ಗುರುವಾರ , ಆಗಸ್ಟ್ 5, 2021
28 °C

ಕೋವಿಡ್ ಲಸಿಕೆ ಪ್ರಮಾಣಪತ್ರಕ್ಕೆ ಪಾಸ್‌ಪೋರ್ಟ್‌ ಸಂಖ್ಯೆ ಲಿಂಕ್ ಮಾಡುವುದು ಹೇಗೆ?

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಪ್ರಯಾಣಕ್ಕೆ ಅಡ್ಡಿಯಾಗುವುದನ್ನು ತಪ್ಪಿಸುವ ಸಲುವಾಗಿ ಲಸಿಕೆ ಪ್ರಮಾಣಪತ್ರಕ್ಕೆ ಪಾಸ್‌ಪೋರ್ಟ್ ಸಂಖ್ಯೆ ಲಿಂಕ್ ಮಾಡಲು ಕೊ–ವಿನ್ (Co-WIN) ಪೋರ್ಟಲ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ.

ಹೊಸ ಫೀಚರ್ ಕುರಿತ ಮಾಹಿತಿ ಮತ್ತು ಅದನ್ನು ಬಳಸುವುದು ಹೇಗೆಂಬ ಸ್ಕ್ರೀನ್‌ಶಾಟ್‌ಗಳನ್ನು ಆರೋಗ್ಯ ಸೇತು ಆ್ಯಪ್‌ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಲಾಗಿದೆ.

ಕಲಿಕೆ, ಉದ್ಯೋಗದ ಉದ್ದೇಶಕ್ಕೆ ವಿದೇಶಕ್ಕೆ ತೆರಳುವವರು ಮತ್ತು ಒಲಿಂಪಿಕ್ಸ್‌ಗೆ ತೆರಳುವವರನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಲಸಿಕೆ ನೀತಿಯಲ್ಲಿ ಬದಲಾವಣೆ ಮಾಡಿದ ಬೆನ್ನಲ್ಲೇ ಕೊ–ವಿನ್ ಪೋರ್ಟಲ್‌ನಲ್ಲಿ ಹೊಸ ಫೀಚರ್ ನೀಡಲಾಗಿದೆ.

ಲಸಿಕೆ ಪ್ರಮಾಣಪತ್ರಕ್ಕೆ ಪಾಸ್‌ಪೋರ್ಟ್‌ ಸಂಖ್ಯೆ ಲಿಂಕ್ ಮಾಡುವ ವಿಧಾನ ಹೀಗಿದೆ;

ಹಂತ – 1

cowin.gov.in ಪೋರ್ಟಲ್‌ಗೆ ಲಾಗಿನ್ ಆಗಬೇಕು.

ಹಂತ – 2

ಬಲ ಭಾಗದಲ್ಲಿ, ನೋಂದಾಯಿತ ಮೊಬೈಲ್ ಸಂಖ್ಯೆಯ ನಂತರ ಕಾಣಿಸುವ ಡ್ರಾಪ್‌ಡೌನ್ ಮೆನುವಿನಲ್ಲಿ ‘Raise an Issue’ ಆಯ್ಕೆ ಮಾಡಬೇಕು.

ಹಂತ – 3

‘Raise an Issue’ ಆಯ್ಕೆ ಮಾಡಿದ ಬಳಿಕ ‘Add Passport Details’ ಆಯ್ಕೆ ಮಾಡಬೇಕು.

ಹಂತ – 4

ಈ ಹಂತವನ್ನು ಪೂರ್ತಿಗೊಳಿಸುತ್ತಿದ್ದಂತೆಯೇ ಹೊಸ ಪುಟ ತೆರೆದುಕೊಳ್ಳಲಿದೆ. ಅಲ್ಲಿ ‘select member’ ಕ್ಲಿಕ್ ಮಾಡಿ ಯಾರ ಪಾಸ್‌ಪೋರ್ಟ್‌ ಸಂಖ್ಯೆ ಲಿಂಕ್ ಮಾಡಬೇಕೋ ಅವರನ್ನು ಆಯ್ಕೆ ಮಾಡಬೇಕು, ಕೆಳಗಿನ ಸಾಲಿನಲ್ಲಿ ಸಂಖ್ಯೆಯನ್ನು ನಮೂದಿಸಬೇಕು.

ಒಂದು ವೇಳೆ ಲಸಿಕೆ ಪ್ರಮಾಣಪತ್ರದಲ್ಲಿರುವ ಹೆಸರಿಗೂ ಪಾಸ್‌ಪೋರ್ಟ್‌ನಲ್ಲಿರುವ ಹೆಸರಿಗೂ ತಾಳೆಯಾಗದಿದ್ದರೆ ಮರಳಿ ಹಂತ 1 ಮತ್ತು ಹಂತ 2 ಅನ್ನು ಪೂರೈಸಬೇಕು. ಬಳಿಕ ‘Raise an Issue’ ಆಯ್ಕೆ ಮಾಡುವ ಬದಲಿಗೆ ‘Certificate Correction’ ಆಯ್ಕೆ ಮಾಡಬೇಕು.

ಇದನ್ನು ಆಯ್ಕೆ ಮಾಡಿದಾಗ ಮತ್ತೊಂದು ಪುಟ ತೆರೆದುಕೊಳ್ಳಲಿದೆ. ಅಲ್ಲಿ ಯಾರ ವಿವರವನ್ನು ತಿದ್ದುಪಡಿ ಮಾಡಬೇಕೋ ಆ ಸದಸ್ಯರ ಹೆಸರನ್ನು ಆಯ್ಕೆ ಮಾಡಬೇಕು ಹಾಗೂ ತಿದ್ದುಪಡಿ ಮಾಡಬೇಕು. ಈ ಹಂತದಲ್ಲಿ, ಹೆಸರು ಇರುವ ಬಾಕ್ಸ್‌ ಮೇಲೆ ಕ್ಲಿಕ್ ಮಾಡಿದ ಬಳಿಕ ಕೆಳಗಿನ ಸಾಲಿನಲ್ಲಿ ಸರಿಯಾದ ಹೆಸರನ್ನು ನಮೂದಿಸಬೇಕು ಮತ್ತು ‘continue’ ಆಯ್ಕೆ ಮಾಡಬೇಕು.

ಹೆಸರನ್ನು ಒಮ್ಮೆ ಮಾತ್ರ ಬದಲಾಯಿಸಲು ಅವಕಾಶವಿದೆ. ಹೀಗಾಗಿ ಹೆಸರು ನಮೂದಿಸುವಾಗ ತಪ್ಪುಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಉತ್ತಮ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು