ಚೀನಾ ಲಸಿಕೆ ಪಡೆದ ಥಾಯ್ಲೆಂಡ್‌ನ ವೈದ್ಯಕೀಯ ಕಾರ್ಯಕರ್ತರಿಗೆ ಕೋವಿಡ್

ಬ್ಯಾಂಕಾಕ್: ಚೀನಾದ ಸಿನೊವ್ಯಾಕ್ ಲಸಿಕೆಯ ಎರಡು ಡೋಸ್‌ಗಳನ್ನು ಪಡೆದ 600ಕ್ಕೂ ಹೆಚ್ಚು ವೈದ್ಯಕೀಯ ಕಾರ್ಯಕರ್ತರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ಥಾಯ್ಲೆಂಡ್‌ನ ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ.
ಸಿನೊವ್ಯಾಕ್ ಲಸಿಕೆಯ ಎರಡು ಡೋಸ್‌ಗಳನ್ನು ಥಾಯ್ಲೆಂಡ್‌ನ 6,77,348 ವೈದ್ಯಕೀಯ ಸಿಬ್ಬಂದಿಗಳಿಗೆ ನೀಡಲಾಗಿತ್ತು. ಅದರಲ್ಲಿ 618 ಜನರು ಸೋಂಕಿಗೆ ಒಳಗಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ ಎಂಬ ಮಾಹಿತಿಯನ್ನು ಥಾಯ್ಲೆಂಡ್‌ನ ಆರೋಗ್ಯ ಇಲಾಖೆ ನೀಡಿದೆ.
ಚೀನಾದ 'ಸಿನೊವ್ಯಾಕ್' ಕೋವಿಡ್–19 ಲಸಿಕೆ ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ಅನುಮೋದಿಸಿತ್ತು. ಈ ಲಸಿಕೆಯನ್ನು ಪಡೆದ ಮೇಲೆಯೂ ಜನರು ಕೋವಿಡ್ ಸೋಂಕಿಗೆ ಒಳಗಾಗಿ ಮೃತಪಟ್ಟಿದ್ದು, ಅಲ್ಲಿನ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.
'ತುರ್ತು ಪರಿಸ್ಥಿತಿಯಲ್ಲಿ ಸಿನೊವ್ಯಾಕ್–ಕೊರೊನಾವ್ಯಾಕ್ ಕೋವಿಡ್–19 ಲಸಿಕೆ ಬಳಕೆ ಮಾಡಲು ಡಬ್ಲ್ಯುಎಚ್‌ಒ ಮಾನ್ಯ ಮಾಡಿದೆ' ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಜಗತ್ತಿನಾದ್ಯಂತ ಹಲವು ರಾಷ್ಟ್ರಗಳಲ್ಲಿ ಈಗಾಗಲೇ ಸಿನೊವ್ಯಾಕ್ ಲಸಿಕೆ ಬಳಕೆಯಲ್ಲಿದೆ. ಲಸಿಕೆಯ ಪ್ರಭಾವ, ಸುರಕ್ಷತೆ ಮತ್ತು ತಯಾರಿಕೆಯು ಅಂತರರಾಷ್ಟ್ರೀಯ ಮಟ್ಟದಲ್ಲಿರುವುದನ್ನು ಖಚಿತಪಡಿಸಿಕೊಳ್ಳಲಾಗಿದೆ. 18 ವರ್ಷ ಮತ್ತು ಮೇಲ್ಪಟ್ಟವರು ಈ ಲಸಿಕೆ ಹಾಕಿಸಿಕೊಳ್ಳಲು ಶಿಫಾರಸು ಮಾಡಲಾಗಿದ್ದು, ಮೊದಲ ಡೋಸ್ ಲಸಿಕೆ ಹಾಕಿಸಿಕೊಂಡು 2ರಿಂದ ನಾಲ್ಕು ವಾರಗಳ ಅಂತರದಲ್ಲಿ ಎರಡನೇ ಡೋಸ್ ಹಾಕಿಸಿಕೊಳ್ಳುವಂತೆ ಡಬ್ಲ್ಯುಎಚ್‌ಒ ಹೇಳಿದೆ.
ಚೀನಾದ ಎರಡು ಸಿನೊಫಾರ್ಮ್ ಲಸಿಕೆಯನ್ನು ಡಬ್ಲ್ಯುಎಚ್‌ಒ ಮಾನ್ಯ ಮಾಡಿತ್ತು. ಚೀನಾ, ಚಿಲಿ, ಬ್ರೆಜಿಲ್, ಇಂಡೊನೇಷ್ಯಾ, ಮೆಕ್ಸಿಕೊ, ಥಾಯ್ಲೆಂಡ್ ಹಾಗೂ ಟರ್ಕಿ ಸೇರಿದಂತೆ 22 ರಾಷ್ಟ್ರಗಳಲ್ಲಿ ಸಿನೊವ್ಯಾಕ್ ಲಸಿಕೆ ಬಳಕೆಯಲ್ಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.