ಕೋವಿಡ್: ಶಾಂಘೈ ನಗರದ ಪೂರ್ವ ಭಾಗದಲ್ಲಿ ಲಾಕ್ಡೌನ್ ತೆರವು

ಬೀಜಿಂಗ್: ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಇತ್ತೀಚೆಗಷ್ಟೇ ಶಾಂಘೈ ನಗರದ ಪೂರ್ವ ಭಾಗದಲ್ಲಿ ಹೇರಲಾಗಿದ್ದ ಲಾಕ್ಡೌನ್ ಅನ್ನು ಗುರುವಾರ ತೆರವುಗೊಳಿಸಲಾಗಿದೆ. ಆದರೆ ಶಾಂಘೈ ನಗರದ ಪಶ್ಚಿಮ ಭಾಗದಲ್ಲಿ ಲಾಕ್ಡೌನ್ ಹೇರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರಕಾರ ಜಿಲಿನ್ ನಗರದ ಜನ ಸಾಮಾನ್ಯರು 3 ವಾರಗಳ ಬಳಿಕ ಶುಕ್ರವಾರದಿಂದ ಮನೆಯಿಂದ ಹೊರಬಂದು ನಗರದೆಲ್ಲೆಡೆ ಸಂಚರಿಸಬಹುದಾಗಿದೆ.
ಜಿಲಿನ್ ನಗರದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿದೆ. ಆದರೆ ಜಿಲಿನ್ ಪ್ರಾಂತ್ಯದಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ ಜನರು ಮಾಸ್ಕ್ಗಳನ್ನು ಧರಿಸಬೇಕು ಹಾಗೂ ಮನೆಯಲ್ಲಿದ್ದಾಗಲೂ 3 ಅಡಿ ಅಂತರ ಕಾಯ್ದುಕೊಳ್ಳಬೇಕು. ಆದರೆ ಉದ್ಯಾನವನಗಳು ಮತ್ತು ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಜನರಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.