ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Nokia 5.4: ದೇಶದ ಮಾರುಕಟ್ಟೆ ಪ್ರವೇಶಿಸಿದ ಹೊಸ ನೋಕಿಯಾ ಸ್ಮಾರ್ಟ್‌ಫೋನ್

Last Updated 17 ಫೆಬ್ರುವರಿ 2021, 12:03 IST
ಅಕ್ಷರ ಗಾತ್ರ

ಬೆಂಗಳೂರು: ಎಚ್‌ಎಂಡಿ ಗ್ಲೋಬಲ್ ಸಮೂಹದ ಕಂಪನಿ ನೋಕಿಯಾ, ದೇಶದ ಮಾರುಕಟ್ಟೆಗೆ ಹೊಸನೋಕಿಯಾ 5.4 ಸ್ಮಾರ್ಟ್‌ಫೋನ್ ಪರಿಚಯಿಸಿದೆ. 48 ಮೆಗಾಪಿಕ್ಸೆಲ್ ಸಹಿತ ಕ್ವಾಡ್ ಕ್ಯಾಮರಾ ಹೊಂದಿರುವನೋಕಿಯಾ 5.4 ಫೋನ್, ಫ್ಲಿಪ್‌ಕಾರ್ಟ್ ಮತ್ತು ನೋಕಿಯಾ.ಕಾಂ ಮೂಲಕ ಲಭ್ಯವಿದೆ.

ನೋಕಿಯಾ 5.4

ಓಝೆಡ್‍ಓ ಸ್ಪೇಷಿಯಲ್ ಆಡಿಯೊ ಬೆಂಬಲ, 2 ವರ್ಷಗಳ ಸಾಫ್ಟ್‌ವೇರ್ ಅಪ್‌ಡೇಟ್ ಮತ್ತು ಮೂರು ವರ್ಷಗಳವರೆಗೆ ಮಾಸಿಕ ಸೆಕ್ಯುರಿಟಿ ಅಪ್‌ಡೇಟ್ ಒದಗಿಸುವ ಭರವಸೆಯನ್ನು ನೋಕಿಯಾ ನೀಡಿದೆ. ಕ್ವಾಲ್‍ಕಾಮ್ ಸ್ನ್ಯಾಪ್‍ಡ್ರಾಗನ್ 662 ಪ್ರೊಸೆಸರ್ ಇದರಲ್ಲಿದೆ.

ವಿಶೇಷತೆಗಳು

ಹಿಂಭಾಗದಲ್ಲಿ 48 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮರಾ, 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾ ಇದರಲ್ಲಿದೆ. ಸಿನಿಮಾ ಮೋಡ್ ಮೂಲಕ ವಿಡಿಯೊ ಚಿತ್ರೀಕರಣ, ಕಡಿಮೆ ಬೆಳಕಿನಲ್ಲಿಯೂ ಆಕರ್ಷಕ ಚಿತ್ರ ಸೆರೆಹಿಡಿಯಲು ಹೊಸ ನೋಕಿಯಾ 5.4 ಅನುವು ಮಾಡಿಕೊಡುತ್ತದೆ ಎಂದು ಕಂಪನಿ ಹೇಳಿದೆ. 4500mAh ಬ್ಯಾಟರಿ, 6.39 ಇಂಚಿನ ಎಚ್‌ಡಿ+ ಪಂಚ್‌ಹೋಲ್ ಡಿಸ್‌ಪ್ಲೇ, ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಲಭ್ಯವಾಗಲಿದೆ.

ಬೆಲೆ ಮತ್ತು ಲಭ್ಯತೆ

ಹೊಸ ನೋಕಿಯಾ 5.4 ಫೋನ್ ಪೋಲಾರ್ ನೈಟ್ ಮತ್ತು ಡಸ್ಕ್ ಬಣ್ಣದ ಆಯ್ಕೆಗಳಲ್ಲಿ ಲಭ್ಯ.4 ಜಿಬಿ ಮತ್ತು 64 ಜಿಬಿ ಆವೃತ್ತಿ ಬೆಲೆ ದೇಶದಲ್ಲಿ ₹13,999 ಮತ್ತು 6 ಜಿಬಿ/64 ಜಿಬಿ ಸ್ಟೋರೇಜ್ ಮಾದರಿಗೆ ₹15,499 ದರವಿದೆ. ಜತೆಗೆ ರಿಲಯನ್ಸ್ ಜಿಯೊ ಸಂಪರ್ಕ ಹೊಂದಿರುವ ಗ್ರಾಹಕರಿಗೆ ವಿಶೇಷ ಆಫರ್ ಕೂಡ ದೊರೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT