ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲೇ ತಯಾರಾಗಲಿದೆ ಆ್ಯಪಲ್ ಏರ್‌ಪಾಡ್ಸ್: ಕೇಂದ್ರ ಸರ್ಕಾರ ಮಾಹಿತಿ

ಆ್ಯಪಲ್ ನೂತನ ಏರ್‌ಪಾಡ್ಸ್, ದೇಶದಲ್ಲೇ ತಯಾರಾಗಲಿದೆ.
Last Updated 10 ಅಕ್ಟೋಬರ್ 2022, 10:02 IST
ಅಕ್ಷರ ಗಾತ್ರ

ನವದೆಹಲಿ: ಪ್ರಮುಖ ಟೆಕ್ ಮತ್ತು ಗ್ಯಾಜೆಟ್ ಕಂಪನಿ, ಅಮೆರಿಕ ಮೂಲದ ಆ್ಯಪಲ್ ಹೊಸದಾಗಿ ಬಿಡುಗಡೆ ಮಾಡಿರುವ ಏರ್‌ಪಾಡ್ಸ್ ಅನ್ನು ಭಾರತದಲ್ಲೇ ತಯಾರಿಸಲು ಕಂಪನಿ ಮುಂದಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಮಾಹಿತಿ ತಂತ್ರಜ್ಞಾನ ಸಚಿವಾಲಯ ಈ ಬಗ್ಗೆ ವಿವರಣೆ ನೀಡಿದ್ದು, ನೂತನ ಏರ್‌ಪಾಡ್ಸ್ ಅನ್ನು ದೇಶದಲ್ಲೇ ತಯಾರಿಸಲು ಆ್ಯಪಲ್ ಉತ್ಸುಕವಾಗಿದೆ ಎಂದಿದೆ.

ಈ ಕುರಿತು ಸಿಎನ್‌ಬಿಸಿ ಟಿವಿ18 ವರದಿ ಮಾಡಿದ್ದು, ಕೇಂದ್ರ ಸಚಿವಾಲಯದ ಹೇಳಿಕೆಯನ್ನು ಉಲ್ಲೇಖಿಸಿದೆ.

ಆ್ಯಪಲ್ ಐಫೋನ್ 14 ಅನ್ನು ಚೆನ್ನೈನಲ್ಲಿರುವ ಫಾಕ್ಸ್‌ಕಾನ್ ಘಟಕದಲ್ಲಿ ಡಿಸೆಂಬರ್ 2022ರ ವೇಳೆಗೆ ಆ್ಯಪಲ್ ಉತ್ಪಾದಿಸಲಿದೆ. ಅದರ ಜತೆಗೇ, ನೂತನ ಏರ್‌ಪಾಡ್ಸ್ ಕೂಡ ಭಾರತದಲ್ಲೇ ತಯಾರಾಗಲಿದೆ.

ಆದರೆ ಈ ಕುರಿತು ಆ್ಯಪಲ್ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT