ಭಾನುವಾರ, ಜೂನ್ 26, 2022
26 °C

Video | ಬೆಂಗಳೂರಿನಲ್ಲಿ ಮೇ ತಿಂಗಳಲ್ಲೇ ಅಧಿಕ ಮಳೆ; ಕಾರಣವೇನು?

ಧರೆಗುರುಳುವ ಮರಗಳು, ತಾಸುಗಟ್ಟಲೇ ಸರದಿಯಲ್ಲಿ ನಿಲ್ಲುವ ವಾಹನಗಳು, ದ್ವೀಪದಂತಾಗುವ ಬಡಾವಣೆಗಳು. ಬೆಂಗಳೂರಿನಲ್ಲಿ ಜೋರು ಮಳೆಯಾದರೆ ಸಾಕು ಈ ದೃಶ್ಯ ಮತ್ತು ಸಮಸ್ಯೆಗಳು ಸಾಮಾನ್ಯ ಎನ್ನುವಂತಿರುತ್ತವೆ. ಅದರಲ್ಲಿಯೂ, ಬಿರುಬಿಸಿಲಿನ ಮೇ ತಿಂಗಳಲ್ಲಿಯೇ ಅಧಿಕ ಮಳೆಯನ್ನು ಮಹಾನಗರ ಕಾಣುತ್ತಿದೆ. ಚಂಡಮಾರುತದ ಆರ್ಭಟ ಮತ್ತು ಅವಧಿಗಿಂತ ಒಂದು ತಿಂಗಳು ಮುಂಚಿತವಾಗಿಯೇ ಮುಂಗಾರು ರಾಜ್ಯವನ್ನು ಪ್ರವೇಶಿಸುವ ಸಾಧ್ಯತೆ ಇರುವುದರಿಂದ ಅಧಿಕ ಮಳೆಯಾಗುತ್ತಿದೆ ಎನ್ನುತ್ತಾರೆ ಹವಾಮಾನ ಇಲಾಖೆ ಅಧಿಕಾರಿಗಳು. 

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...