ಸೋಮವಾರ, ಸೆಪ್ಟೆಂಬರ್ 26, 2022
20 °C

ಟ್ವಿಟರ್ ಬಳಿಕ ಮ್ಯಾಂಚೆಸ್ಟರ್ ಯುನೈಟೆಡ್ ಖರೀದಿಸುವುದಾಗಿ ಇಲಾನ್ ಮಸ್ಕ್ ಟ್ವೀಟ್!

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಓರ್ವರಾಗಿರುವ ಇಲಾನ್ ಮಸ್ಕ್, ಜನಪ್ರಿಯ ಫುಟ್ಬಾಲ್ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್ ಖರೀದಿಸುವುದಾಗಿ ಬುಧವಾರ ಟ್ವೀಟ್ ಮಾಡಿದ್ದಾರೆ.

ಬಳಿಕ ಮಗದೊಂದು ಟ್ವೀಟ್ ಮೂಲಕ ಈ ಕುರಿತು ಸ್ಪಷ್ಟನೆ ಕೊಟ್ಟಿರುವ ಇಲಾನ್ ಮಸ್ಕ್, ಇದೊಂದು 'ಜೋಕ್' ಆಗಿತ್ತು ಎಂದು ಹೇಳಿದ್ದಾರೆ.

ಇದನ್ನೂ ಓದಿ: 

ಸದಾ ತಮ್ಮ ಟ್ವೀಟ್‌ಗಳಿಂದಲೇ ಗಮನ ಸೆಳೆಯುತ್ತಿರುವ ಇಲಾನ್ ಮಸ್ಕ್, ಮ್ಯಾಂಚೈಸ್ಟರ್ ಯನೈಟೆಡ್ ಖರೀದಿಸುವುದಾಗಿ ಹೇಳಿದ್ದರು.

 

 

 

ಟ್ವಿಟರ್ ಬಳಕೆದಾರರೊಬ್ಬರು ನಿಜವಾಗಿಯೂ ಖರೀದಿಸುತ್ತಿದ್ದೀರಾ ಎಂದು ಪ್ರಶ್ನಿಸಿದಾಗ, 'ಇಲ್ಲ, ನಾನು ಟ್ವಿಟರ್‌ನಲ್ಲಿ ತಮಾಷೆ ಮಾಡುತ್ತಿದ್ದೆ. ನಾನು ಯಾವುದೇ ಕ್ರೀಡಾ ತಂಡಗಳನ್ನು ಖರೀದಿಸುತ್ತಿಲ್ಲ' ಎಂದು ಹೇಳಿದ್ದಾರೆ.

 

 

 

 

ಈ ಕುರಿತು ಮ್ಯಾಂಚೆಸ್ಟರ್ ಯುನೈಟೆಡ್ ಮಾಲೀಕರಾಗಿರುವ ಅಮೆರಿಕದ ಗ್ಲೇಜರ್ ಕುಟುಂಬವು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

 

ಕಳೆದ ವರ್ಷ 4 ಬಿಲಿಯನ್ ಪೌಂಡ್‌ಗಿಂತಲೂ ಹೆಚ್ಚಿನ ಮೊತ್ತ ಲಭಿಸಿದರೆ ಜಗತ್ತಿನ ಅತಿ ದೊಡ್ಡ ಫುಟ್ಬಾಲ್ ಕ್ಲಬ್ ಅನ್ನು ಮಾರಾಟ ಮಾಡಲು ಗ್ಲೇಜರ್ ಕುಟುಂಬ ಸಿದ್ಧವಾಗಿದೆ ಎಂದು ಬ್ರಿಟನ್‌ನ 'ಡೈಲಿ ಮಿರರ್' ಪತ್ರಿಕೆ ವರದಿ ಮಾಡಿತ್ತು.

ಅತ್ತ ಮೈಕ್ರೋಬ್ಲಾಗಿಂಗ್ ಜಾಲತಾಣ ಟ್ವಿಟರ್ ಖರೀದಿಸುವುದಾಗಿ ಹೇಳಿದ್ದ ಇಲಾನ್ ಮಸ್ಕ್, ಬಳಿಕ 44 ಬಿಲಿಯನ್ ಡಾಲರ್ ಖರೀದಿ ಒಪ್ಪಂದವನ್ನು ಕೈಬಿಟ್ಟಿದ್ದರು. ಸದ್ಯ ಪ್ರಕರಣ ಕೋರ್ಟ್ ಹಂತದಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು