ಬೆಂಗಳೂರು: ರಷ್ಯಾದ ಸೇನಾ ಪಡೆಗಳು ಉಕ್ರೇನ್ ಮೇಲೆ ದಾಳಿ ಮುಂದುವರಿಸಿದ್ದು, ಬಾಂಬ್ಗಳಿಂದ ರಕ್ಷಣೆ ಪಡೆಯಲು ನಿರ್ಮಿಸಲಾಗಿರುವ ಕೇಂದ್ರದಲ್ಲೇ ಜೋಡಿಯೊಂದರ ಮದುವೆ ಏರ್ಪಟ್ಟಿದೆ.

ಸಂಭ್ರಮದ ಸದ್ದು–ಗದ್ದಲ, ಸಂಗೀತ ಆಲಾಪಗಳ ಬದಲು ಆಗಸದಲ್ಲಿ ಮೊಳಗುತ್ತಿರುವ ಸೈರನ್ ಸದ್ದಿನ ನಡುವೆ ಜೋಡಿಯು ವೈವಾಹಿಕ ಜೀವನಕ್ಕೆ ಕಾಲಿಸಿದ್ದಾರೆ. ಉಕ್ರೇನ್ನ ಒದೆಸಾ ನಗರದಲ್ಲಿ ನಿರ್ಮಿಸಲಾಗಿರುವ ಸ್ಫೋಟಕಗಳಿಂದ ರಕ್ಷಣೆ ಪಡೆಯುವ ಕೇಂದ್ರದಲ್ಲಿ ವಿವಾಹ ನಡೆದಿರುವುದಾಗಿ ನೆಕ್ಸ್ಟಾ ಸುದ್ದಿ ಮಾಧ್ಯಮ ಟ್ವೀಟಿಸಿದೆ.

ಉಕ್ರೇನ್ನ ಹಲವು ನಗರಗಳಲ್ಲಿ ರಷ್ಯಾ ಪೂರ್ಣ ಪ್ರಮಾಣದಲ್ಲಿ ದಾಳಿ ನಡೆಸುತ್ತಿದೆ. ಕ್ಷಿಪಣಿ ಹಾಗೂ ಷೆಲ್ ದಾಳಿಗಳನ್ನು ಮುಂದುವರಿಸಿದೆ. ಈ ನಡುವೆಯೇ ಜೀವನದ ಹೊಸ ಕನಸುಗಳೊಂದಿಗೆ ಈ ಜೋಡಿಯು ಮುಂದಿನ ಹೆಜ್ಜೆ ಇಟ್ಟಿದ್ದಾರೆ.

ಇದನ್ನೂ ಓದಿ–ಗೊಂದಲಕ್ಕೀಡಾಗಿರುವ ರಷ್ಯಾದ ಯೋಧರು: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ವ್ಯಂಗ್ಯ

ವಧು ಹೂವಿನ ಗುಚ್ಚ ಹಿಡಿದು ಮುಗುಳು ನಗುತ್ತಿದ್ದರೆ, ವರ ಬ್ರೆಡ್ ಮುರಿದು ಸಂಭ್ರಮ ಹಂಚಿಕೊಳ್ಳುತ್ತಿರುವುದನ್ನು ಚಿತ್ರಗಳಲ್ಲಿ ಕಾಣಬಹುದಾಗಿದೆ. ವಿವಾಹ ನೋಂದಣಿಗೆ ಸಂಬಂಧಿಸಿದ ಕೆಲವು ದಾಖಲೆಗಳಿಗೆ ಸಹಿ ಮಾಡುತ್ತಿರುವುದೂ ಚಿತ್ರದಲ್ಲಿದೆ.

ರಷ್ಯಾ ಪಡೆಗಳು ಈಗಾಗಲೇ ಖೆರ್ಸನ್ ನಗರವನ್ನು ವಶಕ್ಕೆ ಪಡೆದಿರುವುದನ್ನು ಉಕ್ರೇನ್ ಅಧಿಕಾರಿಗಳು ಖಚಿತ ಪಡಿಸಿದ್ದಾರೆ. ರಷ್ಯಾದ ದಾಳಿಯ ಆರಂಭದಿಂದ ಈವರೆಗೂ ಉಕ್ರೇನ್ನ 2,000ಕ್ಕೂ ಹೆಚ್ಚು ನಾಗರಿಕರು ಮೃತಪಟ್ಟಿರುವುದಾಗಿ ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.