ಅನಿತಾ ಕುಮಾರಸ್ವಾಮಿ ತೆಲುಗು ಮೂಲದವರು: ವೈರಲ್ ಆಯ್ತು ಎಚ್‌ಡಿಕೆ ಹೇಳಿಕೆಯ ವಿಡಿಯೊ

ಮಂಡ್ಯ: ಆಂಧ್ರಪ್ರದೇಶದ ಖಾಸಗಿ ವಾಹಿನಿಯೊಂದಕ್ಕೆ ನೀಡಿದ್ದ ನಂದರ್ಶನವೊಂದರಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ‘ನನ್ನ ಪತ್ನಿ ಅನಿತಾ ತೆಲುಗು ಮೂಲದವರು’ ಎಂಬ ಹೇಳಿಕೆ ನೀಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಜೆಡಿಎಸ್ ಮುಖಂಡರು ಅಂಬರೀಷ್ ಪತ್ನಿ ಸುಮಲತಾ ಅವರ ಮೂಲ ಪ್ರಶ್ನೆ ಮಾಡಿರುವ ಸಂದರ್ಭದಲ್ಲಿ ಈ ವಿಡಿಯೊ ಚರ್ಚೆಗೆ ಗ್ರಾಸವಾಗಿದೆ. ನಿಖಿಲ್ ಕುಮಾರಸ್ವಾಮಿ ಅವರ ಅಭಿನಯದ ಮೊದಲ ಚಿತ್ರ ‘ಜಾಗ್ವಾರ್’(ತೆಲುಗು ಅವತರಣಿಕೆ) ಬಿಡುಗಡೆ ವೇಳೆ ಅವರು ಸಂದರ್ಶನ ನೀಡಿದ್ದಾರೆ.
ಇದನ್ನೂ ಓದಿ: ಮಂಡ್ಯದ ಮನೆಮಗಳು ಯಾರು?: ಸುಮಲತಾರನ್ನು ಮತ್ತೆ ಕೆಣಕಿದ ಜೆಡಿಎಸ್
ತೆಲುಗು ಭಾಷೆಯ ಪರಿಚಯದ ಬಗ್ಗೆ ಮಾತನಾಡುವಾಗ ಕುಮಾರಸ್ವಾಮಿ ಅವರು ತನ್ನ ಪತ್ನಿ ಅನಿತಾ ತೆಲುಗು ಮೂಲದವರಾಗಿದ್ದು ಭಾಷೆಯ ಪರಿಚಯವಿದೆ ಎಂದು ತಿಳಿಸಿದ್ದಾರೆ. ಸಂದರ್ಶನದಲ್ಲಿ ನಿಖಿಲ್ ಕುಮಾರಸ್ವಾಮಿ ಕೂಡ ಧ್ವನಿಗೂಡಿಸಿದ್ದಾರೆ.
ಆಂಧ್ರಪ್ರದೇಶದ ಖಾಸಗಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ‘ನನ್ನ ಪತ್ನಿ ಅನಿತಾ ತೆಲುಗು ಮೂಲದವರು’ ಎಂಬ ಹೇಳಿಕೆ ನೀಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.#hdkumaraswamy #NikhilKumaraswamy https://t.co/S7bUpKnuFK pic.twitter.com/iO13E4XTwl
— ಪ್ರಜಾವಾಣಿ|Prajavani (@prajavani) February 5, 2019
ಈ ವಿಡಿಯೊ ವೈರಲ್ ಆಗಿದ್ದು ಪರ–ವಿರೋಧ ಚರ್ಚೆಗೆ ಕಾರಣವಾಗಿದೆ. ಸುಮಲತಾ ಅವರನ್ನು ಮಂಡ್ಯ ಗೌಡ್ತಿ ಅಲ್ಲ ಎನ್ನುವ ಜೆಡಿಎಸ್ ಮುಖಂಡರು ಅನಿತಾ ಅವರನ್ನು ಮಂಡ್ಯ ಗೌಡ್ತಿ ಎನ್ನುವರೇ ಎಂದು ಅಂಬರೀಷ್ ಅಭಿಮಾನಿಗಳು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಸುಮಲತಾ ಮಂಡ್ಯ ಗೌಡ್ತಿ ಅಲ್ಲ, ಆಂಧ್ರದ ಗೌಡ್ತಿ: ಕೆ.ಟಿ.ಶ್ರೀಕಂಠೇಗೌಡ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.