ಬುಧವಾರ, ಜುಲೈ 6, 2022
22 °C

ರಷ್ಯಾದ ಮೂವರು ಗಗನಯಾನಿಗಳು ಬಾಹ್ಯಾಕಾಶ ಕೇಂದ್ರಕ್ಕೆ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನ್ಯೂಯಾರ್ಕ್(ಎಪಿ): ಉಕ್ರೇನ್ ಧ್ವಜಕ್ಕೆ ಹೋಲುವ ಹಳದಿ ಮತ್ತು ನೀಲಿ ಬಣ್ಣದ ವಿಮಾನದ ಧಿರಿಸುಗಳನ್ನು ಧರಿಸಿದ್ದ ರಷ್ಯಾದ ಮೂವರು ಗಗನಯಾನಿಗಳು ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಬಂದಿದ್ದಾರೆ. ಉಕ್ರೇನ್-ರಷ್ಯಾ ಮಧ್ಯೆ ಯುದ್ಧ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ರಷ್ಯಾದ ಗಗನಯಾನಿಗಳು ಬಾಹ್ಯಾಕಾಶ ಕೇಂದ್ರಕ್ಕೆ ಬಂದಿದ್ದಾರೆ ಎಂದು ತಿಳಿದುಬಂದಿದೆ. ರಷ್ಯಾ ದಾಳಿಗೆ ತುತ್ತಾಗಿರುವ ಉಕ್ರೇನ್‌ಗೆ ಬೆಂಬಲ ಸೂಚಕವಾಗಿ ಉಕ್ರೇನ್‌ ರಾಷ್ಟ್ರಧ್ವಜ ಹೋಲುವ ಬಟ್ಟೆ ಧರಿಸಿರಬಹುದು ಎಂದು ವಿಶ್ಲೇಷಿಸಲಾಗಿದೆ. 

ಹಳದಿ ಮತ್ತು ನೀಲಿಯ ಧಿರಿಸುನೊಂದಿಗೆ ಬಂದಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಗಗನಯಾನಿ ಒಲೆಗ್ ಆರ್ಟೆಮೀವ್ ಅವರು, 'ಎಲ್ಲಾ ಪೈಲಟ್‌ಗಳು ತಾವು ಬಯಸುವ ವಿಮಾನದ ಉಡುಗೆಗಳನ್ನು ಧರಿಸಬಹುದು. ಅದರಂತೆ ನಮಗೆ ಇಷ್ಟವಾದ ಬಣ್ಣದ ಬಟ್ಟೆ ಧರಿಸಿದ್ದೇವೆ' ಎಂದು ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು