ಬುಧವಾರ, ಮಾರ್ಚ್ 29, 2023
26 °C

Video | ಗವಿ ಸಿದ್ದೇಶ್ವರ ಮಹಾರಥೋತ್ಸವ: ಅಜ್ಜನ ಜಾತ್ರೆಗೆ ಜನಸಾಗರ

 

ಗವಿಸಿದ್ದೇಶ್ವರ ಜಾತ್ರೆ ಕೊಪ್ಪಳದ ಬಹುದೊಡ್ಡ ಸಾಂಸ್ಕೃತಿಕ–ಧಾರ್ಮಿಕ ಸಡಗರ. ಕೋವಿಡ್‌ ಕಾರಣದಿಂದ ಎರಡು ವರ್ಷ ಈ ಸಂಭ್ರಮವನ್ನು ಕೊಪ್ಪಳ ಜನ ತಪ್ಪಿಸಿಕೊಂಡಿದ್ದರು. ಆದರೆ, ಭಾನುವಾರ ಸಂಜೆ ನಡೆದ ಅಜ್ಜನ ಅದ್ಧೂರಿ ಮಹಾರಥೋತ್ಸವ ಆ ಕೊರತೆಯನ್ನು ನೀಗಿಸಿತು. ಲಕ್ಷಾಂತರ ಭಕ್ತರು ಅಜ್ಜನ ಆಶೀರ್ವಾದ ಪಡೆದು ಕೃತಾರ್ಥರಾದರು.