ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗತಿಕ ಸುಸ್ಥಿರ ಅಭಿವೃದ್ಧಿ ಕಾರ್ಯಕ್ರಮಕ್ಕೆ ಭಾರತದ ಯುವಕರ ನೇಮಕ

Last Updated 18 ಸೆಪ್ಟೆಂಬರ್ 2020, 9:23 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ‘ಜಾಗತಿಕ ಸುಸ್ಥಿರ ಅಭಿವೃದ್ಧಿ ಗುರಿಗಾಗಿ 17 ಯುವ ನಾಯಕರು-2020 (ಎಸ್‌ಡಿಜಿ)'ಕಾರ್ಯಕ್ರಮಕ್ಕೆ ಭಾರತದ ಯುವಕ ಉದಿತ್‌ ಸಿಂಘಾಲ್ (18) ಅವರನ್ನು ವಿಶ್ವಸಂಸ್ಥೆ ನೇಮಕ ಮಾಡಿದೆ.

ವಿಶ್ವ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಅಹರ್ನಿಶಿ ದುಡಿಯುತ್ತಿರುವ, ಪರಿಸರ ಸೇವಾ ಕಾರ್ಯದಲ್ಲಿ ಉನ್ನತ ಮಟ್ಟದ ಹಿನ್ನೆಲೆಯಿರುವ ಯುವ ನಾಯಕರನ್ನು ಈ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗುತ್ತದೆ. ಅಂಥ ಕಾರ್ಯಕ್ರಮಕ್ಕೆ, ಸಿಂಘಾಲ್ ಅವರನ್ನು ವಿಶ್ವಂಸ್ಥೆ ನೇಮಿಸಿದೆ. ಸದ್ಯ ಉನ್ನತ ಮಟ್ಟದ ಪ್ರೊಫೈಲ್ ಹೊಂದಿರುವ ವಿಶ್ವ ವಿವಿಧ ರಾಷ್ಟ್ರಗಳ 17 ಯುವ ನಾಯಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದು, ಅದರಲ್ಲಿ ಸಿಂಘಾಲ್ ಕೂಡ ಒಬ್ಬರು.

ಉದಿತ್ ಸಿಂಘಾಲ್, ‘ಗ್ಲಾಸ್‌2 ಸ್ಯಾಂಡ್‌, ಎ ಜೀರೊ–ವೇಸ್ಟ್ ಎಕೊಸಿಸ್ಟಮ್’ ಸಂಸ್ಥೆಯ ಸಂಸ್ಥಾಪಕ. ಈ ಸಂಸ್ಥೆ ದೆಹಲಿಯಲ್ಲಿ ತಲೆದೋರಿರುವ ಗಾಜಿನ ತ್ಯಾಜ್ಯಗಳ ಸಮಸ್ಯೆಗೆ ಪರಿಹಾರ ನೀಡುವ ಕೆಲಸ ಮಾಡುತ್ತಿದೆ.

‘ವಿವಿಧ ಉಪಕ್ರಮಗಳ ಮೂಲಕ ಬಳಸಿ ಬಿಸಾಡುವ ಖಾಲಿ ಗಾಜಿನ ಶೀಶೆಗಳುಲ್ಯಾಂಡ್‌ ಫಿಲ್‌ಗೆ (ಕಸ ರಾಶಿ ಹಾಕುವ ಜಾಗ) ಸೇರದಂತೆ ತಡೆದು, ಅದೇ ಶೀಶೆಗಳನ್ನು ಪುಡಿ ಮಾಡಿ ಸಿಲಿಕಾ ಮರಳಾಗಿ ಪರಿವರ್ತಿಸುವುದು ಈ ಸಂಸ್ಥೆಯ ಉದ್ದೇಶ. ಒಂದೊಮ್ಮೆ ಈ ಗಾಜಿನ ಶೀಶೆಗಳು ಕಸದ ಗುಂಡಿಗಳನ್ನು ಸೇರಿದರೆ, ಅಲ್ಲಿ ದಶಕಗಟ್ಟಲೆ ಕರಗದೇ, ಪುಡಿಯಾಗಿ ಮರಳಿನಲ್ಲಿ ಬೆರೆತು ಉಳಿದುಬಿಡುತ್ತವೆ‘ ಎಂದು ವಿಶ್ವಸಂಸ್ಥೆಯ ಯುವ ವಿಭಾಗದ ಪ್ರಧಾನ ಕಾರ್ಯದರ್ಶಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಸುಸ್ಥಿರ ಅಭಿವೃದ್ಧಿಯ ಗುರಿ ಕಾರ್ಯಕ್ರಮದಲ್ಲಿ ಯುವ ನಾಯಕನಾಗಿ ನೇಮಕಗೊಂಡಿರುವ ನಾನು, ಸಮಾಜದಲ್ಲಿ ಬದಲಾವಣೆ ತರುವಂತಹ ವ್ಯಕ್ತಿಯಾಗುತ್ತೇನೆ‘ ಎಂದು ಸಿಂಘಾಲ್‌ ಪ್ರತಿಕ್ರಿಯಿಸಿದ್ದಾರೆ. ‘ಸುಸ್ಥಿರ ಜೀವನ ಸೃಷ್ಟಿಗಾಗಿ ಉತ್ತಮ ನಾಗರಿಕ ಸಮಾಜವನ್ನು ಉತ್ತೇಜಿಸಲು ಪ್ರಯತ್ನಿಸುತ್ತೇನೆಂಬ ಭರವಸೆ ಇದೆ‘ ಎಂದು ಸಿಂಘಾಲ್ ತಿಳಿಸಿದ್ದಾರೆ.

ಸಿಂಘಾಲ್‌ ಅವರ ವೆಬ್‌ಸೈಟನ್‌ಲ್ಲಿರುವ ಮಾಹಿತಿ ಪ್ರಕಾರ, ನವದೆಹಲಿಯ ಬ್ರಿಟಷ್‌ ಶಾಲೆಯ ವಿದ್ಯಾರ್ಥಿ ಸಿಂಘಾಲ್, ‘ಬೇಡಿಕೆಯ ಕುಸಿತದ ಕಾರಣ, ತ್ಯಾಜ್ಯ ವಿಲೇವಾರಿ ಮಾಡುವವರು ಖಾಲಿ ಬಾಟಲಿಗಳನ್ನು ಸಂಗ್ರಹಿಸುವುದನ್ನು ನಿಲ್ಲಿಸಿದರು. ಏಕೆಂದರೆ, ಶೀಶೆಗಳನ್ನು ಸಂಗ್ರಹಿಸಿದರೆ, ಅದನ್ನು ಶೇಖರಿಸಿಡಲು ವಿಶಾಲ ಜಾಗ ಬೇಕಾಗಿತ್ತು. ಜತೆಗೆ, ಶೀಶೆಗಳನ್ನು ಸಾಗಿಸಲು ಸಾರಿಗೆ ವೆಚ್ಚವೂ ಹೆಚ್ಚಾಗುತ್ತಿತ್ತು. ಹೀಗಾಗಿ, ಖಾಲಿ ಶೀಶೆಗಳೆಲ್ಲ ಕಸದ ಜತೆ ಲ್ಯಾಂಡ್ ಫಿಲ್ ಸೇರಲು ಅರಂಭವಾಯಿತು. ಇದನ್ನು ತಡೆಯುವುದಕ್ಕಾಗಿ 2018ರಲ್ಲಿ ಸಿಂಘಾಲ್ ಅವರು ‘ಗ್ಲಾಸ್‌2 ಸ್ಯಾಂಡ್‘ ಪ್ರಾಜೆಕ್ಟ್ ಆರಂಭಿಸಿದರು. ಸಿಂಘಾಲ್ ಕೈಗೊಂಡ ಉಪಕ್ರಮದಿಂದಾಗಿ, ಈ ವರೆಗೆ 8 ಸಾವಿರಕ್ಕೂ ಹೆಚ್ಚು ಶೀಶೆಗಳು ಲ್ಯಾಂಡ್‌ಫಿಲ್ ಸೇರುವುದು ತಪ್ಪಿದೆ. ಈ ವರೆಗೆ ಖಾಲಿ ಶೀಶೆಗಳಿಂದ 4815 ಕೆಜಿಯಷ್ಟು ಉನ್ನತ ದರ್ಜೆಯ ಸಿಲಿಕಾ ಮರಳನ್ನು ಉತ್ಪಾದಿಸಲಾಗಿದೆ‘.

ವಿಶ್ವಸಂಸ್ಥೆ ನೇಮಕ ಮಾಡಿರುವ ಈ ಕಾರ್ಯಕ್ರಮದಲ್ಲಿ ಭಾರತದ ಉದಿತ್ ಸಿಂಘಾಲ್ ಜತೆಗೆ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಬ್ರೆಜಿಲ್, ಬಲ್ಗೇರಿಯಾ, ಚೀನಾ, ಕೊಲಂಬಿಯಾ, ಈಜಿಪ್ಟ್, ಭಾರತ, ಐರ್ಲೆಂಡ್, ಲೈಬೀರಿಯಾ, ನೈಜೀರಿಯಾ, ಪಾಕಿಸ್ತಾನ, ಪೆರು, ಸೆನೆಗಲ್, ಟರ್ಕಿ, ಉಗಾಂಡಾ ಮತ್ತು ಅಮೆರಿಕದ ಯುವ ಪ್ರತಿನಿಧಿಗಳು ಇದ್ದಾರೆ.

18 ರಿಂದ 29 ವರ್ಷ ವಯೋಮಾನದ ಈ ಯುವ ಪ್ರತಿನಿಧಿಗಳುವಿಶ್ವದ ಪ್ರತಿಯೊಂದು ಪ್ರದೇಶದ ಯುವಜನರ ವೈವಿಧ್ಯಮಯ ಧ್ವನಿಗಳನ್ನು ಪ್ರತಿನಿಧಿಸುತ್ತಾರೆ. ಅಷ್ಟೇ ಅಲ್ಲ, ವಿಶ್ವದಾದ್ಯಂತ ಲಕ್ಷಾಂತರ ಯುವ ಜನರನನ್ನು ಸುಸ್ಥಿರ ಅಭಿವೃದ್ಧಿಯ ಗುರಿ ತಲುಪಲು ಉತ್ತೇಜಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT