ಭಾನುವಾರ, ಡಿಸೆಂಬರ್ 6, 2020
20 °C
ಆಧಾರ ರಹಿತ ಆರೋಪ: ರಿಪಬ್ಲಿಕನ್ ಸೆನೆಟರ್‌ಗಳ ಆಕ್ಷೇಪ

ಮೂರು ಸಾಮಾಜಿಕ ಜಾಲತಾಣಗಳ ಸಿಇಒಗಳಿಗೆ ನೋಟಿಸ್‌

ಎಎಫ್‌ಪಿ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಟ್ವಿಟರ್‌, ಫೇಸ್‌ಬುಕ್ ಮತ್ತು ಗೂಗಲ್ ಸಾಮಾಜಿಕ ಜಾಲತಾಣಗಳು, ನಮ್ಮ ಪಕ್ಷದ ಸೆನೆಟರ್‌ಗಳು ಪರಂಪರೆಯ ವಿರೋಧಿ, ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆಧಾರರಹಿತವಾಗಿ ಆರೋಪಿಸುತ್ತಿವೆ ಎಂದು ರಿಪಬ್ಲಿಕನ್‌ ಸೆನೆಟರ್‌ಗಳು ದೂರಿದ್ದಾರೆ.

ಈ ಸಂಬಂಧ ಟ್ವಿಟ್ಟರ್‌ನ ಸಿಇಒ ಜಾಕ್‌ ಡೊರ್ಸೆ, ಫೇಸ್‌ಬುಕ್‌ನ ಮಾರ್ಕ್ ಜ್ಯುಕರ್ ಬರ್ಗ್‌ ಮತ್ತು ಗೂಗಲ್‌ನ ಸುಂದರ್‌ ಪಿಚ್ಚೈ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಬುಧವಾರ ಸೆನೆಟ್‌ ವಾಣಿಜ್ಯ ಸಮಿತಿ ನೋಟಿಸ್‌ ಜಾರಿ ಮಾಡಿದೆ. ಲಿಖಿತ ಆದೇಶದ ಸೂಚನೆ ನಂತರ, ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಮಿತಿ ಎದುರು ಹಾಜರಾಗಲು ಮೂರು ಕಂಪನಿಗಳ ಸಿಇಒಗಳು ಒಪ್ಪಿದ್ದಾರೆ.

ಅಧ್ಯಕ್ಷೀಯ ಚುನಾವಣೆಗೆ ತಯಾರಾಗುತ್ತಿರುವ ಈ ಸಂದರ್ಭದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಕ್ಷ ಟೆಕ್‌ ದೈತ್ಯರೆಂದೇ ಗುರುತಿಸುವ ಮೂರು ಸಾಮಾಜಿಕ ಮಾಧ್ಯಮ ವೇದಿಕೆಗಳ ವಿರುದ್ಧ ಹೋರಾಟಕ್ಕೆ ಇಳಿದಿದೆ.

‘ನಮ್ಮ ಪಕ್ಷವನ್ನು ಉದ್ದೇಶಪೂರ್ವಕಾಗಿ ಸಂಪ್ರದಾಯವಾದಿ ಮತ್ತು ಧಾರ್ಮಿಕ ವಿರೋಧಿ ಎಂದು ಆಧಾರರಹಿತವಾಗಿ ದೂರಲಾಗುತ್ತಿದೆ‘ ಎಂದು ಆಕ್ಷೇಪಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು