ಮಾಸ್ಕೊ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯ (ಐಸಿಸಿ) ಬಂಧನ ವಾರಂಟ್ ಹೊರಡಿಸಿದ ಹಿನ್ನೆಲೆಯಲ್ಲಿ ಅವರನ್ನು ವಿದೇಶದಲ್ಲಿ ಬಂಧಿಸುವ ಪ್ರಯತ್ನಗಳನ್ನು ತನ್ನ ವಿರುದ್ಧ ‘ಯುದ್ಧ ಘೋಷಣೆ’ ಮಾಡಿದಂತೆ ಎಂಬುದಾಗಿ ಭಾವಿಸಲಾಗುತ್ತದೆ ಎಂದು ರಷ್ಯಾ ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೇವ್ ಎಚ್ಚರಿಸಿದ್ದಾರೆ.

ಪುಟಿನ್ ಅವರನ್ನು ಬಂಧಿಸುವ ರಾಷ್ಟ್ರಗಳ ಮೇಲೆ ರಷ್ಯಾ ದಾಳಿ ನಡೆಸಲಿದೆ ಎಂದೂ ಅವರು ಹೇಳಿದ್ದಾರೆ.

ಮೆಡ್ವೆಡೇವ್ ಅವರು 2008 ಮತ್ತು 2012ರ ನಡುವೆ ಅಧ್ಯಕ್ಷರಾಗಿದ್ದರು. ಉಕ್ರೇನ್ ವಿರುದ್ಧ ರಷ್ಯಾ ಯುದ್ದ ಆರಂಭಿಸಿದ ನಂತರ, ಪದೇ ಪದೇ ಪರಮಾಣು ದಾಳಿ ಬಗ್ಗೆ ಅವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸುತ್ತಿದ್ದಾರೆ.

ಯದ್ಧಾಪರಾಧಗಳು ಹಾಗೂ ಉಕ್ರೇನ್ ಮಕ್ಕಳ ಅಪಹರಣ ಆರೋಪದ ಮೇಲೆ ವ್ಲಾಡಿಮಿರ್ ಪುಟಿನ್ ಅವರ ವಿರುದ್ಧ ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯ (ಐಸಿಸಿ) ಕಳೆದ ವಾರ ಬಂಧನದ ವಾರಂಟ್ ಹೊರಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.