ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಟ್ರಾಜೆನೆಕಾ ಲಸಿಕೆಯ ಪ್ರಯೋಗದ ವೇಳೆ ಬ್ರೆಜಿಲ್‌ನಲ್ಲಿ ಸ್ವಯಂಸೇವಕ ಸಾವು

Last Updated 22 ಅಕ್ಟೋಬರ್ 2020, 2:34 IST
ಅಕ್ಷರ ಗಾತ್ರ

ರಿಯೊ ಡಿ ಜನೈರೊ: ಔಷಧ ತಯಾರಕ ಸಂಸ್ಥೆ ‘ಅಸ್ಟ್ರಾಜೆನೆಕಾ’ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದ್ದ ಕೋವಿಡ್ -19 ಲಸಿಕೆಯ ಕ್ಲಿನಿಕಲ್ ಪ್ರಯೋಗದಲ್ಲಿ ಸ್ವಯಂ ಸೇವಕರೊಬ್ಬರು ಮೃತಪಟ್ಟಿದ್ದಾರೆ ಎಂದು ಬ್ರೆಜಿಲ್‌ನ ಆರೋಗ್ಯ ಪ್ರಾಧಿಕಾರ ‘ಅನ್ವಿಸಾ (ನ್ಯಾಷನಲ್‌ ಸ್ಯಾನಿಟರಿ ಸರ್ವೈಲೆನ್ಸ್‌ ಏಜೆನ್ಸಿ) ಬುಧವಾರ ತಿಳಿಸಿದೆ. ಅಲ್ಲದೆ, ಪ್ರಕರಣದ ತನಿಖೆಯ ಮಾಹಿತಿಯನ್ನು ಅದು ಪಡೆದುಕೊಂಡಿರುವುದಾಗಿ ಹೇಳಿದೆ.

ಕ್ಲಿನಿಕಲ್‌ ಟ್ರಯಲ್‌ ವೇಳೆ ಸಂಭವಿಸಿದ ‌ಸಾವಿನ ಘಟನೆ ನಂತರವೂ ಲಸಿಕೆಯ ಪರೀಕ್ಷೆ ಮುಂದುವರಿಯುತ್ತಿರುವುದಾಗಿ ಪ್ರಾಧಿಕಾರ ತಿಳಿಸಿದೆ. ಟ್ರಯಲ್‌ನಲ್ಲಿ ಭಾಗವಹಿಸಿರುವ ಸ್ವಯಂಸೇವಕರ ಗೌಪ್ಯತೆ ಕಾಪಾಡಿರುವ ಪ್ರಾಧಿಕಾರ ಯಾರ ಮಾಹಿತಿಯನ್ನೂ ಈ ವರೆಗೆ ಹಂಚಿಕೊಂಡಿಲ್ಲ.

ಬ್ರೆಜಿಲ್‌ನಲ್ಲಿ ಲಸಿಕೆಯ 3ನೇ ಹಂತದ ಕ್ಲಿನಿಕಲ್ ಟ್ರಯಲ್‌ಗೆ ನೆರವಾಗಿರುವ ಸಾವೊ ಪಾಲೊನ ಫೆಡರಲ್ ವಿಶ್ವವಿದ್ಯಾಲಯ ಸಾವಿನ ಕುರಿತು ಪ್ರತಿಕ್ರಿಯಿಸಿದ್ದು, ‘ಸ್ವಯಂಸೇವಕ ಬ್ರೆಜಿಲ್‌ನವರೇ. ಆದರೆ, ಆ ವ್ಯಕ್ತಿ ಎಲ್ಲಿಯವರು ಎಂದು ಹೇಳಲಾಗದು,’ ಎಂದಿದೆ.

ಅಸ್ಟ್ರಾಜೆನೆಕಾ ಪ್ರಯೋಗದಲ್ಲಿ ಶೇ. 1.7ರಷ್ಟು ಪ್ರತಿಕೂಲವಾದ ಮತ್ತು ಸಾವು ಸಂಭವಿಸಿದ ಪ್ರಕರಣಗಳು ಕಂಡು ಬಂದಿವೆ.

ಲಸಿಕೆ ಉತ್ಪಾದನೆಗೆ ಯೋಜನೆ ರೂಪಿಸಿರುವ ಬ್ರೆಜಿಲ್‌

ಬ್ರಿಟನ್‌ನ ಈ ಲಸಿಕೆಯನ್ನು ಖರೀದಿಸಿ, ರಿಯೊ ಡಿ ಜನೈರೊದಲ್ಲಿನ ತನ್ನ ಸಂಶೋಧನಾ ಕೇಂದ್ರ ‘ಫಿಯೋಕ್ರೂಜ್‌’ನಲ್ಲಿ ಉತ್ಪಾದಿಸುವ ಯೋಜನೆಯನ್ನು ಬ್ರೆಜಿಲ್‌ ಸರ್ಕಾರವು ಈಗಾಗಲೇ ಹೊಂದಿದೆ. ಇನ್ನೊಂದೆಡೆ, ಚೀನಾದ ಸಿನೋವಾಕ್‌ ಲಸಿಕೆಯನ್ನು ಸಾವೊ ಪಾಲೊದ ಸಂಶೋಧನಾ ಕೇಂದ್ರ ’ಬುಟಾಂಟನ್’ನಲ್ಲಿ ಪರೀಕ್ಷಿಸಲಾಗುತ್ತಿದೆ.

ಸಾವಿನ ಸಂಖ್ಯೆಯಲ್ಲಿ ಎರಡನೇ ಸ್ಥಾನ

ಕೊರೊನಾ ವೈರಸ್‌ನಿಂದಾಗಿ ಹೆಚ್ಚುಜನ ಮೃತಪಟ್ಟ ರಾಷ್ಟ್ರಗಳ ಪಟ್ಟಿಯಲ್ಲಿ ಬ್ರೆಜಿಲ್‌ ಎರಡನೇ ಸ್ಥಾನದಲ್ಲಿದೆ. ಇಲ್ಲಿ 1,55,459 ಮಂದಿ ಈ ವರೆಗೆ ಸಾಂಕ್ರಾಮಿಕ ರೋಗಕ್ಕೆ ಪ್ರಾಣ ತೆತ್ತಿದ್ದಾರೆ. ಸದ್ಯ ಬ್ರೆಜಿಲ್‌ನಲ್ಲಿ 53,00,649 ಸೋಂಕು ಪ್ರಕರಣಗಳು ವರದಿಯಾಗಿದೆ. 47,56,489 ಮಂದಿ ಗುಣಮುಖರಾಗಿದ್ದಾರೆ ಎಂದು ಕೋವಿಡ್‌ ಟ್ರ್ಯಾಕರ್ ವೆಬ್‌ಸೈಟ್‌ ವರ್ಲ್ಡೋಮೀಟರ್‌ನಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT