ಮೈತ್ರಿ ಕೂಟದ ಗೊಂದಲದಿಂದ ಸರ್ಕಾರ ಪತನ: ಸದಾನಂದ ಗೌಡ

7

ಮೈತ್ರಿ ಕೂಟದ ಗೊಂದಲದಿಂದ ಸರ್ಕಾರ ಪತನ: ಸದಾನಂದ ಗೌಡ

Published:
Updated:

ನವದೆಹಲಿ: 'ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆಯಿತು' ಎಂಬ ಸ್ಥಿತಿ ರಾಜ್ಯ ಮೈತ್ರಿಕೂಟದ ಜೆಡಿಎಸ್–ಕಾಂಗ್ರೆಸ್‌ನಲ್ಲಿದೆ. ಅವರವರೇ ಕಚ್ಚಾಡಿ ಸರ್ಕಾರ‌ ಬೀಳಲಿದೆ. ಚಳಿಗಾಲದ ಅಧಿವೇಶನಕ್ಕೆ ಮೈತ್ರಿ ಕೂಟದ ಶಾಸಕರು ಅನೇಕರು ಭಾಗವಹಿಸುವುದಿಲ್ಲ’ ಎಂದು ಕೇಂದ್ರದ ರಸಗೊಬ್ಬರ ಖಾತೆ ‌ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕರ್ನಾಟಕದಲ್ಲಿ ಧಮಾಕಾ ಆಗಲಿದೆ’ ಎಂಬ ಕೇಂದ್ರ ಸಚಿವ ಪ್ರಕಾಶ‌ ಜಾವಡೇಕರ್ ಹೇಳಿಕೆಗೆ ಪುಷ್ಟಿ ನೀಡಿದರು. 

ತೋಳ ಬಂತು ತೋಳ ಎಂಬ ಅಪಪ್ರಚಾರವನ್ನು ಬಿಜೆಪಿ ಮಾಡುತ್ತಿಲ್ಲ. ಬೆಳಗಾವಿ ಜಾರಕೊಹೊಳಿ ಗುಂಪಿನ ತೋಳಗಳು, ಚಿಕ್ಕಬಳ್ಳಾಪುರದ ಸುಧಾಕರ ‌ಗುಂಪಿನ ತೋಳಗಳು ಈಗಾಗಲೇ‌ ಗುಹೆಯಿಂದ ಹೊರಬರುತ್ತಿವೆ. ಅವರಾಗಿ ಅವರೇ ಕಚ್ಚಾಡಿ ಸರ್ಕಾರ ಬೀಳಲಿದೆ. ಸರ್ಕಾರ ಬಿದ್ದರೆ ಬಿಜೆಪಿಯು ಕೆಲವರ ಬೆಂಬಲ ಪಡೆದು ಸರ್ಕಾರ ರಚಿಸಲಿದೆ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 6

  Angry

Comments:

0 comments

Write the first review for this !