ವೆಲ್ಲಿಂಗ್ಟನ್: ನ್ಯೂಜಿಲೆಂಡ್ನಲ್ಲಿ ಮತ್ತೆ ಭೂಕಂಪನ ಉಂಟಾಗಿದ್ದು, ಶನಿವಾರದಂದು ರಿಕ್ಟರ್ ಮಾಪನದಲ್ಲಿ 6.4 ತೀವ್ರತೆ ದಾಖಲಾಗಿದೆ ಎಂದು ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ ವರದಿ ಮಾಡಿದೆ.

ಈ ಬಾರಿ ನ್ಯೂಜಿಲೆಂಡ್ನ ಉತ್ತರ ದ್ವೀಪದಲ್ಲಿ ಭೂಮಿ ಕಂಪಿಸಿದೆ. ಭೂಕಂಪನದಿಂದ ಯಾವುದೇ ಗಂಭೀರವಾದ ಹಾನಿ ಅಥವಾ ಗಾಯದ ಬಗ್ಗೆ ವರದಿಯಾಗಿಲ್ಲ.

ಗಿಸ್ಬೋರ್ನ್ ಕಚಲಾಚೆಯ ಮೇಲೆ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದೆ ಎಂದು ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.

ಇದನ್ನೂ ಓದಿ:ನ್ಯೂಜಿಲೆಂಡ್ ಭೂಕಂಪನ; ಸುನಾಮಿ ಭೀತಿಯ ಆತಂಕ ದೂರ

ಶುಕ್ರವಾರದಂದು ನ್ಯೂಜಿಲೆಂಡ್ನ ಈಶಾನ್ಯಕ್ಕೆ ದಕ್ಷಿಣ ಪೆಸಿಫಿಕ್ನಲ್ಲಿ 1,000 ಕಿ.ಮೀ. ದೂರದಲ್ಲಿ ಕೆರ್ಮಾಡೆಕ್ ದ್ವೀಪ ಪ್ರದೇಶದಲ್ಲಿ 8.1 ತೀವ್ರತೆಯ ಭೂಕಂಪನ ಸಂಭವಿಸಿತ್ತು. ಪರಿಣಾಮ 11 ಮೀಟರ್ ಎತ್ತರದ ಸುನಾಮಿ ಅಲೆಗಳು ಅಪ್ಪಳಿಸುವ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು.

ಇದಕ್ಕೂ ಮೊದಲು ಸಂಭವಿಸಿದ ನಡುಕಗಳಲ್ಲಿ 7.4 ಹಾಗೂ 7.3 ತೀವ್ರತೆಯ ಭೂಕಂಪನಗಳು ದಾಖಲಾಗಿದ್ದವು. ಇದು ಜನರಲ್ಲಿ ಭಯ ಭೀತಿಗೆ ಕಾರಣವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.