ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಲಿಟರಿ ಆಡಳಿತದ ಮ್ಯಾನ್ಮಾರ್ ವಿರುದ್ಧ ಹೊಸ ನಿರ್ಬಂಧಕ್ಕೆ ಜೋ ಬೈಡನ್ ಆದೇಶ

Last Updated 11 ಫೆಬ್ರುವರಿ 2021, 1:39 IST
ಅಕ್ಷರ ಗಾತ್ರ

ವಾಷಿಂಗ್ಟನ್: ಆಂಗ್ ಸಾನ್ ಸೂಕಿ ಮತ್ತಿತರ ನಾಯಕರನ್ನು ಬಂಧಿಸಿ ಸೇನಾ ದಂಗೆ ಮೂಲಕ ಮಿಲಿಟರಿ ಆಡಳಿತ ಅಸ್ತಿತ್ವಕ್ಕೆ ಬಂದಿರುವ ಮ್ಯಾನ್ಮಾರ್‌ಗೆ ಬುಧವಾರ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೊಸ ನಿರ್ಬಂಧವನ್ನು ಹೇರಿದ್ದಾರೆ.

ಈ ಹೊಸ ಕಾರ್ಯಕಾರಿ ಆದೇಶವು ಮ್ಯಾನ್ಮಾರ್‌ನ ಜನರಲ್‌ಗಳು ಅಮೆರಿಕದ 1 ಬಿಲಿಯನ್ ಡಾಲರ್ ಆಸ್ತಿಯ ಬಳಕೆಯನ್ನು ನಿರ್ಬಂಧಿಸುತ್ತದೆ ಎಂದು ಬೈಡನ್ ಹೇಳಿದ್ದಾರೆ. ಮತ್ತಷ್ಟು ಕ್ರಮಗಳು ಸದ್ಯದಲ್ಲೇ ಬರಲಿವೆ ಎಂದು ತಿಳಿಸಿದ್ದಾರೆ.

"ಮಿಲಿಟರಿ ತಾನು ವಶಪಡಿಸಿಕೊಂಡಿರುವ ಅಧಿಕಾರವನ್ನು ತ್ಯಜಿಸಬೇಕು ಮತ್ತು ಬರ್ಮಾದ ಜನರ ಇಚ್ಛೆಗೆ ಗೌರವ ತೋರಿಸಬೇಕು" ಎಂದು ಬೈಡೆನ್ ಹೇಳಿದ್ಧಾರೆ.

ಹೊಸ ನಿರ್ಬಂಧಗಳು ಮ್ಯಾನ್ಮಾರ್‌ನ ಮಿಲಿಟರಿ ಮುಖಂಡರಿಗೆ ಅನುಕೂಲವಾಗುವ ಅಮೆರಿಕ ಸ್ವತ್ತುಗಳನ್ನು ಸ್ಥಗಿತಗೊಳಿಸಲು ನಮ್ಮ ಆಡಳಿತಕ್ಕೆ ಅನುವು ಮಾಡಿಕೊಡುತ್ತದೆ. ಇದೇ ಸಮಯದಲ್ಲಿ ಆರೋಗ್ಯ ಕಾರ್ಯಕ್ರಮಗಳು ಸೇರಿದಂತೆ ನಾಗರಿಕ ಸಮಾಜದ ಗುಂಪುಗಳು ಮತ್ತು ಮ್ಯಾನ್ಮಾರ್ ದೇಶದ ಜನರಿಗೆ ಅನುಕೂಲವಾಗುವ ಇತರ ಕ್ಷೇತ್ರಗಳ ಕಾರ್ಯಕ್ರಮಗಳಿಗೆ ಬೆಂಬಲವನ್ನು ಉಳಿಸಿಕೊಳ್ಳುತ್ತದೆ ಎಂದು ಹೇಳಿದರು. ಈ ವಾರದ ಅಂತ್ಯದಲ್ಲಿ ನಿರ್ಬಂಧಗಳ ನಿರ್ದಿಷ್ಟ ಗುರಿಗಳನ್ನು ಗುರುತಿಸಲು ಆಡಳಿತವು ಯೋಜಿಸಿದೆ ಎಂದು ಅವರು ತಿಳಿಸಿದ್ದಾರೆ.

"ಬರ್ಮಾದ ಜನರು ತಮ್ಮ ಧ್ವನಿ ಏನೆಂಬುದನ್ನು ಕೇಳಿಸುವಂತೆ ಗಟ್ಟಿಯಾಗಿ ಹೇಳುತ್ತಿದ್ದಾರೆ. ಜಗತ್ತು ಇದನ್ನು ನೋಡುತ್ತಿದೆ" ಎಂದು ಬೈಡನ್ ಹೇಳಿದರು. "ನಾವು ಹೆಚ್ಚುವರಿ ಕ್ರಮಗಳನ್ನು ಹೇರಲು ಸಿದ್ಧರಾಗಿರುತ್ತೇವೆ ಮತ್ತು ಈ ಪ್ರಯತ್ನಗಳಲ್ಲಿ ನಮ್ಮೊಂದಿಗೆ ಸೇರಲು ಇತರ ರಾಷ್ಟ್ರಗಳನ್ನು ಒತ್ತಾಯಿಸಲು ನಾವು ನಮ್ಮ ಅಂತರರಾಷ್ಟ್ರೀಯ ಪಾಲುದಾರರೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ." ಎಂದು ಅವರು ಹೇಳಿದ್ದಾರೆ.

ಬೈಡನ್ ಶ್ವೇತಭವನದಿಂದ ಈ ಹೇಳಿಕೆ ನೀಡುವುದಕ್ಕೂ ಮುನ್ನ, ಮ್ಯಾನ್ಮಾರ್ ಭದ್ರತಾ ಪಡೆಗಳು ತಮ್ಮ ಬಲವನ್ನು ಬಳಸಿಕೊಂಡು ಸೂಕಿ ಅವರ ರಾಜಕೀಯ ಪಕ್ಷದ ಪ್ರಧಾನ ಕಚೇರಿಯ ಮೇಲೆ ದಾಳಿ ನಡೆಸಿದ ನಂತರವೂ. ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಸ್ವಾಧೀನದ ವಿರುದ್ಧ ದೊಡ್ಡ ಜನಸಮೂಹವು ಮತ್ತೆ ಬೀದಿಗಿಳಿದು ಹೋರಾಟ ಆರಂಭಿಸಿದೆ.

ಅಮೆರಿಕದ ಕ್ರಮವು ಮ್ಯಾನ್ಮಾರ್‌ನ ಮಿಲಿಟರಿ ಆಡಳಿತದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಮುಸ್ಲಿಂ ರೋಹಿಂಗ್ಯಾ ಅಲ್ಪಸಂಖ್ಯಾತರ ವಿರುದ್ಧದ ದಾಳಿಯಿಂದಾಗಿ ಅನೇಕ ಮಿಲಿಟರಿ ನಾಯಕರು ಈಗಾಗಲೇ ನಿರ್ಬಂಧಗಳಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT