ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ಗೆ ₹5,975 ಕೋಟಿ ಭದ್ರತಾ ನೆರವು ಘೋಷಿಸಿದ ಅಮೆರಿಕ

Last Updated 15 ಅಕ್ಟೋಬರ್ 2022, 2:42 IST
ಅಕ್ಷರ ಗಾತ್ರ

ವಾಷಿಂಗ್ಟನ್: ರಷ್ಯಾ ದಾಳಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಉಕ್ರೇನ್‌ಗೆ ರಕ್ಷಣಾ ಉಪಕರಣಗಳುಸೇರಿದಂತೆ 725 ಮಿಲಿಯನ್ ಅಮೆರಿಕ ಡಾಲರ್‌ (ಅಂದಾಜು ₹5,975 ಕೋಟಿ)ನೆರವು ನೀಡುವುದಾಗಿ ಅಮೆರಿಕ ಘೋಷಿಸಿದೆ.

ಈ ಕುರಿತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಅವರು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

‘ಉಕ್ರೇನ್‌ಗೆ 5,975 ಕೋಟಿ (725 ಮಿಲಿಯನ್ ಅಮೆರಿಕ ಡಾಲರ್‌) ಮೌಲ್ಯದ ಭದ್ರತಾ ನೆರವು ನೀಡುವುದಾಗಿ ಘೋಷಿಸಿದ್ದೇವೆ. 2021ರ ಆಗಸ್ಟ್‌ನಿಂದ ಈವರೆಗೆ ಅಮೆರಿಕ ಉಕ್ರೇನ್‌ಗೆ 23 ಬಾರಿ ನೆರವು ಘೋಷಿಸಿದೆ’ ಎಂದು ಬ್ಲಿಂಕೆನ್ ತಿಳಿಸಿದ್ದಾರೆ.

#UnitedWithUkraine ಎಂಬ ಹ್ಯಾಷ್‌ಟ್ಯಾಗ್ ಉಲ್ಲೇಖಿಸಿ ಟ್ವೀಟ್ ಮಾಡಿರುವ ಬ್ಲಿಂಕೆನ್, ‘ರಷ್ಯಾ ಪಡೆಗಳನ್ನು ಹತ್ತಿಕ್ಕಲು ಉಕ್ರೇನ್‌ಗೆ ಬೇಕಾದ ಅಗತ್ಯ ನೆರವು ಮತ್ತು ಬೆಂಬಲ ಮುಂದುವರಿಸುತ್ತೇವೆ’ ಎಂದು ಬರೆದುಕೊಂಡಿದ್ದಾರೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಅವರು ಉಕ್ರೇನ್‌ನಲ್ಲಿ ಸೇನಾ ಕಾರ್ಯಾಚರಣೆ ಆರಂಭಿಸಲು ಫೆಬ್ರುವರಿ 24ರಂದು ಕರೆ ನೀಡಿದ್ದರು. ರಷ್ಯಾ ಪಡೆಗಳು ಅಂದಿನಿಂದಲೂ ಆಕ್ರಮಣ ಮುಂದುವರಿಸಿದ್ದು, ಉಕ್ರೇನ್‌ ಸೇನೆಯೂ ಪ್ರತಿದಾಳಿ ನಡೆಸುತ್ತಿದೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT