ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಡರ್ನಾ ಲಸಿಕೆಯ ತುರ್ತು ಬಳಕೆಗೆ ಅಮೆರಿಕ ಅನುಮೋದನೆ

Last Updated 19 ಡಿಸೆಂಬರ್ 2020, 2:44 IST
ಅಕ್ಷರ ಗಾತ್ರ

ವಾಷಿಂಗ್ಟನ್: ಮಾಡರ್ನಾ ಅಭಿವೃದ್ಧಿಪಡಿಸಿರುವ ಕೋವಿಡ್-19 ಲಸಿಕೆಯ ತುರ್ತು ಬಳಕೆಗೆ ಅಮೆರಿಕದ ಆಹಾರ ಮತ್ತು ಔಷಧ ಇಲಾಖೆಯು (ಎಫ್‌ಡಿಎ) ಅನುಮೋದನೆ ನೀಡಿದೆ. ಇದು, ಅಮೆರಿಕದಲ್ಲಿ ತುರ್ತು ಬಳಕೆಗೆ ಅನುಮೋದನೆ ಪಡೆದ ಎರಡನೇ ಲಸಿಕೆಯಾಗಿದೆ.

ಇದರೊಂದಿಗೆ, ಮಾಡರ್ನಾ ಲಸಿಕೆಗೆ ಮತ್ತು ಅದರ ಮೆಸೆಂಜರ್‌ ಆರ್‌ಎನ್‌ಎ ತಂತ್ರಜ್ಞಾನಕ್ಕೆ (ಎಂಆರ್‌ಎನ್‌ಎ) ವಿಶ್ವದಲ್ಲೇ ಮೊದಲ ಬಾರಿಗೆ ಅಧಿಕೃತ ಅನುಮೋದನೆ ದೊರೆತಂತಾಗಿದೆ. ಅಮೆರಿಕದಲ್ಲಿ ಮೊದಲ ಕೋವಿಡ್ ಪ್ರಕರಣ ವರದಿಯಾದ ಒಂದು ವರ್ಷದ ಅವಧಿಯೊಳಗೇ ಇದು ಸಾಕಾರಗೊಂಡಿದೆ.

ಈ ವಾರಾಂತ್ಯದ ವೇಳೆಗೆ 59 ಲಕ್ಷ ಡೋಸ್ ಲಸಿಕೆ ವಿತರಿಸಲು ಕಂಪನಿಯು ಅಮೆರಿಕದ ಆಡಳಿತದೊಂದಿಗೆ ಕಾರ್ಯನಿರ್ವಹಿಸುತ್ತಿದೆ.

ಅಂತಿಮ ಹಂತದಲ್ಲಿ 30,000 ಸ್ವಯಂಸೇವಕರ ಮೇಲೆ ನಡೆಸಿದ ಪ್ರಯೋಗದ ಆಧಾರದಲ್ಲಿ ಎಫ್‌ಡಿಎ ಲಸಿಕೆಗೆ ಅನುಮೋದನೆ ನೀಡುವ ನಿರ್ಧಾರ ಕೈಗೊಂಡಿದೆ. ಈ ಪ್ರಯೋಗದಲ್ಲಿ ಲಸಿಕೆಯು ಶೇ 95ರಷ್ಟು ಪರಿಣಾಮಕಾರಿಯಾಗಿತ್ತು. ಗಂಭೀರ ಅಡ್ಡ ಪರಿಣಾಮಗಳು ಕಂಡುಬಂದಿರಲಿಲ್ಲ.

ಫೈಜರ್ ಕಂಪನಿಯು ಜರ್ಮನಿಯ ಬಯೋಎನ್‌ಟೆಕ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಿದ ಲಸಿಕೆಯ ತುರ್ತು ಬಳಕೆಗೆ ಅಮೆರಿಕ ಈಗಾಗಲೇ ಅನುಮೋದನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT