ಗುರುವಾರ , ಏಪ್ರಿಲ್ 15, 2021
24 °C

ಹಾಂಗ್‌ಕಾಂಗ್‌: ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಕ್ವಾರಂಟೈನ್‌ ಅವಧಿ ವಿಸ್ತರಣೆ

ಎಎಫ್‌‍ಪಿ Updated:

ಅಕ್ಷರ ಗಾತ್ರ : | |

Prajavani

ಹಾಂಗ್‌ಕಾಂಗ್‌: ಹಾಂಗ್‌ಕಾಂಗ್‌ ಸರ್ಕಾರವು ಅಂತರರಾಷ್ಟ್ರೀಯ ಪ್ರಯಾಣಿಕರ ಕ್ವಾರಂಟೈನ್‌ ಅವಧಿಯನ್ನು ಮೂರು ವಾರಗಳಿಗೆ ಶುಕ್ರವಾರ ವಿಸ್ತರಿಸಿದೆ. ಹೊಸ ಸ್ವರೂಪದ ಕೊರೊನಾ ವೈರಸ್‌ ಪ್ರಸರಣವನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ಅತ್ಯಗತ್ಯವಾಗಿದೆ ಎಂದು ಸರ್ಕಾರ ಹೇಳಿದೆ.

‘ಈ ಹಿಂದೆ ವಿದೇಶ ಪ್ರಯಾಣ ಮಾಡಿದವರಿಗೆ 14 ದಿನ (2 ವಾರಗಳ) ಕ್ವಾರಂಟೈನ್‌ ಅವಧಿಯನ್ನು ನಿಗದಿ ಮಾಡಲಾಗಿತ್ತು. ಆದರೆ ತಜ್ಞರ ಸಲಹೆ ಮೇರೆಗೆ ಕ್ವಾರಂಟೈನ್‌ ಅವಧಿಯನ್ನು ವಿಸ್ತರಿಸಲಾಗಿದೆ. ಹಾಗಾಗಿ ಅಂತರರಾಷ್ಟ್ರೀಯ ಪ್ರಯಾಣಿಕರು ಗೊತ್ತುಪಡಿಸಿದ ಹೋಟೆಲ್‌ಗಳಲ್ಲಿ ಮೂರು ವಾರಗಳ ಕಾಲ ಕ್ವಾರಂಟೈನ್‌ನಲ್ಲಿ ಇರಬೇಕು’ ಎಂದು ಹಾಂಗ್‌ಕಾಂಗ್‌ ಸರ್ಕಾರ ಹೇಳಿದೆ.

ಚೀನಾ, ಮಕಾವ್ ಮತ್ತು ತೈವಾನ್‌ನಿಂದ ಆಗಮಿಸುವವರಿಗೆ ಮಾತ್ರ ಈ ನಿರ್ಬಂಧಗಳಿಂದ ವಿನಾಯತಿ ನೀಡಲಾಗಿದೆ. ಆದರೆ ದಕ್ಷಿಣ ಆಫ್ರಿಕಾದಲ್ಲಿ ಕಳೆದ 21 ದಿನಗಳ ಕಾಲ ವಾಸವಿದ್ದವರು ಹಾಂಗ್‌ಕಾಂಗ್‌ಗೆ ಆಗಮಿಸದಂತೆ ನಿರ್ಬಂಧವನ್ನು ವಿಧಿಸಲಾಗಿದೆ. ಅಲ್ಲದೆ ಬ್ರಿಟನ್‌ ವಿಮಾನಗಳನ್ನು ಕೂಡ ಗುರುವಾದಿಂದ ರದ್ದು ಮಾಡಲಾಗಿದೆ.

ದಕ್ಷಿಣ ಆಫ್ರಿಕಾದಲ್ಲಿ ಹೊಸ ಸ್ವರೂಪದ ಕೊರೊನಾ ವೈರಸ್‌ ತೀವ್ರಗತಿಯಲ್ಲಿ ಹರಡುತ್ತಿದೆ ಎನ್ನಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು