ನವದೆಹಲಿ: ಭಾರತದಲ್ಲಿ ಬೆಳೆಯುತ್ತಿರುವ ಮಧ್ಯಮ ಗಾತ್ರದ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (SUV) ಮಾದರಿಯ ಸಾಲಿಗೆ ಮಾರುತಿ ಸುಜುಕಿ ಕಂಪನಿಯು ‘ವಿಕ್ಟೊರಿಸ್’ ಎಂಬ ಹೊಸ ಕಾರನ್ನು ಪರಿಚಯಿಸಿದೆ.

ಈ ಮಾದರಿಯಲ್ಲಿ ಫ್ರಾಂಕ್ಸ್, ಬ್ರಿಜಾ, ಜಿಮ್ನಿ ಮತ್ತು ಗ್ರ್ಯಾಂಡ್ ವಿಟಾರಾ ಎಂಬ ಕಾರುಗಳನ್ನು ಕಂಪನಿಯು ಸದ್ಯ ಮಾರಾಟ ಮಾಡುತ್ತಿದೆ.

ವಿಕ್ಟೊರಿಸ್ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಮಾರುತಿ ಸುಜುಕಿ ಭಾರತ ವಿಭಾಗದ ವ್ಯವಸ್ಥಾಪಕ ಮತ್ತು ಸಿಇಒ ಹಿಸಾಚಿ ಟೆಕುಚಿ, ‘ಜಗತ್ತಿನಲ್ಲೇ ಅತಿ ಹೆಚ್ಚು ಯುವಜನರು ಭಾರತದಲ್ಲಿದ್ದಾರೆ. ಕಂಪನಿಯ ಸದ್ಯದ ಹಾಗೂ ಭವಿಷ್ಯದ ಗ್ರಾಹಕರು ಇವರೇ. ಜತೆಗೆ ಭಾರತದ ವಾಹನ ಕ್ಷೇತ್ರವೂ ಬದಲಾಗುತ್ತಿದ್ದು, ಹೊಸ ಬಗೆಯ ಗ್ರಾಹಕರು ಮಾರುಕಟ್ಟೆಗೆ ಬರುತ್ತಿದ್ದಾರೆ. ಅವರೆಲ್ಲರೂ ಯುವಕರಾಗಿದ್ದು ನವ ಭಾರತವನ್ನು ಪ್ರತಿನಿಧಿಸುವವರಾಗಿದ್ದಾರೆ. ಹೀಗಾಗಿ ಎಸ್ಯುವಿ ಮಾದರಿಯಲ್ಲಿ ಅವರಿಗಾಗಿ ಹೊಸತನ್ನು ನೀಡುವ ಪ್ರಯತ್ನ ಮಾಡಲಾಗಿದೆ’ ಎಂದಿದ್ದಾರೆ.

‘ಕಂಪನಿಯ ಎಸ್ಯುವಿ ಕಾರುಗಳ ಮಾರಾಟ ಮೂರು ಪಟ್ಟು ಹೆಚ್ಚಾಗಿದೆ. 2020–21ರಲ್ಲಿ ಶೇ 8.9ರಷ್ಟಿದ್ದ ಎಸ್ಯುವಿಗಳ ಮಾರಾಟ 2024–25ರಲ್ಲಿ ಶೇ 28ಕ್ಕೆ ಏರಿಕೆಯಾಗಿದೆ. ಎಸ್ಯುವಿ ವಿಭಾಗದಲ್ಲಿ ಆರಂಭಿಕ ಕಾರುಗಳು ಎಂದೇ ಗುರುತಿಸಲಾಗಿರುವ ಬ್ರಿಜಾ ಮತ್ತು ಫ್ರಾಂಕ್ಸ್ ಇದಕ್ಕೆ ವ್ಯಾಪಕ ಕೊಡುಗಡೆ ನೀಡಿದೆ. ಗ್ರಾಹಕರ ವಿಶ್ವಾಸದ ಜತೆಗೆ, ಮಾರುಕಟ್ಟೆಯಲ್ಲಿ ಮುಂಚೂಣಿ ಸ್ಥಾನವನ್ನು ಪಡೆದಿದೆ’ ಎಂದಿದ್ದಾರೆ.

ವಿಕ್ಟೊರಿಸ್ ಎಸ್ಯುವಿಯಲ್ಲಿ ಏನೇನಿದೆ?

‘ಹೈಬ್ರಿಡ್ ಮತ್ತು ಸಿಎನ್ಜಿ ಸೇರಿದಂತೆ ಹಲವು ಬಗೆಯ ಎಂಜಿನ್ ಆಯ್ಕೆಗಳು ವಿಕ್ಟೊರಿಸ್ನಲ್ಲಿದೆ. 2ನೇ ಹಂತದ ಎಡಿಎಎಸ್ ಅಳವಡಿಸಲಾಗಿದೆ. ಸ್ವಯಂಚಾಲಿತ ತುರ್ತು ಬ್ರೇಕಿಂಗ್, ಬ್ಲೈಂಡ್ ಸ್ಪಾಟ್ ಎಚ್ಚರಿಕೆ, ಲೇನ್ ಪಾಲನೆ ಹಾಗೂ ಹಲವು ಸೌಲಭ್ಯಗಳು ಇವೆ’ ಎಂದು ಟೆಕುಚಿ ಹೇಳಿದ್ದಾರೆ.

ಹ್ಯುಂಡೇ ಕ್ರೆಟಾ, ಕಿಯಾ ಸೆಲ್ಟೊಸ್ ಮತ್ತು ಹೊಂಡಾ ಎಲಿವೇಟ್ನೊಂದಿಗೆ ಮಾರುತಿ ಸುಜುಕಿ ವಿಕ್ಟೊರಿಸ್ ಸ್ಪರ್ಧೆ ಹೊಂದಲಿದೆ. ಈ ಹೊಸ ಕಾರಿನ ಬೆಲೆಯನ್ನು ಮಾರುತಿ ಸುಜುಕಿ ಸದ್ಯಕ್ಕೆ ಘೋಷಿಸಿಲ್ಲ. ವಿಕ್ಟೊರಿಸ್ ಎಸ್ಯುವಿ ಮಾದರಿಯು ಜಗತ್ತಿನ ಸುಮಾರು ನೂರು ಮಾರುಕಟ್ಟೆಗೆ ರಫ್ತಾಗಲಿದೆ. ಈ ಕಾರಿನ ಅಭಿವೃದ್ಧಿಗೆ ಕಂಪನಿಯು ₹1,240 ಕೋಟಿ ವೆಚ್ಚ ಮಾಡಿರುವುದಾಗಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.