ನೇಪಾಳ ವಿಮಾನ ದುರಂತ: ಕಾಣೆಯಾಗಿರುವ ಕೊನೆ ವ್ಯಕ್ತಿಗಾಗಿ ಶೋಧ

ಕಠ್ಮಂಡು: ನೇಪಾಳದ ಪೊಖರಾದಲ್ಲಿ ಸಂಭವಿಸಿದ್ದ ವಿಮಾನ ದುರಂತದಲ್ಲಿ ಕಾಣೆಯಾಗಿರುವ ಕಡೇ ವ್ಯಕ್ತಿಗಾಗಿ ಶೋಧಕಾರ್ಯಾಚರಣೆಯನ್ನು ಬುಧವಾರ ಪುನರಾರಂಭಿಸಲಾಯಿತು.
ಮಂಗಳವಾರ ಮತ್ತೊಂದು ದೇಹವನ್ನು ದುರಂತ ಸಂಭವಿಸಿದ ಸೇಟಿ ನದಿಯ ಕೊರಕಲಿನಿಂದ ಹೊರತೆಗೆಯಲಾಗಿದೆ. ಈ ಮೂಲಕ ವಿಮಾನದಲ್ಲಿದ್ದ 72 ಜನರಲ್ಲಿ 71 ಜನರ ಮೃತದೇಹ ಪತ್ತೆಯಾದಂತಾಗಿದೆ.
ಕಾಣೆಯಾಗಿರುವ ಮತ್ತೊಬ್ಬ ವ್ಯಕ್ತಿಗಾಗಿ ಶೋಧಕಾರ್ಯವನ್ನು ಈಜುಗಾರರು ಮತ್ತು ನಾಲ್ಕು ಡ್ರೋನ್‌ಗಳ ಸಹಾಯದಿಂದ ಬುಧವಾರ ಬೆಳಿಗ್ಗೆ ಆರಂಭಿಸಲಾಯಿತು. ಕಾಣೆಯಾಗಿರುವ ವ್ಯಕ್ತಿಯನ್ನು ಹುಡುಕುವ ಭರವಸೆಯನ್ನು ರಕ್ಷಣಾ ತಂಡದವರು ನೀಡಿದ್ದಾರೆ ಎಂದು ಅಲ್ಲಿಯ ಸುದ್ದಿ ಪತ್ರಿಕೆ ‘ಮೈರಿಪಬ್ಲಿಕ್’ ವರದಿ ಮಾಡಿದೆ.
ಸುಮಾರು 48 ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಾಠ್ಮಂಡುಗೆ ನೇಪಾಳ ಸೇನಾ ಹೆಲಿಕಾಪ್ಟರ್‌ಗಳ ಮೂಲಕ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೇಪಾಳದ ಯೇತಿ ಏರ್‌ಲೈನ್ಸ್‌ಗೆ ಸೇರಿದ್ದ ವಿಮಾನವು ಭಾನುವಾರ ಪೊಖರದಲ್ಲಿ ನಿಲುಗಡೆಯಾಗುವ ಕೆಲವೇ ಸೆಕೆಂಡುಗಳ ಮುನ್ನ ನೆಲಕ್ಕೆ ಅಪ್ಪಳಿಸಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.