ಬುಧವಾರ, ಜನವರಿ 20, 2021
29 °C

Covid-19 World Updates | ಬ್ರೆಜಿಲ್‌ನಲ್ಲಿ ಒಂದೇ ದಿನ ಹೊಸ ಪ್ರಕರಣಗಳು ದ್ವಿಗುಣ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಬ್ರೆಜಿಲ್: ಕಳೆದ 24 ಗಂಟೆಗಳಲ್ಲಿ ಬ್ರೆಜಿಲ್‌ನಲ್ಲಿ ಕೋವಿಡ್‌ನಿಂದಾಗಿ 630 ಜನರು ಸಾವಿಗೀಡಾಗಿದ್ದು, ಮಂಗಳವಾರದ ವೇಳೆಗೆ ಕೊರೊನಾ ಸೋಂಕಿತರ ಸಂಖ್ಯೆ 1,70,000ಕ್ಕೂ ಹೆಚ್ಚಾಗಿದೆ ಎಂದು ಬ್ರೆಜಿಲ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ.

ಮಂಗಳವಾರ ಹೊಸದಾಗಿ 31,100 ಕೋವಿಡ್-19 ಪ್ರಕರಣಗಳು ದಾಖಲಾಗಿದ್ದು, ಹಿಂದಿನ ದಿನ ದಾಖಲಾಗಿದ್ದ 16,207 ಪ್ರಕರಣಗಳಿಗಿಂತ ದ್ವಿಗುಣಗೊಂಡಿದೆ. ಈ ಮೂಲಕ ಸೋಂಕಿತರ ಸಂಖ್ಯೆ 61,21,449ಕ್ಕೆ ಏರಿಕೆಯಾಗಿದೆ. ಸೋಮವಾರ ವರದಿಯಾದ ಸಾವಿನ ಸಂಖ್ಯೆ 302ಕ್ಕಿಂತ ಹೆಚ್ಚಾಗಿದ್ದು, ಒಟ್ಟಾರೆ ಮೃತಪಟ್ಟವರ ಸಂಖ್ಯೆ 1,70,179ಕ್ಕೆ ಏರಿಕೆಯಾಗಿದೆ.

ಜಗತ್ತಿನಾದ್ಯಂತ ಒಟ್ಟು 6.01 ಕೋಟಿಗೂ ಅಧಿಕ ಜನರಿಗೆ ಸೋಂಕು ತಲುಗಿದ್ದು, 1.71 ಕೋಟಿಗೂ ಅಧಿಕ ಸಕ್ರಿಯ ಪ್ರಕರಣಗಳಿವೆ. ಈವರೆಗೂ 4.15 ಕೋಟಿಗೂ ಅಧಿಕ ಜನರು ಗುಣಮುಖರಾಗಿದ್ದು, ಒಟ್ಟಾರೆ 14,14,925 ಜನರು ಸಾವಿಗೀಡಾಗಿದ್ದಾರೆ.

ಅಮೆರಿಕದ ಬಳಿಕ ಕೋವಿಡ್‌ನಿಂದ ಸಾವಿಗೀಡಾದವರ ಪಟ್ಟಿಯಲ್ಲಿ ಬ್ರೆಜಿಲ್ ಎರಡನೇ ಸ್ಥಾನದಲ್ಲಿದ್ದು, ಒಟ್ಟಾರೆ ಸೋಂಕು ಪ್ರಕರಣಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಕಳೆದ ವಾರದಿಂದ ಮೃತರ ಸಂಖ್ಯೆ ಮತ್ತು ಸೋಂಕಿತ ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚಾಗುತ್ತಿರುವುದರಿಂದಾಗಿ ಕೋವಿಡ್-19‌ ಎರಡನೇ ಅಲೆಯ ಪ್ರಾರಂಭದ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಇನ್ನುಳಿದಂತೆ ಅಮೆರಿಕದಲ್ಲಿ ಒಟ್ಟಾರೆ 1,29,55,007 ಜನರಿಗೆ ಸೋಂಕು ತಗುಲಿದ್ದು, 50,52,432 ಸಕ್ರಿಯ ಪ್ರಕರಣಗಳೊಂದಿಗೆ 76,36,684 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಈವರೆಗೂ 2,65,891 ಜನರು ಸಾವಿಗೀಡಾಗಿದ್ದಾರೆ.

ಭಾರತದಲ್ಲಿ 92,22,216, ಫ್ರಾನ್ಸ್‌ನಲ್ಲಿ 21,53,815, ರಷ್ಯಾದಲ್ಲಿ 21,38,828 ಮತ್ತು ಸ್ಪೇನ್‌ನಲ್ಲಿ 16,14,126 ಜನರಿಗೆ ಸೋಂಕು ತಗುಲಿದೆ.

ಫ್ರಾನ್ಸ್‌ನಲ್ಲಿ 50,237 ಜನರು ಸಾವಿಗೀಡಾಗಿದ್ದು, ರಷ್ಯಾದಲ್ಲಿ 37,031, ಸ್ಪೇನ್‌ನಲ್ಲಿ 43,668, ಇಂಗ್ಲೆಂಡ್‌ನಲ್ಲಿ 55,838 ಮತ್ತು ಇಟಲಿಯಲ್ಲಿ 51,306 ಜನರು ಸಾವಿಗೀಡಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು