್ಪುಖುರಿ ಮತ್ತಿತರ ಕಡೆಗಳಲ್ಲಿ ಅಂಗಡಿಗಳ ಮುಂದೆ ಜನ ಸರದಿಸಾಲಿನಲ್ಲಿ ನಿಂತಿರುವುದು ಕಂಡುಬಂದಿದೆ. ಆಟೊ ರಿಕ್ಷಾ, ಸೈಕಲ್ ರಿಕ್ಷಾಗಳು ಸಂಚರಿಸುತ್ತಿದ್ದು, ಬಸ್‌ ಸಂಚಾರವೂ ಆರಂಭಗೊಂಡಿದೆ.

ಇದನ್ನೂ ಓದಿ: ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಿ: ಭಾರತಕ್ಕೆ ಅಮೆರಿಕ, ವಿಶ್ವಸಂಸ್ಥೆ ಸೂಚನೆ

ಕರ್ಫ್ಯೂ ಸಡಿಲಗೊಳಿಸಿರುವ ಬಗ್ಗೆ ಪೊಲೀಸರು ಧ್ವನಿವರ್ಧಕಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದ್ದಾರೆ. ಶಾಲೆ–ಕಾಲೇಜು, ಕಚೇರಿಗಳು ಮಾತ್ರ ಇಂದೂ ಕಾರ್ಯಾಚರಿಸುತ್ತಿಲ್ಲ.

ಪೌರತ್ವ ಮಸೂದೆಗೆ ಸಂಸತ್‌ನ ಉಭಯ ಸದನಗಳಲ್ಲಿ ಅನುಮೋದನೆ ದೊರೆಯುತ್ತಿದ್ದಂತೆ ಗುವಾಹಟಿ ಸೇರಿದಂತೆ ಅಸ್ಸಾಂನ ಹಲವೆಡೆ ಹಿಂಸಾತ್ಮಕ ಪ್ರತಿಭಟನೆ ಭುಗಿಲೆದ್ದಿತ್ತು. ಪೌರತ್ವ ಮಸೂದೆಗೆ ಸಂಸತ್‌ನ ಉಭಯ ಸದನಗಳಲ್ಲಿ ಅನುಮೋದನೆ ದೊರೆಯುತ್ತಿದ್ದಂತೆ ಗುವಾಹಟಿ ಸೇರಿದಂತೆ ಅಸ್ಸಾಂನ ಹಲವೆಡೆ ಹಿಂಸಾತ್ಮಕ ಪ್ರತಿಭಟನೆ ಭುಗಿಲೆದ್ದಿತ್ತು. ಗುವಾಹಟಿಯ ಲಾಲುಂಗ್‌ಗಾಂವ್‌ನಲ್ಲಿ ‘ಕಲ್ಲು ತೂರಾಟ ನಡೆಸಿದ’ ಪ್ರತಿಭಟನಕಾರರ ಮೇಲೆ ಗುರುವಾರ ಪೊಲೀಸರು ಗೋಲಿಬಾರ್‌ ನಡೆಸಿದ್ದರು. ಗುಂಡಿನ ದಾಳಿಗೆ ಮೂವರು ಬಲಿಯಾಗಿದ್ದರು. ಹಲವು ಮಂದಿ ಗಾಯಗೊಂಡಿದ್ದರು.

ಇದನ್ನೂ ಓದಿ: ಅಸ್ಸಾಂ: ಆಕ್ರೋಶ ಸ್ಫೋಟ, ಪೊಲೀಸರ ಗುಂಡಿಗೆ ಮೂರು ಸಾವು

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು