ಪ್ಯಾರಿಸ್: ಫ್ರಾನ್ಸ್ನಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಏಕಾಏಕಿ ಏರಿಕೆಯಾಗಿವೆ. ಭಾನುವಾರ ಒಂದೇ ದಿನ ಅಲ್ಲಿ52,000 ಕ್ಕೂಹೆಚ್ಚು ಹೊಸ ಪ್ರಕರಣಗಳುಪತ್ತೆಯಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

ಉಲ್ಬಣವಾಗುತ್ತಿರುವಸೋಂಕನ್ನು ನಿಯಂತ್ರಿಸಲು ಐರೋಪ್ಯ ರಾಷ್ಟ್ರಗಳು ಹೆಚ್ಚಿನ ನಿರ್ಬಂಧಗಳನ್ನು ವಿಧಿಸಲು ಮುಂದಾಗಿವೆ. ಸದ್ಯ ಫ್ರಾನ್ಸ್ನಲ್ಲಿ11,38,507ಪ್ರಕರಣಗಳು ಹಾಗೂ 34,761 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಅಷ್ಟೇ ಅಲ್ಲ, ಅತಿ ಹೆಚ್ಚು ಕೋವಿಡ್ ಪ್ರಕರಣಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಫ್ರಾನ್ಸ್ ಸೋಮವಾರ ಸ್ಪೇನ್, ಅರ್ಜಿಂಟೀನಾ, ಕೊಲಂಬಿಯಾಗಳನ್ನು ಹಿಂದಿಕ್ಕಿ ಐದನೇ ಸ್ಥಾನಕ್ಕೆ ಏರಿದೆ.

ಜಗತ್ತಿನಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ 4.35 (4,35,20,729) ಕೋಟಿ ಮೀರಿದೆ. ಈವರೆಗೂ ಸೋಂಕಿನಿಂದ 11,61,360 ಮಂದಿ ಮೃತಪಟ್ಟಿದ್ದಾರೆ.

ವಿಶ್ವದಲ್ಲಿ ಒಟ್ಟಾರೆ 3,20,01,313 ಜನರು ಗುಣಮುಖರಾಗಿದ್ದಾರೆ ಹಾಗೂ 1,03,58,056 ಸಕ್ರಿಯ ಪ್ರಕರಣಗಳಿವೆ. ಈ ಕುರಿತು ಕೋವಿಡ್ ಟ್ರ್ಯಾಕರ್ 'ವರ್ಲ್ಡೋಮೀಟರ್ ವೆಬ್ಸೈಟ್'ನಲ್ಲಿ ಮಾಹಿತಿ ನೀಡಲಾಗಿದೆ.

ವಿಶ್ವದಲ್ಲೇ ಅತಿಹೆಚ್ಚು ಸೋಂಕು ಪ್ರಕರಣಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕ ಅಗ್ರ ಸ್ಥಾನದಲ್ಲಿ ಮುಂದುವರಿದಿದೆ. ಅಲ್ಲಿ ಒಟ್ಟು 88,98,410 ಮಂದಿಗೆ ಸೋಂಕು ತಗುಲಿದ್ದರೆ, 2,30,556 ಮಂದಿ ಈವರೆಗೆ ಮೃತಪಟ್ಟಿದ್ದಾರೆ.

ಭಾರತದಲ್ಲಿ ಒಟ್ಟು79,26,245 ಪ್ರಕರಣಗಳು ವರದಿಯಾಗಿದ್ದು,1,19,245ಮಂದಿ ಮೃತಪಟ್ಟಿದ್ದಾರೆ.71,59,055 ಮಂದಿ ಕೊರೊನಾ ವೈರಸ್ನಿಂದ ಮುಕ್ತರಾಗಿದ್ದಾರೆ.

ಬ್ರೆಜಿಲ್ನಲ್ಲಿ ಒಟ್ಟು 53,95,920 ಕೋವಿಡ್ ಪ್ರಕರಣಗಳಿದ್ದು, ಅಲ್ಲಿ 1,57,226 ಮಂದಿ ಮೃತಪಟ್ಟಿದ್ದಾರೆ. ವಿಶ್ವದಲ್ಲೇ ಅತಿ ಹೆಚ್ಚು ಕೋವಿಡ್ ಪ್ರಕರಣಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅದು ಮೂರನೇ ಸ್ಥಾನದಲ್ಲಿದೆ.

ಇನ್ನುಳಿದಂತೆ ರಷ್ಯಾದಲ್ಲಿ 15,31,224 ಪ್ರಕರಣಗಳಿದ್ದರೆ, 26,269 ಮಂದಿ ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.