ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನಿಸ್ತಾನದಲ್ಲಿ ಕೈದಿಗಳ ಬಿಡುಗಡೆ: ಮಹಿಳಾ ನ್ಯಾಯಾಧೀಶರಿಗೆ ಜೀವಭಯ

Last Updated 3 ಸೆಪ್ಟೆಂಬರ್ 2021, 21:13 IST
ಅಕ್ಷರ ಗಾತ್ರ

ದಿ ಹೇಗ್‌: ತಾಲಿಬಾನ್‌ ತೆಕ್ಕೆಗೆ ಬಂದಿರುವ ಅಫ್ಗಾನಿಸ್ತಾನದ, 250ಕ್ಕೂ ಮಹಿಳಾ ನ್ಯಾಯಾಧೀಶರು ಜೀವ ಭಯದಲ್ಲಿದ್ದಾರೆ.

ಈ ಹಿಂದೆ ಅವರು, ಯಾವ ಅಪರಾಧಿಗಳಿಗೆ ಶಿಕ್ಷೆ ವಿಧಿಸಿ ಜೈಲಿಗಟ್ಟಿದ್ದರೋ ಆ ಕೈದಿಗಳೆಲ್ಲ ಈಗ ತಾಲಿಬಾನ್‌ ಆಡಳಿತದಲ್ಲಿ ಬಿಡುಗಡೆಯಾಗಿದ್ದಾರೆ. ಅಲ್ಲದೇ ತಮ್ಮನ್ನು ಕಾರಾಗೃಹವಾಸಕ್ಕೆ ತಳ್ಳಿದ ಮಹಿಳಾ ನ್ಯಾಯಾಧೀಶರಿಗಾಗಿ ಹುಡುಕಾಟ ನಡೆಸಿದ್ದಾರೆ. ಅವರ ಕಣ್ತಪ್ಪಿಸಿ ದೇಶದಿಂದ ಪರಾರಿಯಾಗುವುದೇ ಈ ಮಹಿಳಾ ನ್ಯಾಯಾಧೀಶರಿಗೆ ದೊಡ್ಡ ಸವಾಲಾಗಿದೆ.

ಕಳೆದ ವಾರಗಳಲ್ಲಿ ಕೆಲವರು ಅಲ್ಲಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಉಳಿದವರನ್ನು ಪಾರು ಮಾಡುವ ಪ್ರಯತ್ನಗಳು ನಡೆದಿವೆ ಎನ್ನುತ್ತಾರೆ ಈ ದಿಸೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಯಕರ್ತರು.

ನ್ಯಾಯಾಂಗ ವ್ಯವಸ್ಥೆಯಲ್ಲಿದ್ದ ಮಹಿಳೆಯರೇ ಅವರ ಮೊದಲ ಗುರಿಯಾಗಿದ್ದಾರೆ. ಅಲ್ಲಿ, ಜನವರಿಯಲ್ಲಿ ಸುಪ್ರೀಂ ಕೋರ್ಟ್‌ನ ಇಬ್ಬರು ಮಹಿಳಾ ನ್ಯಾಯಮೂರ್ತಿಗಳನ್ನು ಗುಂಡಿಟ್ಟು ಕೊಲ್ಲಲಾಗಿತ್ತು.

ಹೀಗಾಗಿ, ಈಗ ತಾಲಿಬಾನ್‌ ಪಡೆಯದೇ ಆಡಳಿತ ಇರುವಾಗ, ತಪ್ಪಿಸಿಕೊಳ್ಳುವ ಮಾರ್ಗ ತಿಳಿಯದೇ ಸಂಕಷ್ಟದಲ್ಲಿದ್ದಾರೆ. ಯಾವುದೇ ಕ್ಷಣದಲ್ಲಾದರೂ ಬಂದೂಕಿನ ಬಾಯಿಗೆ ಆಹಾರವಾಗುವ ಭಯ ಅವರನ್ನು ಆವರಿಸಿದೆ.

‘ತಾಲಿಬಾನ್‌ ಪಡೆಯು ಎಲ್ಲಾ ಕೈದಿಗಳನ್ನು ಬಿಡುಗಡೆ ಮಾಡಿದ್ದು, ಮಹಿಳಾ ನ್ಯಾಯಾಧೀಶರ ಜೀವಕ್ಕೆ ಕುತ್ತಾಗಿದೆ’ ಎನ್ನುತ್ತಾರೆ ಯುರೋಪ್‌ಗೆ ಪರಾರಿಯಾಗಿರುವ, ತಾವಿರುವ ಸ್ಥಳದ ಮಾಹಿತಿಯನ್ನು ಬಿಟ್ಟುಕೊಡದ ನ್ಯಾಯಾಧೀಶೆಯೊಬ್ಬರು.

‘ನನ್ನನ್ನು ಹುಡುಕಿಕೊಂಡು ನಾಲ್ಕೈದು ಮಂದಿ ಮನೆಗೆ ಬಂದಿದ್ದರು. ಮನೆಯಲ್ಲಿದ್ದವರಿಗೆ ‘ನ್ಯಾಯಾಧೀಶೆ ಎಲ್ಲಿ’ ಎಂದು ಕೇಳಿದ್ದರು. ಅವರೆಲ್ಲರೂ, ನಾನು ಜೈಲಿಗೆ ಕಳುಹಿಸಿದವರೇ’ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT