ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಮ್‌ ಕ್ವಾರಂಟೈನ್‌ಗೆ ಒಳಗಾದವರು ಗಂಟೆಗೊಂದು ಸೆಲ್ಫಿ ಕಳಿಸುವುದು ಕಡ್ಡಾಯ

ರಾಜ್ಯ ಸರ್ಕಾರ ಕಂಡುಕೊಂಡ ಆಸಕ್ತಿಕರ ಮಾರ್ಗ
Last Updated 31 ಮಾರ್ಚ್ 2020, 7:46 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಹರಡುವಿಕೆ ನಿಯಂತ್ರಿಸಲು ವಿಧಿಸಿರುವ ನಿಯಮಗಳು ಸರಿಯಾಗಿ ಪಾಲನೆ ಆಗುತ್ತಿರುವುದರ ಮೇಲೆ ನಿಗಾವಹಿಸುದಕ್ಕೆ ರಾಜ್ಯ ಸರ್ಕಾರ ಆಸಕ್ತಿಕರ ಮಾರ್ಗವೊಂದನ್ನು ಕಂಡುಹಿಡಿದಿದೆ.

ಹೋಮ್‌ ಕ್ವಾರಂಟೈನ್‌ ಅಲ್ಲಿ ಇರುವವರು ಗಂಟೆಗೊಂದು ಸೆಲ್ಫಿ ತೆಗೆದು ಆರೋಗ್ಯ ಇಲಾಖೆಗೆ ಕಳಿಸುವುದು ಕಡ್ಡಾಯವೆಂದು ಸರ್ಕಾರ ಹೇಳಿದೆ.

ಸರ್ಕಾರದ ಆದೇಶದ ಪ್ರಕಾರ, ಸೆಲ್ಫಿಗಳು ಜಿಪಿಎಸ್ ನಿರ್ದೇಶಾಂಕಗಳನ್ನು ಒಳಗೊಂಡಿವೆ. ವ್ಯಕ್ತಿಯೊಬ್ಬ ಇರುವ ಸ್ಥಳ ಮತ್ತು ಚಲನವಲನಗಳ ಮೇಲ್ವಿಚಾರಣೆ ಮಾಡಲು ಇದು ಸಹಾಯ ಮಾಡುತ್ತದೆ.

ಈ ಸೆಲ್ಫಿ ನಿಯಮ ಪಾಲನೆ ಮಾಡದವರನ್ನು ಹೋಮ್‌ ಕ್ವಾರಂಟೈನ್‌ನಿಂದ ಮಾಸ್‌ ಕ್ವಾರಂಟೈನ್‌ ಅಲ್ಲಿ ಇರಿಸುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ.

ಒಂದು ವೇಳೆ ಕೆಲವರು ಸಂಜೆಯಲ್ಲಿ ಹಲವು ಸೆಲ್ಫಿಗಳನ್ನು ತೆಗೆದು ಬೇರೆ ಬೇರೆ ಸಮಯಕ್ಕೆ ಕಳುಹಿಸಿದರೆ ಏನು ಮಾಡಿತ್ತೀರೆಂದು ಕೇಳಿದ್ದಕೆ ಉತ್ತರಿಸಿದ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್‌, 'ಫೋಟೊಗಳ ಮೇಲೆ ಸಮಯವಿರುತ್ತದೆ. ಆದ್ದರಿಂದ ಅವರು ಪ್ರತಿ ಗಂಟೆಗೊಮ್ಮೆ ಕಳುಹಿಸಲೇಬೇಕು' ಎಂದು ಹೇಳಿದರು.

ಕೆಲವರಿಗೆ ಮಧ್ಯಾನ್ಹದಲ್ಲಿ ಕಿರು ನಿದ್ರೆ ಮಾಡುವ ಅಭ್ಯಾಸವಿರುತ್ತದೆ. ಈ ನಿಯಮದಿಂದ ಅಂತವರಿಗೆ ತೊಂದರೆ ಆಗುವುದಿಲ್ಲವೇ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್‌ ಅವರನ್ನು ಕೇಳಿದಾಗ, 'ಮಧ್ಯಾನ್ಹದ ಊಟ ಮತ್ತು ಕಿರುನಿದ್ರೆಗೆ ಎರಡು ಗಂಟೆ ತೆಗೆದುಕೊಳ್ಳಬಹುದು. ನಾವಿಂದು ಕಟ್ಟಿನಿಟ್ಟಿನ ನಿಯಮ ಪಾಲನೆ ಮಾಡಬೇಕಾದ ಪರಿಸ್ಥಿತಿ ಇದೆ. ಇದನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಲೇಬೇಕು' ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT