ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ: ಎರಡು ಅಂತಸ್ತಿನ ಮನೆಯನ್ನೇ 500 ಅಡಿ ಸರಿಸಿ ಹೆದ್ದಾರಿಗೆ ಜಾಗ ಬಿಟ್ಟ ರೈತ

Last Updated 21 ಆಗಸ್ಟ್ 2022, 2:54 IST
ಅಕ್ಷರ ಗಾತ್ರ

ಚಂಡೀಗಡ: ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕೆ ಅನುಕೂಲವಾಗುವಂತೆ ಪಂಜಾಬ್‌ನಲ್ಲಿ ರೈತರೊಬ್ಬರು ತಮ್ಮ ಎರಡು ಅಂತಸ್ತಿನ ಮನೆಯನ್ನು 500 ಅಡಿ ದೂರಕ್ಕೆ ಸ್ಥಳಾಂತರಿಸುವ ಮೂಲಕ ಗಮನ ಸೆಳೆದಿದ್ದಾರೆ.

ಸಂಗ್ರೂರ್‌ನ ರೋಶನ್‌ವ್ಲಾ ಗ್ರಾಮದ ರೈತ ಸುಖ್ವಿಂದರ್ ಸಿಂಗ್ ಸುಖಿ ಅವರು ತಮ್ಮ ಹೊಲದಲ್ಲಿ ಮನೆ ಕಟ್ಟಿಕೊಂಡಿದ್ದರು. ಆದರೆ, ಕಟ್ಟಡ ನಿರ್ಮಿಸಿದ್ದ ಸ್ಥಳದಲ್ಲಿ ದೆಹಲಿ - ಅಮೃತಸರ - ಕತ್ರಾ ಎಕ್ಸ್‌ಪ್ರೆಸ್‌ವೇ ಮಾರ್ಗ ಹಾದುಹೋಗುತ್ತಿದೆ. ಈ ಹಿನ್ನೆಲೆಯಲ್ಲಿ ಸುಖ್ವಿಂದರ್ ಸಿಂಗ್ ತಮ್ಮ ಮನೆಯನ್ನು ಬೇರೆಡೆಗೆ ಸ್ಥಳಾಂತರಿಸಲು ಮುಂದಾದರು.

ಇದ‌ಕ್ಕೂ ಮುನ್ನ ಪರಿಹಾರ ನೀಡುವ ಮೂಲಕ ಕಟ್ಟಡವನ್ನು ನೆಲಸಮ ಮಾಡಲು ಸರ್ಕಾರ ಮುಂದಾಗಿತ್ತು. ಆದರೆ, ಸುಖ್ವಿಂದರ್ ಮನೆಯನ್ನು ಕೆಡವುವ ಬದಲು ಬೇರೆ ಜಾಗಕ್ಕೆಸ್ಥಳಾಂತರಿಸಲು ಮಾಡುತ್ತಿದ್ದೇವೆ.

‘ನಮ್ಮ ಮನೆ ನಿರ್ಮಿಸಿರುವ ಸ್ಥಳದಲ್ಲಿ ಎಕ್ಸ್‌ಪ್ರೆಸ್‌ವೇ ಮಾರ್ಗ ಬರುತ್ತಿರುವುದರಿಂದ ನಾವು ಮನೆಯನ್ನು ಬೇರೆ ಕಡೆಗೆ ಸ್ಥಳಾಂತರಿಸಲು ಮಾಡುತ್ತಿದ್ದೇವೆ. ನಮಗೆ ಪರಿಹಾರವನ್ನು ನೀಡಲಾಯಿತು. ಆದರೆ, ಇನ್ನೊಂದು ಮನೆಯನ್ನು ನಿರ್ಮಿಸಲು ನಾನು ಬಯಸಲಿಲ್ಲ. ಈಗಿರುವ ಮನೆಯನ್ನು ನಿರ್ಮಿಸಲು ಸುಮಾರು ₹1.5 ಕೋಟಿ ಖರ್ಚು ಮಾಡಿದ್ದೇನೆ. ಇದೀಗ ಅದನ್ನು 250 ಅಡಿಗಳಷ್ಟು ಸ್ಥಳಾಂತರಿಸಲಾಗಿದೆ’ ಎಂದು ಸುಖ್ವಿಂದರ್ ಸಿಂಗ್ ಸುಖಿ ಸುದ್ದಿಸಂಸ್ಥೆ ‘ಎಎನ್ಐ’ಗೆ ತಿಳಿಸಿದ್ದಾರೆ.

ಪ್ರಯಾಣಿಕರ ಪ್ರಯಾಣದ ಸಮಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ‘ಭಾರತಮಾಲಾ’ ಯೋಜನೆಯಡಿ ಎಕ್ಸ್‌ಪ್ರೆಸ್‌ವೇಯನ್ನು ನಿರ್ಮಾಣ ಮಾಡುತ್ತಿದೆ. ಈ ಎಕ್ಸ್‌ಪ್ರೆಸ್‌ವೇ ಮಾರ್ಗ ಹರಿಯಾಣ, ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರದ ಮೂಲಕ ಹಾದುಹೋಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT