ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಸಂಸ್ಥೆಯ ಸಮಗ್ರ ಸುಧಾರಣೆಗೆ ಕಾಲಮಿತಿ ಬೇಕು: ಭಾರತ

Last Updated 12 ಡಿಸೆಂಬರ್ 2022, 15:47 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ(ಪಿಟಿಐ): ‘ವಿಶ್ವಸಂಸ್ಥೆಯ ಸುಧಾರಣೆಗೆನಿಗದಿತ ಕಾಲಮಿತಿ ವಿಧಿಸಿಕೊಳ್ಳದೆ ಹಾಗೆಯೇ ಉಳಿಸುವುದು ಭದ್ರತಾ ಮಂಡಳಿಯು ನಿಜವಾಗಿಯೂ ವೈವಿಧ್ಯತೆಯಿಂದ ದೂರವಿರುವುದನ್ನು ಪ್ರತಿಬಿಂಬಿಸುತ್ತದೆ’ ಎಂದು ಭಾರತ ಅಭಿಪ್ರಾಯಪಟ್ಟಿದೆ.

ಭದ್ರತಾ ಮಂಡಳಿಯಲ್ಲಿ ವಿದೇಶಾಂಗ ಸಚಿವರ ಮಟ್ಟದ ಸಭೆಯಲ್ಲಿ ‘ಸುಧಾರಿತ ಬಹುಪಕ್ಷೀಯತೆಗಾಗಿ ಹೊಸ ದೃಷ್ಟಿಕೋನ’ದ ಅಡಿಯಲ್ಲಿನ ‘ಅಂತರರಾಷ್ಟ್ರೀಯ ಶಾಂತಿ ಮತ್ತು ಸುರಕ್ಷತೆಯ ನಿರ್ವಹಣೆ’ ಕುರಿತುಮುಕ್ತ ಚರ್ಚೆ ನಡೆಯಲಿದ್ದು, ಮೊದಲ ಸಹಿ ಕಾರ್ಯಕ್ರಮಕ್ಕೆ ಸಿದ್ಧಪಡಿಸಿರುವ ಪರಿಕಲ್ಪನೆಗಳಟಿಪ್ಪಣಿಯಲ್ಲಿ ಭಾರತ ತನ್ನ ನಿಲುವು ವ್ಯಕ್ತಪಡಿಸಿದೆ.

ಭದ್ರತಾ ಮಂಡಳಿಯ ಸಮಗ್ರ ಸುಧಾರಣೆಯೊಂದಿಗೆ ವಿಶ್ವಸಂಸ್ಥೆಯ ಆರಂಭಿಕ ಸುಧಾರಣೆಯ ಅಗತ್ಯವಿದೆ ಎಂದೂ ಅದು ಒತ್ತಿ ಹೇಳಿದೆ.

ಇದೇ 14 ಮತ್ತು 15 ರಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅಧ್ಯಕ್ಷತೆಯಲ್ಲಿ 15 ರಾಷ್ಟ್ರಗಳ ಸದಸ್ಯರ ಭದ್ರತಾ ಮಂಡಳಿಯ ಸಭೆ ನಡೆಯಲಿದೆ. ಮಂಡಳಿಯ ಪ್ರಸ್ತುತ ಅಧ್ಯಕ್ಷ ಸ್ಥಾನವನ್ನು ಭಾರತ ವಹಿಸಿದ್ದು, ಸುಧಾರಿತ ಬಹುಪಕ್ಷೀಯತೆ ಮತ್ತು ಭಯೋತ್ಪಾದನೆ ನಿಗ್ರಹದ ಬಗ್ಗೆ ಮೊದಲ ಸಹಿ ಕಾರ್ಯಕ್ರಮ ನಡೆಯಲಿದೆ.

ಭಯೋತ್ಪಾದನೆ, ಮೂಲಭೂತವಾದ, ಭಯೋತ್ಪಾದನೆಗೆ ಹಣಕಾಸು ನೆರವು,ಸಾಂಕ್ರಾಮಿಕ ರೋಗಗಳಂತಹ ಹೊಸ ಜಾಗತಿಕ ಸವಾಲುಗಳನ್ನುಮತ್ತು ಉದ್ದೇಶ ಪೂರ್ವಕವಾದ ಭೌಗೋಳಿಕ ರಾಜಕೀಯ ಸ್ಪರ್ಧೆಯನ್ನು ಎದುರಿಸಿ, ಜಾಗತಿಕ ಶಾಂತಿ ಖಾತರಿಪಡಿಸಲು ವೇಗವಾದ ಬಹುಪಕ್ಷೀಯ ಸ್ಪಂದನೆಯ ಅಗತ್ಯವಿದೆ ಎಂದು ಭಾರತವು ಟಿಪ್ಪಣಿಯಲ್ಲಿ ಪ್ರತಿಪಾದಿಸಿದೆ.

ಸುಸ್ಥಿರ ಅಭಿವೃದ್ಧಿಯಂತಹ ಪ್ರಮುಖ ಕ್ಷೇತ್ರಗಳಿಗೆ ಕಾಲಮಿತಿಯ ಗುರಿಗಳಿದ್ದರೂವಿಶ್ವಸಂಸ್ಥೆಯ ಸುಧಾರಣೆಗೆ ಸಮಯ ಸೂಚಿ ನಿಗದಿಪಡಿಸಿದೆ ಹಾಗೆಯೇ ಉಳಿಸಿಕೊಳ್ಳಲಾಗಿದೆ. ಭದ್ರತಾ ಮಂಡಳಿಯ ಸುಧಾರಣೆಯನ್ನು ಬಹುಪಕ್ಷೀಯವಾಗಿ ನಡೆಸಲು ಭಾರತ ಬಯಸುತ್ತದೆ ಎಂದು ಟಿಪ್ಪಣಿಯಲ್ಲಿ ಹೇಳಿದೆ.

ಈ ವಿಷಯದ ಬಗ್ಗೆ ಭಾರತವು ನೀಡಿದ ಪರಿಕಲ್ಪನೆಯ ಟಿಪ್ಪಣಿಯನ್ನು ಸಭೆಯ ಮುಂದೆ ಇಡಲಾಗಿದೆ. ಇದನ್ನುಭದ್ರತಾ ಮಂಡಳಿಯ ದಾಖಲೆಯಾಗಿ ಪ್ರಸಾರ ಮಾಡಬೇಕೆಂದುವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ರುಚಿರಾ ಕಾಂಬೋಜ್‌ ಅವರು ಸದಸ್ಯ ರಾಷ್ಟ್ರಗಳಿಗೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT