ದೀಪಾವಳಿಗೆ ವಿಶೇಷ ಕೊಡುಗೆ ಘೋಷಿಸಿದ ಆ್ಯಪಲ್: ಐಫೋನ್, ಮ್ಯಾಕ್ ಖರೀದಿಗೆ ಡಿಸ್ಕೌಂಟ್

ಬೆಂಗಳೂರು: ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಇ ಕಾಮರ್ಸ್ ತಾಣಗಳಲ್ಲಿ ಹಬ್ಬದ ವಿಶೇಷ ವಾರ್ಷಿಕ ಮಾರಾಟ ನಡೆಯುತ್ತಿರುವ ಬೆನ್ನಲ್ಲೇ, ದೇಶದಲ್ಲಿ ದೀಪಾವಳಿ ಮತ್ತು ದಸರಾ ವಿಶೇಷ ಮಾರಾಟ ಮೇಳವನ್ನು ಆ್ಯಪಲ್ ಆರಂಭಿಸಿದೆ.
ಆ್ಯಪಲ್ ಐಫೋನ್, ಮ್ಯಾಕ್‌ಬುಕ್, ಐಪ್ಯಾಡ್ ಮತ್ತು ಗ್ಯಾಜೆಟ್, ಅಕ್ಸೆಸ್ಸರಿ ಖರೀದಿಗೆ ವಿಶೇಷ ಡಿಸ್ಕೌಂಟ್ ದೊರೆಯಲಿದೆ.
ಅಲ್ಲದೆ, ಎಚ್‌ಡಿಎಫ್‌ಸಿ ಮತ್ತು ಅಮೆರಿಕನ್ ಎಕ್ಸ್‌ಪ್ರೆಸ್ ಕ್ರೆಡಿಟ್ ಕಾರ್ಡ್ ಬಳಕೆಗೆ ₹7,000 ವರೆಗೆ ಡಿಸ್ಕೌಂಟ್ ದೊರೆಯಲಿದೆ. ಉಳಿದಂತೆ, ನೋ ಕಾಸ್ಟ್ ಇಎಂಐ ಕೊಡುಗೆಗಳೂ ದೊರೆಯಲಿದೆ ಎಂದು ಕಂಪನಿ ಹೇಳಿದೆ.
ಆ್ಯಪಲ್, ಟ್ರೇಡ್ ಇನ್ ಎಕ್ಸ್‌ಚೇಂಜ್ ಆಫರ್ ಕೂಡ ಇದ್ದು, ಹಳೆಯ ಐಫೋನ್ ಬದಲಿಸಿ, ಹೊಸದು ಕೊಳ್ಳುವ ಆಯ್ಕೆಯನ್ನೂ ನೀಡಿದೆ.
Apple iPhone: ದೇಶದಲ್ಲಿ ಹೊಸ ಐಪೋನ್ 14 ಸರಣಿ ಮಾರಾಟ ಆರಂಭ: ಇಲ್ಲಿದೆ ಆಫರ್ ವಿವರ
ಸೋಮವಾರದಿಂದ ಆ್ಯಪಲ್ ಹಬ್ಬದ ವಿಶೇಷ ಮಾರಾಟ ಆರಂಭಿಸಿದೆ. ಅಕ್ಟೋಬರ್ 24ರವರೆಗೆ ಕೊಡುಗೆಗಳು ಇರಲಿವೆ ಎಂದು ಕಂಪನಿ ತಿಳಿಸಿದೆ.
iPhone 14 ಬಿಡುಗಡೆ: ಹಳೆಯ ಐಫೋನ್ ಬೆಲೆ ಇಳಿಕೆ | ಪರಿಷ್ಕೃತ ದರ ಇಲ್ಲಿದೆ..
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.