ಸೋಮವಾರ, ಆಗಸ್ಟ್ 2, 2021
21 °C

ಯೋಗಾಭ್ಯಾಸ ಮಾಡಿತೇ ಆನೆ ಮರಿ: ವೈರಲ್ ಆಯ್ತು ರಾಮ್‌ದೇವ್ ಹಂಚಿಕೊಂಡ ಚಿತ್ರ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಜೂನ್ 21 ಅಂತರರಾಷ್ಟ್ರೀಯ ಯೋಗದಿನ. ಪ್ರಪಂಚದಾದ್ಯಂತ ಈ ದಿನವನ್ನು ಆಚರಿಸುವ ಸಾಕಷ್ಟು ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ. ನಿತ್ಯವೂ ಯೋಗ ಮಾಡುವ ಹಲವು ಸಿನಿಮಾ ನಟರು, ಕ್ರೀಡಾಪಟುಗಳು ಹಾಗೂ ರಾಜಕಾರಣಿಗಳೊಂದಿಗೆ, ‘ವಿಶೇಷ ದಿನ’ದಂದು ಬಿಡುವು ಮಾಡಿಕೊಂಡು ಆಸನಾಭ್ಯಾಸ ಮಾಡಿದವರ ಚಿತ್ರಗಳೂ ವೈರಲ್ ಆಗಿವೆ. ಅಷ್ಟು ಮಾತ್ರವಲ್ಲದೆ, ಯೋಗದ ಮಹತ್ವವನ್ನು ಸಾರುವ ಮತ್ತು ಪ್ರೇರೇಪಿಸುವ ಚಿತ್ರಗಳ ರಾಶಿಯೂ ಇದೆ.

ಅದೇ ರೀತಿ ಯೋಗಗುರು ಬಾಬಾ ರಾಮ್‌ದೇವ್‌ ಅವರು ಹಂಚಿಕೊಂಡಿರುವ ಚಿತ್ರವೊಂದು ಗಮನ ಸೆಳೆಯುತ್ತಿದೆ. ಆನೆ ಮರಿಯೊಂದು ಯೋಗ ಭಂಗಿಯಲ್ಲಿ ಮೈಮುರಿಯುತ್ತಾ ಮೇಲೆಲೇಳುತ್ತಿರುವ ಚಿತ್ರವನ್ನು ಅವರು ‘ಯೋಗಮಯ_ದೇವಭೂಮಿ’ ಹ್ಯಾಷ್‌ ಟ್ಯಾಗ್‌ನೊಂದಿಗೆ ಹಂಚಿಕೊಂಡಿದ್ದಾರೆ. ಯೋಗದಿನಾಚರಣೆಗೆ ಸಜ್ಜಾಗಲು ಪ್ರೇರಣೆ ನೀಡುವಂತಿರುವ ಈ ಮುದ್ದು ಮರಿಯಾನೆಯ ಚಿತ್ರ ಪ್ರಕಟವಾದಾಗಿನಿಂದ 2.3 ಸಾವಿರಕ್ಕೂ ಹೆಚ್ಚು ಸಲ ರಿಟ್ವೀಟ್‌ ಆಗಿದೆ. 19.5 ಸಾವಿರ ಮಂದಿ ಮೆಚ್ಚಿಕೊಂಡಿದ್ದಾರೆ.

ಈ ಚಿತ್ರಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರೊಬ್ಬರು, ‘ಅದ್ಭುತ’ ಎಂದು ಬರೆದಿದ್ದಾರೆ. ಮತ್ತೊಬ್ಬರು ‘ತುಂಬಾ ಮುದ್ದಾಗಿದೆ’ ಎಂದು ಹಾಗೂ ಇನ್ನೊಬ್ಬರು ‘ಆನೆಯಂತೆಯೇ ಎಲ್ಲ ಜೀವಿಗಳಿಗೆ ಯೋಗವು ಉಪಯುಕ್ತ’ ಎಂದು ಕಾಮೆಂಟ್ ಮಾಡಿದ್ದಾರೆ.

ಬಾಬಾ ರಾಮ್‌ ದೇವ್‌ ಮಾತ್ರವಲ್ಲ, ಆನೆಗಳು ಯೋಗ ಭಂಗಿಯಲ್ಲಿ ನಿಂತಿರುವ ಚಿತ್ರಗಳನ್ನು, ವಿಡಿಯೊಗಳನ್ನು ಇನ್ನೂ ಹಲವರು ಹಂಚಿಕೊಂಡಿದ್ದಾರೆ. ಐಎಫ್‌ಎಸ್‌ ಅಧಿಕಾರಿಯಾಗಿರುವ ವೈಭವ್‌ ಸಿಂಗ್‌, ‘ನಾನು ಈ ದಿನದ ಯೋಗ ಗುರು’ ಎಂಬ ಒಕ್ಕಣೆಯೊಂದಿಗೆ ಹಲವು ಆನೆಗಳ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಇವುಗಳನ್ನೂ ಸಾಕಷ್ಟು ಜನರ ಮನಗೆದ್ದಿವೆ.

ಈ ಬಗ್ಗೆ ನಿಮಗೇನನಿಸುತ್ತದೆ ಕಾಮೆಂಟ್ ಮಾಡಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು