ಗುರುವಾರ , ಜೂನ್ 30, 2022
22 °C

ಅಮೆರಿಕ ಅಧ್ಯಕ್ಷ ಜೋ ಬೈಡನ್‌- ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಮಾತುಕತೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಕೀವ್: ಉಕ್ರೇನ್ ಮೇಲಿನ ರಷ್ಯಾ ದಾಳಿ ಮುಂದುವರಿದಿದ್ದು, ಆರ್ಥಿಕ ನೆರವು ಮತ್ತು ರಷ್ಯಾ ವಿರುದ್ಧದ ನಿರ್ಬಂಧಗಳ ಕುರಿತು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ಫೋನ್ ಮೂಲಕ ಮಾತನಾಡಿರುವುದಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ತಿಳಿಸಿದ್ದಾರೆ.

'ನಿರಂತರ ಮಾತುಕತೆಯ ಭಾಗವಾಗಿ, ಅಮೆರಿಕದ ಅಧ್ಯಕ್ಷರ ಜೊತೆ ಮತ್ತೊಂದು ಸಂಭಾಷಣೆ ನಡೆಸಿದ್ದೇನೆ. ಇದು ಭದ್ರತೆ, ಉಕ್ರೇನ್‌ಗೆ ಹಣಕಾಸಿನ ನೆರವು ಮತ್ತು ರಷ್ಯಾದ ವಿರುದ್ಧ ವಿಧಿಸಿರುವ ನಿರ್ಬಂಧಗಳ ಮುಂದುವರಿಕೆಯನ್ನು ಒಳಗೊಂಡಿದೆ' ಎಂದು ಝೆಲೆನ್‌ಸ್ಕಿ ಟ್ವೀಟ್ ಮಾಡಿದ್ದಾರೆ.

ಇದಕ್ಕೂ ಮುನ್ನ ವಿಡಿಯೊ ಕರೆ ಮೂಲಕ ಅಮೆರಿಕದ ಸಂಸದರೊಂದಿಗೆ ಮಾತನಾಡಿದ ಉಕ್ರೇನ್ ಅಧ್ಯಕ್ಷರು, ದೇಶಕ್ಕೆ ಹೆಚ್ಚಿನ ನೆರವು ನೀಡುವಂತೆ ಮತ್ತು ತನ್ನ ದೇಶದ ಮೇಲೆ ಆಕ್ರಮಣ ಮಾಡುತ್ತಿರುವ ರಷ್ಯಾದ ಇಂಧನ ಆಮದನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಮನವಿ ಮಾಡಿದ್ದಾರೆ.

ಅಮೆರಿಕದ ಸಂಸದರು ಹೆಚ್ಚುವರಿ 10 ಶತಕೋಟಿ ಡಾಲರ್ ಪ್ಯಾಕೇಜ್ ನೆರವು ನೀಡುವ ಭರವಸೆ ನೀಡಿದ್ದಾರೆ. ಆದರೆ, ಇಂಧನ ಆಮದಿಗೆ ನಿಷೇಧ ಹೇರುವ ಕ್ರಮವನ್ನು ತಳ್ಳಿಹಾಕಿರುವ ಶ್ವೇತಭವನವು, ಇದರಿಂದಾಗಿ ಬೆಲೆಗಳು ಹೆಚ್ಚಾಗಬಹುದು ಮತ್ತು ದಾಖಲೆಯ ಹಣದುಬ್ಬರದಿಂದ ಈಗಾಗಲೇ ಸಂಕಷ್ಟಕ್ಕೆ ಸಿಲುಕಿರುವ ಅಮೆರಿಕದ ಗ್ರಾಹಕರಿಗೆ ಹಾನಿಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳಿಂದ ಉಕ್ರೇನ್‌ಗೆ ಶಸ್ತ್ರಾಸ್ತ್ರಗಳು ಮತ್ತು ಹಣಕಾಸಿನ ನೆರವು ಲಭ್ಯವಾಗಿದೆ. ಫೆಬ್ರುವರಿ 24 ರಂದು ಪ್ರಾರಂಭವಾದ ರಷ್ಯಾ ಆಕ್ರಮಣದ ವಿರುದ್ಧ ಕಿಡಿಕಾರಿರುವ ವಿಶ್ವಸಮುದಾಯ ಈಗಾಗಲೇ ಉಕ್ರೇನ್‌ಗೆ ಬೆಂಬಲ ಸೂಚಿಸಿ ರಷ್ಯಾ ವಿರುದ್ಧ ವ್ಯಾಪಕ ನಿರ್ಬಂಧಗಳನ್ನು ವಿಧಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು