ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲಿಬಾನ್‌ ಜತೆಗಿನ ದೋಹಾ ಒಪ್ಪಂದ ಬೈಡನ್‌ ಕೈ ಕಟ್ಟಿಹಾಕಿತೇ?

Last Updated 19 ಆಗಸ್ಟ್ 2021, 11:00 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಡೊನಾಲ್ಡ್‌ ಟ್ರಂಪ್‌ ಅವರು 2020ರ ಫೆಬ್ರುವರಿಯಲ್ಲಿ ದೋಹಾದಲ್ಲಿ ತಾಲಿಬಾನ್‌ ಜತೆ ಮಾಡಿಕೊಂಡಿದ್ದ ಒಪ್ಪಂದ ಹಾಲಿ ಅಧ್ಯಕ್ಷ ಜೋ ಬೈಡನ್‌ ಅವರ ಕೈ ಕಟ್ಟಿ ಹಾಕಿತು ಎನ್ನುವ ವಿಶ್ಲೇಷಣೆಗಳು ನಡೆಯುತ್ತಿವೆ.

18 ತಿಂಗಳ ಬಳಿಕ ಜೋ ಬೈಡನ್‌ ಅವರು ದೋಹಾದಲ್ಲಿ ಸಹಿ ಮಾಡಿರುವ ಈ ಒಪ್ಪಂದದತ್ತ ಬೆರಳು ತೋರಿಸುತ್ತಿದ್ದಾರೆ. ಈ ಒಪ್ಪಂದದ ಅನ್ವಯ ಅಮೆರಿಕದ ಪಡೆಗಳನ್ನು ವಾಪಸ್‌ ಕರೆಯಿಸಿಕೊಳ್ಳಬೇಕಾಯಿತು ಎಂದು ಬೈಡನ್‌ ಹೇಳುತ್ತಿದ್ದಾರೆ.

’ಒಪ್ಪಂದವನ್ನು ಪಾಲಿಸಬೇಕು ಅಥವಾ ತಾಲಿಬಾನ್‌ ಜತೆಗಿನ ಹೋರಾಟವನ್ನು ಮುಂದುವರಿಸಬೇಕು’ ಎಂದು ಬೈಡನ್‌ ಇತ್ತೀಚೆಗೆ ಹೇಳಿಕೆ ನೀಡಿದ್ದರು.

ಆದರೆ, ಬೈಡನ್‌ ಅವರ ನಿರ್ಧಾರಕ್ಕೆ ಹಲವು ರೀತಿಯ ಆಕ್ಷೇಪಗಳು ಸಹ ವ್ಯಕ್ತವಾಗಿವೆ.

‘ಒಪ್ಪಂದವು ಸಮರ್ಪಕವಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದರೆ, ಬೈಡನ್‌ ಅವರು ಮರುಸಂಧಾನ ಕೈಗೊಳ್ಳಬೇಕಾಗಿತ್ತು. ಅವರು ಬಯಸಿದ್ದರೆ ವಿಪುಲ ಅವಕಾಶಗಳಿದ್ದವು’ ಎಂದು ಟ್ರಂಪ್‌ ಆಡಳಿತದಲ್ಲಿನ ಹಂಗಾಮಿ ರಕ್ಷಣಾ ಕಾರ್ಯದರ್ಶಿಯಾಗಿದ್ದ ಕ್ರಿಸ್‌ ಮಿಲ್ಲರ್‌ ಅಭಿಪ್ರಾಯಪಟ್ಟಿದ್ದಾರೆ.

‘ದೋಹಾ ಒಪ್ಪಂದವು ಅತ್ಯಂತ ದುರ್ಬಲವಾಗಿದೆ. ತಾಲಿಬಾನ್‌ಗಿಂತ ಅಮೆರಿಕಕ್ಕೆ ಹೆಚ್ಚು ಪ್ರಯೋಜನವಾಗುತ್ತಿತ್ತು’ ಎಂದು ಅಫ್ಗಾನಿಸ್ತಾನಕ್ಕೆ ಸಂಬಂಧಿಸಿದ ವಿಷಯ ತಜ್ಞೆ ಹಾಗೂ ಟ್ರಂಪ್‌ ಆಡಳಿತದಲ್ಲಿ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿನ ಹಿರಿಯ ನಿರ್ದೇಶಕಿಯಾಗಿದ್ದ ಲಿಸಾ ಕರ್ಟಿಸ್‌ ತಿಳಿಸಿದ್ದಾರೆ.

‘ಅಮೆರಿಕ ಪಡೆಗಳು ವಾಪಸ್‌ ಹೋಗುವುದು ತಾಲಿಬಾನ್‌ಗೆ ಬೇಕಾಗಿತ್ತು. ಮಿಲಿಟರಿ ಮೂಲಕ ದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವುದನ್ನು ಅದು ಬಯಸಿತ್ತು’ ಎಂದು ಅವರು ವಿವರಿಸಿದ್ದಾರೆ.

ಮೂರು ಅಥವಾ ನಾಲ್ಕು ತಿಂಗಳಲ್ಲಿ 13 ಸಾವಿರ ಪಡೆಗಳಿಂದ 8,600 ಪಡೆಗಳಿಗೆ ಕಡಿಮೆ ಮಾಡಬೇಕು ಹಾಗೂ ಉಳಿದ ಪಡೆಗಳನ್ನು 14 ತಿಂಗಳಲ್ಲಿ ಅಥವಾ ಮೇ 1ರ ವೇಳೆಗೆ ವಾಪಸ್‌ ಕರೆಯಿಸಿಕೊಳ್ಳಬೇಕು ಎಂದು ಒಪ್ಪಂದ ಮಾಡಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT