ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಹಿಂಸಾಚಾರ: ‘ಯು.ಎಸ್.ಕ್ಯಾಪಿಟಲ್’ ಮೇಲೆ ಈ ಹಿಂದೆ ನಡೆದ ದಾಳಿಗಳೆಷ್ಟು?

ಹಲವು ದಾಳಿಗಳಿಗೆ ಸಾಕ್ಷಿಯಾದ ‘ಯು.ಎಸ್.ಕ್ಯಾಪಿಟಲ್’
Last Updated 7 ಜನವರಿ 2021, 11:21 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕದ ಅಧಿಕಾರದ ಕೇಂದ್ರ ಸ್ಥಾನವೂ ಆದ ‘ಯು.ಎಸ್.ಕ್ಯಾಪಿಟಲ್’ ಕಳೆದ 220 ವರ್ಷಗಳ ಇತಿಹಾಸದಲ್ಲಿ ಸಾಕಷ್ಟು ಪ್ರತಿಭಟನೆಗಳಿಗೆ ಸಾಕ್ಷಿಯಾಗಿದೆ. ಆದರೆ, ಈ ದಿನದಂಥ ಪ್ರತಿಭಟನೆ ನಡೆದಿದ್ದು ಇದೇ ಮೊದಲು.

ಆಕರ್ಷಕ ಅಮೃತಶಿಲೆಯ ಸ್ತಂಭಗಳಿಗೆ ಜಖಂಗೊಳಿಸಲಾಗಿದೆ.ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ವ್ಯವಸ್ಥೆ ಎನ್ನಲಾದ ಅಮೆರಿಕದ ಆಡಳಿತ ವ್ಯವಸ್ಥೆಗೆ ಧಕ್ಕೆ ಉಂಟು ಮಾಡಲಾಗಿದೆ. ಈಗಿನ ಪ್ರತಿಭಟನೆ ಮೊದಲು ನಡೆದ ಪ್ರತಿಭಟನೆಗಳಿಗಿಂತ ಭಿನ್ನ.

1814ರಲ್ಲಿ ಮೊದಲಿಗೆ ಅಂದರೆ ಕಟ್ಟಡ ನಿರ್ಮಾಣವಾದ 14 ವರ್ಷಗಳ ನಂತರ ಪ್ರತಿಭಟನೆ ನಡೆಯಿತು. ಆಗ ಕಟ್ಟಡದ ಒಳ ನುಸುಳಿದವರೂ ಹಚ್ಚಿದ ಬೆಂಕಿಗೆ ಕಟ್ಟಡದಲ್ಲಿದ್ದ ಗ್ರಂಥಾಲಯ ಹೊತ್ತಿ ಉರಿದಿತ್ತು.

ಅದೇ ವೇಳೆಗೆ ಮಳೆಯೂ ಸುರಿದ ಕಾರಣ ಹೆಚ್ಚಿನ ನಷ್ಟ ತಪ್ಪಿತ್ತು. ಆದರೆ, ಭಿನ್ನ ವಾಸ್ತುಶಿಲ್ಪದ ಕಟ್ಟಡಕ್ಕೆ ಸಾಕಷ್ಟು ಧಕ್ಕೆಯಾಗಿತ್ತು ಎಂದು ವಾಸ್ತುಶಿಲ್ಪಿ ಬೆಂಜಮಿಕನ್ ಹೆನ್ರಿ ಲಾಟ್ರೊಬೆ ಹೇಳುತ್ತಾರೆ.

ಅಂದಿನಿಂದ ಶತಮಾನದವರೆಗೂ ಹಲವು ಬಾರಿ ಕಟ್ಟಡ ಮೇಲಿನ ‘ಒಕ್ಕೂಟ, ನ್ಯಾಯ, ತಾಳ್ಮೆ, ಸ್ವಾತಂತ್ರ್ಯ, ಶಾಂತಿ’ ಎಂಬ ಪದಗಳನ್ನೇ ಅಣಕಿಸುವಂತೆ ಪ್ರತಿಭಟನೆಗಳು ನಡೆದಿವೆ. ಹಲವು ಬಾರಿ ಶೂಟೌಟ್‌ಗಳು ನಡೆದಿವೆ. ಜನಪ್ರತಿನಿಧಿಗಳ ನಡುವೆಯೂ ಮಾರಾಮಾರಿ ನಡೆದಿದ್ದಿದೆ.

1950ರಲ್ಲಿ ನಡೆದ ಘಟನೆ ತೀವ್ರವಾಗಿ ಚರ್ಚೆಗೆ ಒಳಪಟ್ಟಿತ್ತು. ಪೋರ್ಟೊ ರಿಕನ್‌ನ ನಾಲ್ವರು ಸ್ವಾತಂತ್ರ್ಯ ಬೇಕು ಎಂದು ಘೋಷಣೆ ಮಾಡಿ, ಪ್ರತ್ಯೇಕತೆಯ ಧ್ವಜಾರೋಹಣ ಮಾಡಿದರು. ಅಲ್ಲದೆ ಸಭಾಂಗಣದ ಪ್ರೇಕ್ಷಕರ ಗ್ಯಾಲರಿಯಿಂದ 30 ಸುತ್ತು ಗುಂಡು ಹಾರಿಸಿದ್ದರು. ಇದರಲ್ಲಿ ಐವರು ಸದಸ್ಯರು ಆಗ ಗಾಯಗೊಂಡಿದ್ದರು.

‘ನಾನು ಯಾರೊಬ್ಬರನ್ನು ಕೊಲ್ಲಲು ಬಂದಿಲ್ಲ. ಪೋರ್ಟೊ ರಿಕೊಗೆ ಸ್ವಾತಂತ್ರ್ಯ ಕೇಳಲು ಬಂದಿದ್ದೇನೆ’ ಎಂದು ಬಂಧಿಸಿದ ಬಳಿಕ ಮಹಿಳಾ ಪ್ರತಿಭಟನಾಗಾರ್ತಿ ಕೂಗಿದ್ದಳು.

1983ರಲ್ಲಿ ಕಮ್ಯುನಿಸ್ಟ್ ಆಂದೋಲನದ ವೇಳೆ ಬಾಂಬ್‌ ಹಾಕಲಾಗಿತ್ತು. 1998ರಲ್ಲಿ ಭೀಕರ ಎನ್ನಬಹುದಾದ ದಾಳಿನಡೆದಿದ್ದು, ಮಾನಸಿಕ ಅಸ್ವಸ್ಥನೊಬ್ಬ ಗುಂಡು ಹಾರಿಸಿದ್ದರಿಂದ ಇಬ್ಬರು ಪೊಲೀಸ್ ಅಧಿಕಾರಿಗಳು ಮೃತಪಟ್ಟಿದ್ದರು. 2013ರಲ್ಲಿ ಮಹಿಳೆಯೊಬ್ಬರು ಕಾರನ್ನು ಶ್ವೇತಭವನದ ಒಳಗೆ ನುಗ್ಗಿಸಲು ಯತ್ನಿಸಿ ಗುಂಡಿಗೆ ಬಲಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT