ನವದೆಹಲಿ: ಭಾರತದಲ್ಲಿ ಪಾಕಿಸ್ತಾನದ ಜಾವೆಲಿನ್ ಥ್ರೋ ತಾರೆ ಅರ್ಷದ್ ನದೀಮ್ ಅವರ ಇನ್ಸ್ಟಾಗ್ರಾಂ ಖಾತೆಯನ್ನು ನಿಷೇಧಿಸಲಾಗಿದೆ.

ಅರ್ಷದ್ ನದೀಮ್ ಅವರ ಇನ್ಸ್ಟಾಗ್ರಾಂ ಖಾತೆಯನ್ನು ತೆರೆದಾಗ 'ಕಾನೂನು ಸೂಚನೆಯ ಮೇರೆಗೆ ಖಾತೆ ತಡೆಹಿಡಿಯಲಾಗಿದೆ' ಎಂದು ಕಾಣಿಸುತ್ತಿದೆ.

ಈಗಾಗಲೇ ಭಾರತದಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟ್ ತಾರೆಗಳಾದ ಶೋಯಬ್ ಅಖ್ತರ್ ಹಾಗೂ ಶಾಹೀದ್ ಅಫ್ರಿದಿ ಯೂಟ್ಯೂಬ್ ಖಾತೆಗಳನ್ನು ನಿರ್ಬಂಧಿಸಲಾಗಿದೆ.

ಆದರೂ ಅಖ್ತರ್ ಹಾಗೂ ಅಫ್ರಿದಿ ಇನ್ಸ್ಟಾಗ್ರಾಂ ಖಾತೆಗಳ ಮೇಲೆ ನಿರ್ಬಂಧ ಹೇರಿಲ್ಲ. ಹಾಗೆಯೇ ಬಾಬರ್ ಆಜಂ ಹಾಗೂ ಮೊಹಮ್ಮದ್ ರಿಜ್ವಾನ್ ಇನ್ಸ್ಟಾಗ್ರಾಂ ಖಾತೆಗಳು ಲಭ್ಯವಿವೆ.

ಪಾಕ್ನ ಹೆಸರಾಂತ ಸೆಲೆಬ್ರಿಟಿಗಳಾದ ಮಹಿರಾ ಖಾನ್ ಹಾಗೂ ಅಲಿ ಜಫರ್ ಇನ್ಸ್ಟಾಗ್ರಾಂ ಖಾತೆಗಳನ್ನು ತಡೆಹಿಡಿಯಲಾಗಿದೆ.

ಪಹಲ್ಗಾಮ್ನಲ್ಲಿ ಉಗ್ರರ ದಾಳಿ ಬೆನ್ನಲ್ಲೇ ಭಾರತದ ಬಗ್ಗೆ 'ಸುಳ್ಳು, ಪ್ರಚೋದನಕಾರಿ ಮತ್ತು ಕೋಮು ಭಾವನೆ ಕೆರಳಿಸುವ' ಸುದ್ದಿಗಳನ್ನು ಪ್ರಸಾರ ಮಾಡಿದ ಆರೋಪದ ಮೇಲೆ ಪಾಕಿಸ್ತಾನದ 16 ಯೂಟ್ಯೂಬ್ ಚಾನೆಲ್ಗಳನ್ನು ಕೇಂದ್ರ ಸರ್ಕಾರ ಭಾರತದಲ್ಲಿ ನಿಷೇಧಿಸಿತ್ತು. ಇದರಲ್ಲಿ ಡಾನ್ ನ್ಯೂಸ್, ಸಮಾ ಟಿ.ವಿ ಹಾಗೂ ಜಿಯೊ ನ್ಯೂಸ್ ಸೇರಿತ್ತು.

ಬೆಂಗಳೂರಿನಲ್ಲಿ ಮೇ 24ರಂದು ನಡೆಯಲಿರುವ ಚೊಚ್ಚಲ ಎನ್ಸಿ ಕ್ಲಾಸಿಕ್ ಜಾವೆಲಿನ್ ಕೂಟಕ್ಕೆ ಪಾಕಿಸ್ತಾನದ ಅಥ್ಲೀಟ್ ಅರ್ಷದ್ ನದೀಮ್ ಅವರನ್ನು ಭಾರತದ ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ ಆಹ್ವಾನಿಸಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಆದರೆ ಆಹ್ವಾನವನ್ನು ನದೀಂ ತಿರಸ್ಕರಿಸಿದ್ದರು.

ನದೀಮ್ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರು. ಟೋಕಿಯೊದಲ್ಲಿ ಚಿನ್ನ ಗೆದ್ದಿದ ನೀರಜ್, ಪ್ಯಾರಿಸ್ನಲ್ಲಿ ಬೆಳ್ಳಿ ಜಯಿಸಿದ್ದರು.
.ಪಾಕಿಸ್ತಾನದ 16 ಯೂಟ್ಯೂಬ್ ಚಾನೆಲ್ಗಳಿಗೆ ಭಾರತದಲ್ಲಿ ನಿರ್ಬಂಧ.Pahalgam Terror Attack: ಪಾಕ್ ವಿಮಾನಗಳಿಗೆ ಭಾರತ ವಾಯುಪ್ರದೇಶ ನಿರ್ಬಂಧ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.