ಸಿಯೋಲ್: ಉಕ್ರೇನ್ ವಿರುದ್ಧದ ಯುದ್ಧಕ್ಕೆ ರಷ್ಯಾ, ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುತ್ತಿದೆ ಎಂಬ ಅಮೆರಿಕದ ಆರೋಪವನ್ನು ಉತ್ತರ ಕೊರಿಯಾ ನಿರಾಕರಿಸಿದೆ.

ಉತ್ತರ ಕೊರಿಯಾದಿಂದ ರಷ್ಯಾ, ಯುದ್ಧದಲ್ಲಿ ಬಳಸಿಕೊಳ್ಳಲು ಶೆಲ್ ಮತ್ತು ರಾಕೆಟ್ಗಳನ್ನು ಖರೀದಿಸುತ್ತಿದೆ ಎಂದು ಅಮೆರಿಕ ಆರೋಪ ಮಾಡಿತ್ತು.

ಆದರೆ ರಷ್ಯಾಗೆ ಯಾವುದೇ ರೀತಿಯ ಶಸ್ತ್ರಾಸ್ತ್ರವನ್ನು ರಫ್ತು ಮಾಡಿಲ್ಲ. ಮುಂದೆ ಕಳುಹಿಸಿಕೊಡುವ ಪ್ರಸ್ತಾಪವೂ ಇಲ್ಲ ಎಂದು ಉತ್ತರ ಕೊರಿಯಾ ಸ್ಪಷ್ಟಪಡಿಸಿದೆ.

ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ ಈ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಉಕ್ರೇನ್ ವಿರುದ್ಧದ ಯುದ್ಧಕ್ಕೆ ರಷ್ಯಾಗೆ ಶಸ್ತ್ರಾಸ್ತ್ರ ಒದಗಿಸುವ ಮತ್ತು ಇತರ ಯಾವುದೇ ಸಹಾಯವನ್ನು ಮಾಡಿಲ್ಲ ಎಂದು ಹೇಳಿದೆ.

ಸೇನೆಯ ಭಾಗಶಃ ಸನ್ನದ್ಧತೆ: ಪುಟಿನ್ ಆದೇಶ

ಸೆಪ್ಟೆಂಬರ್ನಲ್ಲಿ ರಷ್ಯಾಗೆ ಉತ್ತರ ಕೊರಿಯಾದಿಂದ ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಕಳುಹಿಸಿಕೊಡಲಾಗಿದೆ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಮಂಡಳಿ ವಕ್ತಾರ ಜಾನ್ ಕಿರ್ಬಿ ಹೇಳಿಕೆ ನೀಡಿದ್ದರು.

ತೈವಾನ್ ತನ್ನ ಸುಪರ್ದಿಗೆ ಬರುವುದು ಅನಿವಾರ್ಯ: ಚೀನಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.