ಸೋಮವಾರ, ಸೆಪ್ಟೆಂಬರ್ 26, 2022
24 °C

Video: ಬೆಂಗಳೂರಿನಲ್ಲಿ ‘ಸೋಕ್‌’ ಕರಕುಶಲ ಮೇಳದ ಆಕರ್ಷಣೆ

ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್‌ ಆವರಣದಲ್ಲಿ ಇಂಡಿಯನ್ ಹಾತ್ ಫೆಸ್ಟಿವಲ್ ವತಿಯಿಂದ ಆಯೋಜಿಸಿರುವ ‘ಸೋಕ್‌’ ಕರಕುಶಲ ಮೇಳವು ಕರಕುಶಲ ವಸ್ತುಗಳ ಪ್ರಿಯರನ್ನು ಆಕರ್ಷಿಸುತ್ತಿದೆ. ಸೆ.25ರವರೆಗೆ ನಡೆಯುವ ಈ ಮೇಳದಲ್ಲಿ ಕಾಶ್ಮೀರದ ಮೃದುವಾದ ಪಶ್ಮಿನಾ ಸ್ಕಾರ್ಫ್‌, ಮಧ್ಯ ಪ್ರದೇಶದ ಚಂದೇರಿ ಸಿಲ್ಕ್, ಕ್ಯಾನ್ವಾಸ್ ಮೇಲೆ ಪೌರಾಣಿಕ ಕತೆ ಹೇಳುವ ಒಡಿಸ್ಸಾದ ಪಟ್ಟಚಿತ್ರ, ಲೋಹದಿಂದಲೇ ತಯಾರಾದ ಪಶ್ಚಿಮ ಬಂಗಾಳದ ಆಲಂಕಾರಿಕ ಸಾಮಗ್ರಿ, ಬಾಳೆನಾರಿನಿಂದ ಮಾಡಿದ ಆಭರಣ ಸಂಗ್ರಹ ಪೆಟ್ಟಿಗೆ, ಮಣಿಪುರದ ಬಿದಿರಿನ ಬ್ಯಾಗ್, ಆಗ್ರಾದ ಮಾರ್ಬಲ್ ದೀಪಗಳು ಸೇರಿದಂತೆ ನೆಚ್ಚಿನ ಎಲ್ಲ ಕರಕುಶಲ ವಸ್ತುಗಳು ಒಂದೇ ಸೂರಿನಡಿ ಸಿಗುತ್ತಿವೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್‌ ನೋಡಿ...