ಶುಕ್ರವಾರ, ಮಾರ್ಚ್ 31, 2023
32 °C

Video | ಉಡುಪಿಯ ಕಾರ್ಕಳದಲ್ಲಿ ಪರಶುರಾಮ ಥೀಂ ಪಾರ್ಕ್‌ ಲೋಕಾರ್ಪಣೆ

 

ತುಳುನಾಡಿನ ಸೃಷ್ಟಿಕರ್ತ ಪರಶುರಾಮನ 33 ಅಡಿ ಎತ್ತರದ ಕಂಚಿನ ಪ್ರತಿಮೆ ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ಬೈಲೂರಿನ ಉಮಿಕಲ್‌ ಬೆಟ್ಟದ ತುದಿಯಲ್ಲಿ ಕಂಗೊಳಿಸುತ್ತಿದೆ. ಒಂದು ಕೈಯಲ್ಲಿ ಬಿಲ್ಲು, ಮತ್ತೊಂದು ಕೈಯಲ್ಲಿ ಕೊಡಲಿ ಹಿಡಿದಿರುವ ಭಂಗಿಯಲ್ಲಿ ನಿಂತಿರುವ ಪರಶುರಾಮನ ಪ್ರತಿಮೆ ಬೆರಗು ಮೂಡಿಸುವಂತಿದೆ. ಬರೋಬ್ಬರಿ 15 ಟನ್ ಕಂಚು ಬಳಸಿ 2 ಕೋಟಿ ರೂಪಾಯಿ ವೆಚ್ಚದಲ್ಲಿ ಶಿಲ್ಪಿ ಕೃಷ್ಣಾನಾಯ್ಕ ಪ್ರತಿಮೆಯನ್ನು ತಯಾರಿಸಿದ್ದಾರೆ.