ಗುರುವಾರ, 12–9–1968

ಸ್ವಾಯತ್ತ ಗಿರಿ ರಾಜ್ಯ ರಚನೆ

ನವದೆಹಲಿ, ಸೆ. 11– ಗಾರೋ, ಖಾಸಿ ಮತ್ತು ಜೊವಾಯ್ ಜಿಲ್ಲೆಗಳು ಸೇರಿದ ಸ್ವಾಯತ್ತ ಗಿರಿ ರಾಜ್ಯವೊಂದನ್ನು ಅಸ್ಸಾಂ ರಾಜ್ಯದೊಳಗೇ ರಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಹಣ ಹದ್ದು!

ಬೆಂಗಳೂರು, ಸೆ. 11– ನಿನ್ನೆ ಸೆಂಟ್‌ಮಾರ್ಕ್ಸ್‌ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಚೇರಿಯಿಂದ ಸುಮಾರು 1000 ರೂಪಾಯಿ ಹಣ ಪಡೆದವರೊಬ್ಬರು ಕರವಸ್ತ್ರದಲ್ಲಿ ಕಟ್ಟಿಕೊಂಡು ಹೊರ ಬಂದರು.

ಕೈಯಲ್ಲಿದ್ದ ಗಂಟನ್ನು ಹಾರಿಸಲಾಯಿತು, ಗಂಟು ಮರದ ಮೇಲಕ್ಕೆ ಹೋಯಿತು.

ಕ್ಯಾಂಟೀನ್‌ನಿಂದ ತಿಂಡಿ ತಂದು ಆಸೆ ತೋರಿಸಲಾಯಿತು. ಹಾರಿಸಿಕೊಂಡು ಹೋಗಿದ್ದ ಹದ್ದು, ತಿಂಡಿಯತ್ತ ಮನಸ್ಸು ಮಾಡಿದಾಗ ಗಂಟು ಕೆಳಗೆ ಬಿತ್ತು. ವಾರಸುದಾರರು ಸಂತೋಷದಿಂದ ಪಡೆದು ಬಚ್ಚಿಟ್ಟು
ಕೊಂಡು ತೆರಳಿದರು.

ಜವಾನನನ್ನು ಗುಂಡಿಕ್ಕಿ ಕೊಂದು ಟೈಪಿಸ್ಟ್ ಆತ್ಮಹತ್ಯೆ: ಮ್ಯಾಜಿಸ್ಟ್ರೇಟ್ ಪತ್ನಿಗೆ ಗಾಯ

ಶಿವಮೊಗ್ಗ, ಸೆ. 11– ಈಗ ರಾಯಚೂರು ಜಿಲ್ಲೆಗೆ ವರ್ಗವಾಗಿರುವ ಸ್ಥಳೀಯ ವಿಶೇಷ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಶ್ರೀ ಸಂಜೀವಯ್ಯ ಅವರ ಎರಡನೆಯ ಪತ್ನಿ ಶ್ರೀಮತಿ ಸುಮಂಗಳಮ್ಮ ಅವರ ಸೋದರ ಜಯಕುಮಾರ್, ಈ ದಿನ ಮುಂಜಾನೆ ಮನೆಯಲ್ಲಿಯೇ ಇದ್ದ ಕೋರ್ಟ್ ಜವಾನ ದ್ಯಾಮಪ್ಪನ ಮೇಲೂ ಮತ್ತು ಮ್ಯಾಜಿಸ್ಟ್ರೇಟರ ಮೊದಲನೆಯ ಪತ್ನಿ ಲಕ್ಷ್ಮೀದೇವಮ್ಮ ಅವರ ಮೇಲೂ ಗುಂಡು ಹಾರಿಸಿ ತಾನು ಕೂಡಲೇ ಟಿಕ್–20 ಸೇವಿಸಿ, ನಂತರ ಆಸ್ಪತ್ರೆಯಲ್ಲಿ ಮೃತನಾದನು.

ಪ್ರಮುಖ ಸುದ್ದಿಗಳು