ಶನಿವಾರ, ಡಿಸೆಂಬರ್ 14, 2019
24 °C

ಮೇಕ್‌ಓವರ್ ಮೂಲಕ ಮತ್ತೆ ಸುದ್ದಿಯಾದ ಗಾಯಕಿ ರಾನು ಮಂಡಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Ranu Mandal Makeover

ಕಾನ್ಪುರ್‌: ಗಾಯಕಿ ರಾನು ಮಂಡಲ್‌ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಕೋಲ್ಕತ್ತದ ರಾಣಾಘಾಟ್‌ ರೈಲ್ವೆ ಪ್ಲಾಟ್‌ಫಾರಂನಲ್ಲಿ ಹಾಡುತ್ತಿದ್ದ ರಾನು ರಾತ್ರೋರಾತ್ರಿ ಬಾಲಿವುಡ್ ಗಾಯಕಿಯಾಗಿದ್ದರು. ಬದುಕು ಅಲ್ಲಿಂದ ಬದಲಾಯಿತು. ಸಾಮಾಜಿಕ ಮಾಧ್ಯಮಗಳಿಂದಲೇ ಗಮನ ಸೆಳೆದು ಗಾಯಕಿ ಪಟ್ಟಕ್ಕೇರಿದ್ದ ರಾನು ಜೀವನದ ಪ್ರತಿಯೊಂದು ಘಟನೆಯೂ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ.

ಇತ್ತೀಚೆಗೆ ಸೆಲ್ಫಿ ತೆಗಿಸಿಕೊಳ್ಳಲು ಬಂದ ಅಭಿಮಾನಿಯೊಂದಿಗೆ ರಾನು ರೇಗಿದ್ದು ಚರ್ಚೆಗೆ ಗ್ರಾಸವಾಗಿತ್ತು.
ಇದರ ಬೆನ್ನಲ್ಲೇ ರಾನು ಮೇಕ್‌ಓವರ್ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚಿತ ವಿಷಯವಾಗಿ ಮಾರ್ಪಟ್ಟಿದೆ. 
ಮೇಕಪ್ ಕಲಾವಿದೆ ಸಂಧ್ಯಾ  ರಾನು ಮಂಡಲ್ ಅವರಿಗೆ ಮೇಕಪ್ ಮಾಡಿದ್ದು ಅದರ ಫೋಟೊ ಮತ್ತು ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಆಗಿದೆ.

ಇದನ್ನೂ ಓದಿಮಹಿಳಾ ಅಭಿಮಾನಿ ಜತೆ ರಾನು ಮಂಡಲ್‌ ಕಿರಿಕ್‌!

 ಕಾನ್ಪುರ್‌ನಲ್ಲಿ ತಮ್ಮ ಮೇಕ್ ಓವರ್ ಸಲೂನ್ ಆರಂಭಿಸಿರುವ ಸಂಧ್ಯಾ, ಉದ್ಘಾಟನೆ ಸಮಾರಂಭ ನಿಮಿತ್ತ  ಕಂಪ್ಲೀಟ್ ಮೇಕ್‌ಓವರ್‌ಗಾಗಿ ರಾನು ಮಂಡಲ್ ಅವರನ್ನು ತಮ್ಮ ಸಲೂನ್‌ಗೆ ಆಹ್ವಾನಿಸಿದ್ದರು.

 ತಿಳಿ ಆರೆಂಜ್ ಬಣ್ಣದ ಲೆಹಂಗಾ ಧರಿಸಿ ಅದಕ್ಕೊಪ್ಪುವ ಆಭರಣಗಳನ್ನು ರಾನುಗೆ ತೊಡಿಸಲಾಗಿತ್ತು. ಮೇಕ್ ಓವರ್‌ನ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಆದ ಕೂಡಲೇ ರಾನು ಮೇಕಪ್ ಬಗ್ಗೆ ಟ್ವಿಟರ್‌ನಲ್ಲಿ ಹಲವಾರು ಮೀಮ್‌ಗಳು ಹರಿದಾಡಿವೆ.

ಅದೇ ವೇಳೆ ಮೇಕ್‌ಓವರ್‌ನಿಂದ ತಮ್ಮ ಆತ್ಮವಿಶ್ವಾಸ ಹೆಚ್ಚಿದೆ. ನಾನು ಸುಂದರವಾಗಿ ಕಾಣುತ್ತಿದ್ದೇನೆ. ನನಗೆ ಇದನ್ನು ನಂಬಲಾಗುತ್ತಿಲ್ಲ. ಸಂಧ್ಯಾ ಅವರಿಗೆ ಧನ್ಯವಾದಗಳು ಎಂದು ರಾನು ಪ್ರತಿಕ್ರಿಯಿಸಿರುವುದಾಗಿ ಬಾಲಿವುಡ್ ಗಲಿಯಾರಾ ಡಾಟ್ ಕಾಮ್ ವರದಿ ಮಾಡಿದೆ.

ಇದನ್ನೂ ಓದಿ: ರಾನು ಮಂಡಲ್ಎಂಬ ಇಂಟರ್‌ನೆಟ್‌ ಸ್ಟಾರ್!

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು