ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನದ ಶೌಚಾಲಯದಲ್ಲಿ ಮಹಿಳೆಗೆ 3 ಗಂಟೆ ಕ್ವಾರಂಟೈನ್‌

Last Updated 31 ಡಿಸೆಂಬರ್ 2021, 17:22 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಶಿಕಾಗೊದಿಂದ ಐಸ್‌ಲ್ಯಾಂಡ್‌ನತ್ತ ಸಾಗುತ್ತಿದ್ದ ವಿಮಾನದಲ್ಲಿ, ಮಾರ್ಗ ಮಧ್ಯದಲ್ಲಿಯೇ ಕೋವಿಡ್‌–19 ದೃಢಪಟ್ಟ ಮಹಿಳೆಯೊಬ್ಬರನ್ನು ಮೂರು ಗಂಟೆಗಳ ಕಾಲ ವಿಮಾನದ ಶೌಚಾಲಯದಲ್ಲಿಯೇ ಕ್ವಾರಂಟೈನ್‌ ಮಾಡಲಾಗಿತ್ತು ಎಂಬುದು ತಡವಾಗಿ ಗೊತ್ತಾಗಿದೆ.

ಮಿಚಿಗನ್‌ನ ಶಿಕ್ಷಕಿ ಮಾರಿಸಾ ಫೋಟಿಯೊ ಅವರು ಡಿಸೆಂಬರ್‌ 19ರಂದು ಪ್ರಯಾಣಿಸುತ್ತಿದ್ದಾಗ, ಮಾರ್ಗ ಮಧ್ಯದಲ್ಲಿ ಗಂಟಲು ಬೇನೆ ಕಾಣಿಸಿಕೊಂಡಿದೆ. ಕೂಡಲೇ ಅವರು ಶೌಚಾಲಯಕ್ಕೆ ಹೋಗಿ ಕೋವಿಡ್‌ ರ‍್ಯಾಪಿಡ್‌ ಪರೀಕ್ಷೆ ಮಾಡಿಕೊಂಡಿದ್ದಾರೆ. ಅದರಲ್ಲಿ ಅವರಿಗೆ ಕೋವಿಡ್‌ ದೃಢಪಟ್ಟಿದೆ. ಈ ವಿಷಯ ತಿಳಿದ ಬಳಿಕ ಅವರನ್ನು ಶೌಚಾಲಯದಲ್ಲಿಯೇ ಕ್ವಾರಂಟೈನ್‌ ಮಾಡಲಾಗಿತ್ತುಎಂದು ಡಬ್ಲ್ಯುಎಬಿಸಿ–ಟಿವಿ ವರದಿ ಮಾಡಿದೆ.

‘ವಿಮಾನ ಪ್ರಯಾಣಕ್ಕೂ ಮುನ್ನ ಎರಡು ಬಾರಿ ಪಿಸಿಆರ್ ಪರೀಕ್ಷೆ ಮತ್ತು ಐದು ಬಾರಿರ‍್ಯಾಪಿಡ್‌ ಪರೀಕ್ಷೆಗೆ ಒಳಗಾಗಿದ್ದೆ. ಈ ಎಲ್ಲ ಬಾರಿಯೂ ನೆಗೆಟಿವ್‌ ವರದಿ ಬಂದಿತ್ತು’ ಎಂದು ಶಿಕ್ಷಕಿಯ ಹೇಳಿಕೆಯನ್ನು ಉಲ್ಲೇಖಿಸಿ ಸಿಎನ್‌ಎನ್‌ ವರದಿ ಮಾಡಿದೆ.ಅವರು ಕೋವಿಡ್‌ನ ಎರಡೂ ಡೋಸ್‌ ಲಸಿಕೆಯ ಜತೆಗೆ ಬೂಸ್ಟರ್‌ ಡೋಸ್‌ಕೂಡ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT