ಬೆಂಗಳೂರು: ಮುಂಬೈ ಹಾಗೂ ದೆಹಲಿ ನಂತರ ಅಮೆರಿಕದ ಉದ್ಯಮಿ ಇಲಾನ್ ಮಸ್ಕ್ ಒಡೆತನದ ಟೆಸ್ಲಾ ತನ್ನ ಮಾರಾಟ ಮಳಿಗೆಯನ್ನು ಬೆಂಗಳೂರಿನಲ್ಲಿ ತೆರೆಯಲು ನಿರ್ಧರಿಸಿದೆ. ಅದಕ್ಕೂ ಪೂರ್ವದಲ್ಲಿ ಟೆಸ್ಲಾ ಕಾರು ಪ್ರಿಯರಿಗಾಗಿ ಜ. 15ರಿಂದ ಜ. 31ರವರೆಗೆ ನಗರದ ಕೂಡ್ಲು ಗೇಟ್ ಬಳಿ ಇರುವ ‘ಆ್ಯಕೊ’ ಡ್ರೈವ್ ಸರ್ವೀಸ್ ಸೆಂಟರ್ನಲ್ಲಿ ವೀಕ್ಷಣೆಗೆ ಅವಕಾಶ ನೀಡಿದೆ.

ಟೆಸ್ಲಾದ ಜನಪ್ರಿಯ ಮಾಡೆಲ್ ಆದ ‘ವೈ’ ವೀಕ್ಷಣೆಗೆ ಅವಕಾಶವಿರಲಿದೆ. ಇದರಲ್ಲಿ ಮಾಹಿತಿಯೊಂದಿಗೆ ಕಾರನ್ನು ನೇರವಾಗಿಯೂ ವೀಕ್ಷಿಸಬಹುದು. ಟೆಸ್ಲಾದ ವಿನ್ಯಾಸ, ತಂತ್ರಜ್ಞಾನ, ಸುರಕ್ಷತಾ ಸಾಧನ ಮತ್ತು ಅದರ ಕಾರ್ಯಕ್ಷಮತೆಯ ಮಾಹಿತಿಯನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ ಕಂಪನಿ ಹೇಳಿದೆ.

ತಂತ್ರಜ್ಞಾನ ಹಾಗೂ ಆವಿಷ್ಕಾರದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ಬೆಂಗಳೂರಿನಲ್ಲಿ ವಿದ್ಯುತ್ ಚಾಲಿತ ಕಾರುಗಳ ಪೂರಕ ಬೆಳವಣಿಗೆಗೆ ಟೆಸ್ಲಾ ಮಾದರಿ ಸಹಕಾರಿ. ಇದಕ್ಕಾಗಿ ಕಾರಿನ ಟೆಸ್ಟ್ ಡ್ರೈವ್ ಮತ್ತು ಅದರ ಪೂರ್ಣ ಮಾಹಿತಿ ನೀಡುವುದಾಗಿಯೂ ಕಂಪನಿ ಹೇಳಿದೆ.

ಟೆಸ್ಟ್ ಡ್ರೈವ್ಗೆ ಆಸಕ್ತರು ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ಟೆಸ್ಟ್ ಡ್ರೈವ್ ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ಅವಕಾಶವಿದೆ. ಇದಕ್ಕಾಗಿ ಟೆಸ್ಲಾ ಇಂಡಿಯಾ ಅಂತರ್ಜಾಲ ತಾಣದಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು.

2023 ಹಾಗೂ 2024ರಲ್ಲಿ ಅತ್ಯಂತ ಹೆಚ್ಚು ಜನಪ್ರಿಯತೆ ಪಡೆದ ಟೆಸ್ಲಾದ ಮಾದರಿ ‘ವೈ’ಗೆ ಪಂಚ ತಾರಾ ಸುರಕ್ಷತಾ ಮಾನ್ಯತೆ ಲಭಿಸಿದೆ. ಆ ಮೂಲಕ ಸುರಕ್ಷತೆಯಲ್ಲಿ ಹೊಸತೊಂದು ಮೈಲಿಗಲ್ಲು ಸೃಷ್ಟಿಸಿದೆ. 267 ಕಿ.ಮೀ. ದೂರ ಕ್ರಮಿಸಲು ಬೇಕಾದ ಬ್ಯಾಟರಿ ಬ್ಯಾಕ್ಅಪ್ ಅನ್ನು ಕೇವಲ 15 ನಿಮಿಷಗಳಲ್ಲಿ ಚಾರ್ಜ್ ಮಾಡುವ ಸೌಲಭ್ಯ ಇದರದ್ದು. ಭಾರತದಲ್ಲಿ ಸದ್ಯ ಲಭ್ಯವಿರುವ ಮಾಡೆಲ್ ವೈ ಅನ್ನು ಮನೆಯಲ್ಲೇ ಚಾರ್ಜ್ ಮಾಡಲು ಅನುಕೂಲವಾಗುವಂತ ಸಾಧನವನ್ನೂ ಕಂಪನಿ ನೀಡುತ್ತಿದೆ.
.ಟೆಸ್ಲಾ ಶೋ ರೂಂ ಶೀಘ್ರದಲ್ಲೇ ಬೆಂಗಳೂರಿಗೆ!.EV ಕಾರುಗಳ ವ್ಯಾಪಾರ ಪೈಪೋಟಿ: ಅಮೆರಿಕದ ಟೆಸ್ಲಾ ಹಿಂದಿಕ್ಕಿದ ಚೀನಾದ ಬಿವೈಡಿ.
ಮಾಡೆಲ್ ವೈ ಹೀಗಿದೆ...

ಹಿಂಬದಿ ಗಾಲಿಯಿಂದ ಚಲಿಸುವ ಮಾದರಿಯು ಒಂದು ಗರಿಷ್ಠ ಚಾರ್ಜ್ಗೆ 500 ಕಿ.ಮೀ. ದೂರವನ್ನು, ಲಾಂಗ್ ರೇಂಜ್ ಮಾದರಿಯಲ್ಲಿ 661 ಕಿ.ಮೀ. ದೂರ ಕ್ರಮಿಸುವ ಸಾಮರ್ಥ್ಯ ಹೊಂದಿದೆ.

ಗರಿಷ್ಠ ವೇಗ ಎರಡೂ ಮಾದರಿಯಲ್ಲಿ ಪ್ರತಿ ಗಂಟೆಗೆ 201 ಕಿ.ಮೀ.

ಪ್ರತಿ ಗಂಟೆಗೆ 0 ಯಿಂದ 100 ಕಿ.ಮೀ. ವೇಗ ಕ್ರಮಿಸಲು ಕ್ರಮವಾಗಿ 5.9 ಸೆಕೆಂಡ್ ಹಾಗೂ 5.6 ಸೆಕೆಂಡ್ ತೆಗೆದುಕೊಳ್ಳಲಿದೆ.

ಬೆಲೆಯೂ ಕ್ರಮವಾಗಿ ₹59.89 ಲಕ್ಷ ಹಾಗೂ ₹67.89 ಲಕ್ಷ

ಕಾರು ಸಾಲ ಬಡ್ಡಿ ದರ: ಶೇ 8.7ರಿಂದ ಶೇ 11.

ಮುಂಗಡ ಬುಕ್ಕಿಂಗ್ ಮೊತ್ತ ₹22 ಸಾವಿರ

ಅಡ್ಮಿನ್ ಮತ್ತು ಸರ್ವೀಸ್ ಫೀ: ₹50 ಸಾವಿರ

ಬುಕ್ಕಿಂಗ್ ಲಿಂಕ್: https://www.tesla.com/en_IN/modely/design#overview

.ಮುಂಬೈನ ಟೆಸ್ಲಾ ಮಳಿಗೆ: ಸಾರಿಗೆ ಸಚಿವರಿಂದಲೇ ಮೊದಲ ಕಾರು ಖರೀದಿ.Tesla India: ಭಾರತದ ಮಾರುಕಟ್ಟೆ ಪ್ರವೇಶಿಸಿದ ಟೆಸ್ಲಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.